BJP ವೆಬ್‌ಸೈಟನ್ನೇ ಹ್ಯಾಕ್ ಮಾಡಿದ ಹ್ಯಾಕರ್ಸ್?

By Web DeskFirst Published Mar 5, 2019, 12:43 PM IST
Highlights

ಬಿಜೆಪಿ ವೆಬ್‌ಸೈಟನ್ನು ಹ್ಯಾಕ್ ಮಾಡಿದ ಅನಾಮಿಕ ಹ್ಯಾಕರ್ಸ್ | ಅಸಂಬದ್ಧ ವಿಷಯಗಳನ್ನು ಪೋಸ್ಟ್ ಮಾಡಿದ ಹ್ಯಾಕರ್ಸ್! 

ನವದೆಹಲಿ:  ಹ್ಯಾಕ್ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ BJPಯ ಅಧಿಕೃತ http://www.bjp.org/ ವೆಬ್‌ಸೈಟನ್ನು ಸ್ಥಗಿತಗೊಳಿಸಲಾಗಿದೆ.

ಮಂಗಳವಾರ [ಮಾ.05]ರಂದು ವೆಬ್‌ಸೈಟನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗಿದ್ದು,  ಯಾವುದೇ ಹ್ಯಾಕರ್ಸ್ ಈವರೆಗೆ ಈ ಕೃತ್ಯದ ಹೊಣೆ ಹೊತ್ತಿಲ್ಲ.

ಹ್ಯಾಕ್ ಆಗಿದೆ ಎನ್ನಲಾದ BJP ವೆಬ್ ಸೈಟ್‌ನ ಸ್ಕ್ರೀನ್ ಶಾಟ್‌ಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿವೆ. BJPಯು  ಭಾರತೀಯರನ್ನು ಮೂರ್ಖರಾಗಿಸುತ್ತಿದೆ ಎಂಬಿತ್ಯಾದಿ ಬೈಗುಳವುಳ್ಳ, ನರೇಂದ್ರ ಮೋದಿ ಮತ್ತು ಜರ್ಮನಿಯ ಎಂಜೆಲಾ ಮೆರ್ಕೆಲ್ ಜೊತೆಗಿರುವ ಜಿಫ್ ಫೈಲ್ ಗಳು ಹಾಗೂ ಇನ್ನಿತರ ಅಸಂಬದ್ಧ ವಿಷಯಗಳನ್ನು ಆ ಸ್ಕ್ರೀನ್ ಶಾಟ್‌ಗಳಲ್ಲಿವೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಮೌನವಾಗುತ್ತಾ ಟ್ವಿಟರ್?

ಈಗ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ‘We'll Be Back Soon!'  ಎಂಬ ಸಂದೇಶವನ್ನು ಹಾಕಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ವೆಬ್‌ಸೈಟೇ ಅಸುರಕ್ಷಿತ!

click me!