ಒಪ್ಪೋ ರೆನೋ 6 ಪ್ರೋ 5ಜಿ ದೀಪಾವಳಿ ಎಡಿಷನ್ ಸ್ಮಾರ್ಟ್‌ಫೋನ್ ಲಾಂಚ್

By Suvarna News  |  First Published Sep 28, 2021, 3:53 PM IST

ಪ್ರಮುಖ ಸ್ಮಾರ್ಟ್‌ಫೋನ್ ಉತ್ಪಾದನೆಯ ಕಂಪನಿಯಾಗಿರುವ ಒಪ್ಪೋ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಒಪ್ಪೋ ಎಫ್19ಎಸ್, ರೆನೋ 6 ಪ್ರೋ 5ಜಿ ದೀಪಾವಳಿ ಎಡಿಷನ್ ಹಾಗೂ ಎನ್ಕೋ ಇಯರ್‌ಬಡ್ಸ್ ಬಿಡುಗಡೆಯಾಗಿವೆ. ಈ ಫೋನುಗಳು ಸಾಕಷ್ಟು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿವೆ.


ಭಾರತದಲ್ಲೀಗ ಹಬ್ಬಗಳ ಋತು. ಸಹಜವಾಗಿಯೇ ಖರೀದಿ ಭರಾಟೆ ಜೋರಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ತಮ್ಮ ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದೇ ರೀತಿ, ಸ್ಮಾರ್ಟ್ ಫೋನ ತಯಾರಿಕಾ ಕಂಪನಿಗಳ ಪೈಕಿ ಪ್ರಮುಖ ಕಂಪನಿಯಾಗಿರುವ ಚೀನಾ ಮೂಲದ ಒಪ್ಪೋ(Oppo) ಕೂಡ ಈ ಹಬ್ಬಕ್ಕೆ ಹೊಸ ಸ್ಮಾರ್ಟ್ ಫೋನ್‌(Smartphone)ಗಳನ್ನು ಲಾಂಚ್ ಮಾಡಿದೆ. 

ಆಂಡ್ರಾಯ್ಡ್‌ಗಿಂತ ಆಪಲ್ ಫೋನುಗಳು ಯಾಕೆ ಬೆಸ್ಟು?

Tap to resize

Latest Videos

undefined

ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಕಂಪನಿಯು ಒಪ್ಪೋ ಎಫ್9ಎಸ್(Oppo F19s), ಒಪ್ಪೋ ರೆನೋ 6 ಪ್ರೋ 5ಜಿ ದೀಪಾವಳಿ ಎಡಿಷನ್(Oppo Reno 6 Pro 5G Diwali Edition) ಮತ್ತು ಒಪ್ಪೋ ಎನ್ಕೋ ಬಡ್ಸ್ ಟ್ರೂ ವೈರ್‌ಲೆಸ್ ಸ್ಟೇರಿಯೋ(Oppo Enco Buds true wireless stereo (TWS)) ಇಯರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೋನುಗಳಲ್ಲಿ ನೀವು ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್(Snapdragon 662 SoC), 6ಜಿಬಿ ರ್ಯಾಮ್ ಇರಲಿದೆ. ಒಪ್ಪೋ ರೆನೋ ಪ್ರೋ 5ಜಿ ದೀಪಾವಳಿ ಎಡಿಷನ್ ಸ್ಮಾರ್ಟ್‌ಫೋನ್ ಕೂಡ ಒಪ್ಪೋ ರೆನೋ 6 ಪ್ರೋ 5ಜಿ ರೀತಿಯಲ್ಲೇ ಇದೆ. ಆದರೆ ಬಣ್ಣದಲ್ಲಿ ಮಾತ್ರ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಹಾಗೆಯೇ ಒಪ್ಪೋ ಎನ್ಕೋ ಬಡ್ಸ್ ಹೊಸ  ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ.

ಅದೇ ರೀತಿ, ಒಪ್ಪೋ ರೆನೋ ಪ್ರೋ 5ಜಿ ದೀಪಾವಳಿ ಎಡಿಷನ್ ಫೋನ್ ಬೆಲೆ 41,990 ರೂಪಾಯಿಯಾಗಿದ್ದು, ಬಳಕೆದಾರರಿಗೆ ಈ ಫೋನು ಮೆಜೆಸ್ಟಿಕ್ ಗೋಲ್ಡ್ ಬಣ್ಣದಲ್ಲಿ ಸಿಗಲಿದೆ. ಈ ಫೋನ್ 12 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಹೊಂದಿದೆ. ನೀವು ಈ ಫೋನುಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್  ಹಾಗೂ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣಗಳ ಮೂಲಕವೂ ಖರೀದಿಸಬಹುದಾಗಿದೆ.

ಒಪ್ಪೋ ಎನ್ಕೋ ಬಡ್ಸ್ ಬೆಲೆ 1,799 ರೂಪಾಯಿ ಇದದೆ. ಈ  ಬಡ್ಸ್ ಕೂಡ ನಿಮಗೆ ನೀಲಿ ಬಣ್ಣದಲ್ಲಿ ಸಿಗಲಿದೆ. ಈ ಮೊದಲು ಬಿಳಿ ಬಣ್ಣಗಳಲ್ಲಿ ಈ ಬಡ್ಸ್ ಲಾಂಚ್ ಆಗಿದ್ದವು. ಭಾರತೀಯ ಮಾರುಕಟ್ಟೆಯಲ್ಲಿ ಹೊಸದಾಗಿ ಲಾಂಚ್ ಆಗಿರುವ ಒಪ್ಪೋ ಎಫ್19ಎಸ್ ಸ್ಮಾರ್ಟ್‌ಫೋನ್ ಬೆಲೆ 19,990ರಿಂದ ಆರಂಭವಾಗುತ್ತದೆ. ಗ್ಲೋವಿಂಗ್ ಬ್ಲ್ಯಾಕ್ ಮತ್ತು ಗ್ಲೋವಿಂಗ್ ಗೋಲ್ಡ್  ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. 

ಕೈಗೆಟುಕುವ ದರದ ರಿಯಲ್‌ಮಿ ಸಿ25ವೈ ಸ್ಮಾರ್ಟ್‌ಫೋನ್ ಲಾಂಚ್

ಒಪ್ಪೋ ಎಫ್ 19ಎಸ್ ಸ್ಮಾರ್ಟ್‌ಫೋನ್ ಹಲವು ವಿಶೇಷತೆಗಳನ್ನು  ಹೊಂದಿದೆ. ಈ ಫೋನು ಆಂಡ್ರಾಯ್ಡ್ 11 ಆಧರಿತ ಕಲರ್‌ಒಎಸ್ 11.1 ಮೇಲೆ ರನ್ ಆಗುತ್ತದೆ. 6.43 ಇಂಚ್ ಫುಲ್ ಎಚ್‌ಡಿ ಪ್ಲಸ್(6.43-inch full-HD+) ಅಮೋಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. 6 ಜಿಬಿ ರ್ಯಾಮ್‌ನೊಂದಿಗೆ ಸಂಯೋಜನೆಗೊಂಡಿರುವ ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್ ಒಳಗೊಂಡಿದೆ. ವಿಶೇಷ ಎಂದರೆ, ಈ ಫೋನು ರ್ಯಾಮ್ ವಿಸ್ತರಣೆಗೆ ಸಪೋರ್ಟ್ ಮಾಡುತ್ತದೆ. ಗ್ರಾಹಕರು ರ್ಯಾಮ್ ಸಾಮರ್ಥ್ಯವನ್ನು 11 ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದು.

ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಒಪ್ಪೋ ರೆನೋ 6 ಪ್ರೋ 5ಜಿ ದೀಪಾವಳಿ ಎಡಿಷನ್(Oppo Reno 6 Pro 5G) ಕೂಡ ಸಾಕಷ್ಟು ಫೀಚರ್‌ಗಗಳನ್ನು ಒಳಗೊಂಡಿದೆ. ಈ ಫೋನು ಕೂಡ ಡುಯಲ್ ಸಿಮ್‌ಗೆ ಸಪೋರ್ಟ್ ಮಾಡುತ್ತದೆ. ಆಂಡ್ರಾಯ್ಡ್ 11 ಆಧರಿತ ಕಲರ್ಸ್ ಒಎಸ್ 11.1 ಆಪರೇಟಿಂಗ್ ಸಾಫ್ಟ್‌ವೇರ್ ಮೇಲೆ ರನ್ ಆಗುತ್ತದೆ. 

ಈ ಫೋನು 6.55 ಇಂಚ್ ಫುಲ್ ಎಚ್‌ಡಿ ಪ್ಲಸ್ ಅಮೋಎಲ್ಇಡಿ ಪ್ರದರ್ಶಕವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು 12 ಜಿಬಿ ರ್ಯಾಮ್ ಸಂಯೋಜಿತ ಮೀಡಿಯಾಟೆಕ್ ಡಿಮೆನ್ಸಿಟಿ 1200 (MediaTek Dimensity 1200 SoC) ಪ್ರೊಸೆಸರ್ ಅನ್ನು ಅಳವಡಿಸಿದೆ. 256 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಈ ಫೋನು ಹೊಂದಿದೆ. 

ಆಪಲ್‌ನಿಂದ ಹೊಸ ಟೆಕ್ನಾಲಜಿ; ಬಳಕೆದಾರರ ಆತಂಕ, ಖಿನ್ನತೆ ಗುರುತಿಸಲಿದೆ ಐಫೋನ್?

ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನೀವು ಕ್ವಾಡ್ ರಿಯರ್ ಕ್ಯಾಮೆರಾಗಳನ್ನು ಕಾಣಬಹುದು.  ಈ ಪೈಕಿ ಮೊದಲನೆ ಕ್ಯಾಮೆರಾ(camera) 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. 32 ಎಂಪಿ ಸೆಲ್ಫಿ ಕ್ಯಾಮೆರಾವನ್ನು ಕಂಪನಿಯು ಒದಗಿಸಿದೆ. 4,500 ಎಂಎಎಚ್(4,500mAh) ಸಾಮರ್ಥ್ಯದ ಬ್ಯಾಟರಿ ಕೂಡ ಇದೆ. ಹೀಗೆ ಹಲವಾರು ವಿಶೇಷತೆಗಳನ್ನು ನೀವು ಕಾಣಬಹುದು.

click me!