Vivo X70 Pro, Vivo X70 Pro+ ಸ್ಮಾರ್ಟ್‌ಫೋನ್ ಲಾಂಚ್

By Suvarna News  |  First Published Oct 1, 2021, 6:48 PM IST

ಚೀನಾ(China) ಮೂಲದ ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿಗಳ ಪೈಕಿ ಪ್ರಮುಖವಾಗಿರುವ ವಿವೋ Vivo X70 Pro ಮತ್ತು Vivo X70 Pro+ ಎಂಬೆರಡು ಹೊಸ ಪ್ರೀಮಿಯಂ ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಎರಡೂ ಫೋನ್‌ಗಳು ಸಾಕಷ್ಟು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದ್ದು, ಗಮನ ಸೆಳೆಯುತ್ತಿವೆ.


ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿವೋ(Vivo) ಬ್ರ್ಯಾಂಡ್‌ಗೆ ತನ್ನದೇ ಆದ ಗ್ರಾಹಕ ವರ್ಗ ಸೃಷ್ಟಿಯಾಗಿದೆ. ಪ್ರೀಮಿಯಂ ಮತ್ತು ಮಿಡ್ ರೇಂಜ್ ಸ್ಮಾರ್ಟ್‌ಫೋನ್‌ಗಳ ಮೂಲಕ ವಿವೋ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಕಂಪನಿಯು ಇದೀಗ ಮತ್ತೆರಡು ಹೊಸ ಸ್ಮಾರ್ಟ್‌ಫೋನುಗಳನ್ನು ಲಾಂಚ್ ಮಾಡಿದೆ.

ಒಪ್ಪೋ ರೆನೋ 6 ಪ್ರೋ 5ಜಿ ದೀಪಾವಳಿ ಎಡಿಷನ್ ಸ್ಮಾರ್ಟ್‌ಫೋನ್ ಲಾಂಚ್

Tap to resize

Latest Videos

undefined

ವಿವೋ ಎಕ್ಸ್70 ಪ್ರೋ (Vivo X70 Pro) ಮತ್ತು ವಿವೋ ಎಕ್ಸ್70 ಪ್ರೋ ಪ್ಲಸ್ (Vivo X70 Pro+) – ಈ ಎರಡು ಸ್ಮಾರ್ಟ್‌ಫೋನುಗಳನ್ನು ವಿವೋ(Viv0) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನುಗಳ ವಿಶೇಷ ಏನೆಂದರೆ, ಕಂಪನಿ ತಯಾರಿಸುವ ಮತ್ತು ಕ್ಯಾಮೆರಾ ಅನುಭವವನ್ನು ಹೆಚ್ಚಿಸುವ ಸಾಮರ್ಥ್ಯವನ್ನ ಹೊಂದಿರುವ ಪ್ರೊಫೆಸನಲ್ ಇಮೇಜಿಂಗ್ ಚಿಪ್ ವಿ1 ಹೊಂದಿವೆ. 

Vivo X70 Pro ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು ಮೀಡಿಯಾಟೆಕ್ ಡಿಮ್ನೆಸಿಟಿ (MediaTek Dimensity 1200 SoC) ಮತ್ತು Vivo X70 Pro+ ಸ್ಮಾರ್ಟ್‌ಫೋನಿನಲ್ಲಿ ಕ್ವಾಲಕಾಮ್ ಸ್ನ್ಯಾಪ್ ಡ್ರಾಗನ್ 888 ಪ್ಲಸ್(Qualcomm Snapdragon 888+) ಪ್ರೊಸೆಸರ್‌ಗಳನ್ನು ಅಳವಡಿಸಿದೆ.  

4 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ Vivo X70 Pro ಫೋನ್ ಬೆಲೆ 46,990 ರೂ. ಇದ್ದರೆ, 8 ಜಿಬಿ ರ್ಯಾಮ್ ಮತ್ತು 256 ಜಿಬಿ ವೆರಿಯೆಂಟ್ ಬೆಲೆ 49,990 ರೂ. ಹಾಗೂ 12 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ Vivo X70 Pro ಫೋನ್ ಬೆಲೆ 52,990 ರೂಪಾಯಿಯಾಗಿದೆ. ಇನ್ನು 12 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಹೊಂದಿರುವ Vivo X70 Pro+ ಫೋನ್ ಬೆಲೆ 79,990 ರೂಪಾಯಿಯಾಗಿದೆ.  ವಿವೋ ಪ್ರೋ ಎಕ್ಸ್70 ಪ್ರೋ ಸ್ಮಾರ್ಟ್‌ಫೋನ್ ನಿಮಗೆ Aurora Dawn ಮತ್ತು Cosmic Black ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ. 

ಆಪಲ್‌ನಿಂದ ಹೊಸ ಟೆಕ್ನಾಲಜಿ; ಬಳಕೆದಾರರ ಆತಂಕ, ಖಿನ್ನತೆ ಗುರುತಿಸಲಿದೆ ಐಫೋನ್?

ವಿವೋ ಎಕ್ಸ್70 ಪ್ರೋ ಸ್ಮಾರ್ಟ್ ಫೋನ್, ಫನ್ ಟಚ್ ಓಎಸ್ 12 ಜೊತೆಗೆ ಆಂಡ್ರಾಯ್ಡ್ 11 ಆಧರಿತವಾಗಿದೆ. ಈ ಫೋನು 6.56 ಇಂಚ್ ಫುಲ್ ಎಚ್ಡಿ ಪ್ಲಸ್ ಅಮೋಎಲ್ಇಡಿ ಪ್ರದರ್ಶಕವನ್ನು ಒಳಗೊಂಡಿದೆ. 12 ಜಿಬಿ ರ್ಯಾಮ್‌ಗೆ ಸಂಯೋಜಿತವಾಗಿರುವ MediaTek Dimensity 1200 SoC ಪ್ರೊಸೆಸರ್ ನೀಡಲಾಗಿದೆ. 

ಕ್ಯಾಮೆರಾ ಬಗ್ಗೆ ಹೇಳುವುದಾದರೆ ವಿವೋ ಎಕ್ಸ್70 ಪ್ರೋ ಸ್ಮಾರ್ಟ್‌ಪೋನ್ ಹಿಂಬದಿಯಲ್ಲಿ ಕಂಪನಿಯು ನಾಲ್ಕು ಕ್ಯಾಮೆರಾಗಳನ್ನು ಒದಗಿಸಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಇದು ಅಲ್ಟ್ರಾ ಸೆನ್ಸಿಂಗ್ ಗಿಂಬಲ್ ಟೆಕ್ನಾಲಜಿಗೆ ಸಪೋರ್ಟ್ ಮಾಡುತ್ತದೆ. 12 ಎಂಪಿ, 12 ಎಂಪಿ ಮತ್ತು 8 ಎಂಪಿ ಕ್ಯಾಮೆರಾಗಳಿವೆ. ಇನ್ನು ಫೋನ್ ಮುಂಬದಿಯಲ್ಲಿ ಸೆಲ್ಫಿಗಾಗಿ, ವಿಡಿಯೋ ಚಾಟ್‌ಗಾಗಿ ಕಂಪನಿಯು 32 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ನೀಡಿದೆ. ಈ ಪೋನು 5ಜಿ ಸೇರಿದಂತೆ 4ಜಿ ಎಲ್ಟಿಇ, ವೈಫೈ 6,  ಬ್ಲೂಟೂಥ್ ವಿ 5.2, GPS/ A-GPS/ NavIC, ಇನ್ಫ್ರಾರೆಡ್(ಐಆರ್) ಮತ್ತು ಯುಎಸ್‌ಬಿಐ ಟೈಪ್ ಸಿ ಪೋರ್ಟ್‌ಗಳನ್ನು ಒಳಗೊಂಡಿದೆ. 
 

Vivo X70 Pro+ ಸ್ಮಾರ್ಟ್‌ಪೋನ್ ಕೂಡ ಸಾಕಷ್ಟು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. ಈ ಪೋನು ಕೂಡ ಡುಯಲ್ ಸಿಮ್‌ಗೆ ಬೆಂಬಲ ನೀಡುತ್ತದೆ. ಫನ್ ಟಚ್ ಓಎಸ್ 12(Funtouch OS 12) ಆಧರಿತ ಆಂಡ್ರಾಯ್ಡ್ 11 ಮೇಲೆ ರನ್ ಆಗುತ್ತದೆ. 6.78 ಇಂಚ್ WQHD+ E5 AMOLED ಪ್ರದರ್ಶಕವನ್ನು ಒಳಗೊಂಡಿದೆ. 12 ಜಿಬಿ ರ್ಯಾಮ್ ಸಂಯೋಜಿತ Qualcomm Snapdragon 888+ SoC ಪ್ರೊಸೆಸರ್ ಕೂಡ ಇದೆ. 

ಕೈಗೆಟುಕುವ ದರದ ರಿಯಲ್‌ಮಿ ಸಿ25ವೈ ಸ್ಮಾರ್ಟ್‌ಫೋನ್ ಲಾಂಚ್

ಫೋನಿನ ಹಿಂಬದಿಯಲ್ಲಿ ಕಂಪನಿಯು ನಾಲ್ಕು ಕ್ಯಾಮೆರಾಗಳನ್ನು ನೀಡಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 48 ಮೆಗಾಪಿ ಪಿಕ್ಸೆಲ್ ಕ್ಯಾಮೆರಾವಾಗಿದೆ. ಇನ್ನು ಫೋನ್ ಮುಂಬದಿಯಲ್ಲಿ ಕಂಪನಿಯು ಸೆಲ್ಫಿಗಾಗಿ 32 ಎಂಪಿ ಕ್ಯಾಮೆರಾ ನೀಡಿದೆ. ಈ ಫೋನಿನಲ್ಲಿ ನೀವು 4,500mAh ಬ್ಯಾಟರಿ ನೋಡಬಹುದು. ಇದು 55ಡಬ್ಲ್ಯೂ ವೈರ್ಡ್ ಫ್ಲ್ಯಾಶ್ ಚಾರ್ಜ್‌ಗೆ ಸಪೋರ್ಟ್ ಮಾಡುತ್ತದೆ. 

click me!