
ಸಿಂಗಪುರ(ಅ.01) ಸ್ಮಾರ್ಟ್ ವಾಚ್ ಈ ವ್ಯಕ್ತಿಯ ಪ್ರಾಣ ಉಳಿಸಿದೆ. 24 ವರ್ಷದ ಮೋಟಾರ್ ಸೈಕಲ್ ಸವಾರನ ಪ್ರಾಣವನ್ನು ಸ್ಮಾರ್ಟ್ ವಾಚ್ ಕಾಪಾಡಿದೆ. ಇದು ಸಿಂಗಪುರದ ಕತೆ.. ಅಪಘಾತವಾದ ನಂತರ ಬೈಕ್ ಸವಾರ ಧರಿಸಿದ್ದ ಸ್ಮಾರ್ಟ್ ವಾಚ್ ಸಂದೇಶ ರವಾನಿಸಿದೆ. ಸೆಪ್ಟೆಂಬರ್ 25 ರಂದು ಮುಹಮ್ಮದ್ ಫಿತ್ರಿ ಅಪಘಾತಕ್ಕೆ ಗುರಿಯಾಗಿದ್ದಾರೆ. ವ್ಯಾನ್‌ಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿದ್ದಾರೆ.
ಬೈಕ್ ಸವಾರ ಆಪಲ್ ವಾಚ್ ಸೀರಿಸ್ 4 ನ್ನು ಧರಿಸಿದ್ದ. ತುರ್ತು ಸಂದರ್ಭದಲ್ಲಿ ತನ್ನಿಂದ ತಾನೆ ಸಂದೇಶ ನೀಡುವ ಫೀಚರ್ ಇದರಲ್ಲಿ ಇತ್ತು. ಅಪಘಾತವಾದ ತಕ್ಷಣ ವಾಚ್ ಆ ಕೆಲಸ ಮಾಡಿದೆ.
ನೆಲಕ್ಕೆ ಕುಸಿದ 78 ವರ್ಷದ ವೃದ್ಧನ ಪ್ರಾಣ ಉಳಿಸಿದ Apple ಸ್ಮಾರ್ಟ್ ವಾಚ್!
ಹಾರ್ಡ್ ಫಾಲ್ ಅಲರ್ಟ್ ನ್ನು ವ್ಯಕ್ತಿ ಓಪನ್ ಮಾಡಿ ಇಟ್ಟುಕೊಂಡಿದ್ದರು. ಅಪಘಾತವಾದ ತಕ್ಷಣ ವಾಚ್ ಸಹಾಯಕ್ಕಾಗಿ ಸಂದೇಶ ಕಳಿಸಿದೆ. ರಾತ್ರಿ 8:20 ಸುಮಾರಿಗೆ ಅಪಘಾತವಾದ ಜಾಗಕ್ಕೆ ತೆರಳಿದ ಅಧಿಕಾರಿಗಳು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಮಾರ್ಟ್ ವಾಚ್ ನೆರವಿನಿಂದ ವ್ಯಕ್ತಿ ತಮ್ಮ ಪ್ರಾಣ ಕಾಪಾಡಿಕೊಂಡಿದ್ದಾರೆ,
ಈ ವರ್ಷದ ಜೂನ್ ನಲ್ಲಿಯೂ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. ನಾರ್ತ್ ಕ್ಯಾಲಿಪೋರ್ನಿಯಾದಲ್ಲಿ 78 ವ್ಯಕ್ತಿ ಕುಸಿದು ಬಿದ್ದಿದ್ದರು.. ಅವರನ್ನು ವಾಚ್ ಸಹಾಯದಿಂದ ಪತ್ತೆ ಮಾಡಲಾಗಿತ್ತು. ವಾಚ್ ಸಂದೇಶ ಕೊಟ್ಟ ಕಾರಣಕ್ಕೆ 25 ವರ್ಷದ ವ್ಯಕ್ತಿ ಆಸ್ಪತ್ರೆಗೆ ಧಾವಿಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸ್ಮಾರ್ಟ್ ವಾಚ್ ಪ್ರಾಣ ಕಾಪಾಡುವ ಕೆಲಸ ಮಾಡುತ್ತಿದೆ.
ದಿಗ್ಗಜ ಆಪಲ್ ತನ್ನ ಉತ್ಪನ್ನಗಳಲ್ಲಿ ಸದಾ ಗುಣಮಟ್ಟ ಕಾಪಾಡಿಕೊಂಡು ಬಂದಿದೆ. ಸೀರಿಸ್ 4 ವಾಚುಗಳಿಗೆ 71,900 ರೂ. ಇದೆ. ಹಲವಾರು ಸಂದರ್ಭದಲ್ಲಿ ಇದು ಪ್ರಾಣ ರಕ್ಷಕನಾಗಿ ಕೆಲಸ ಮಾಡುತ್ತಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.