ಅಮೆರಿಕದ ಓಪನ್ ಎಐ ಸಂಸ್ಥೆ ಅಭಿವೃದ್ಧಿಪಡಿಸಿದ ಹೊಸ ಕೃತಕ ಬುದ್ಧಿಮತ್ತೆ ವ್ಯವಸ್ಥೆ ಚಾಟ್ ಜಿಪಿಟಿ ಬಗ್ಗೆ ಹೊಸಬ್ಬರಿಗೆ ತರಬೇತಿ ನೀಡಿ 23 ವರ್ಷದ ಯುವಕನೋರ್ವ 3 ತಿಂಗಳಲ್ಲಿ ಬರೋಬ್ಬರಿ28 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾನೆ.
ಬೆಂಗಳೂರು: ಅಮೆರಿಕದ ಓಪನ್ ಎಐ ಸಂಸ್ಥೆ ಅಭಿವೃದ್ಧಿಪಡಿಸಿದ ಹೊಸ ಕೃತಕ ಬುದ್ಧಿಮತ್ತೆ ವ್ಯವಸ್ಥೆ ಚಾಟ್ ಜಿಪಿಟಿ ಬಗ್ಗೆ ಹೊಸಬ್ಬರಿಗೆ ತರಬೇತಿ ನೀಡಿ 23 ವರ್ಷದ ಯುವಕನೋರ್ವ 3 ತಿಂಗಳಲ್ಲಿ ಬರೋಬ್ಬರಿ28 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾನೆ. ಚಾಟ್ ಜಿಪಿಟಿ ಪ್ರಪಂಚದಾದ್ಯಂತ ಈಗ ಹೊಸ ಅಲೆಯೊಂದನ್ನು ಸೃಷ್ಟಿಸಿದೆ. ಈ ಮಧ್ಯೆ ಈ ಬಗ್ಗೆ ಹೊಸಬ್ಬರಿಗೆ ತರಬೇತಿ ನೀಡಿದ 23 ವರ್ಷದ ಯುವಕ ಕೇವಲ ಮೂರು ತಿಂಗಳಲ್ಲಿ 28 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾನೆ.
ಲಾನ್ಸ್ ಜಂಕ್ (Lance Junck) ಎಂಬಾತನೇ ಹೀಗೆ ಚಾಟ್ ಜಿಪಿಟಿ ಮಾಸ್ಟರ್ ಕ್ಲಾಸ್‌ನಲ್ಲಿ ಹೊಸಬರಿಗೆ ತರಬೇತಿ ನೀಡಿ ಭರ್ಜರಿಯಾಗಿ ಸಂಪಾದನೆ ಮಾಡಿದ ಯುವಕ. ಚಾಟ್ ಜಿಪಿಟಿ ಮಾಸ್ಟರ್‌ಕ್ಲಾಸ್ : ಎ ಕಂಪ್ಲೀಟ್ ಚಾಟ್‌ಜಿಪಿಟಿ ಗೈಡ್ ಫಾರ್ ಬಿಗಿನರ್ ಎಂಬ ಈ ಕೋರ್ಸ್‌ನಲ್ಲಿ ಹೊಸಬ್ಬರಿಗೆ ಪಾಠ ಮಾಡಲು ಈತ ತೆಗೆದುಕೊಂಡ ನಗದು 34,913 ಡಾಲರ್ ಅಂದರೆ (28.69 ಲಕ್ಷ ರೂಪಾಯಿಗಳು) ಬ್ಯುಸಿನೆಸ್ ಇನ್ಸೈಡರ್ ಈ ಬಗ್ಗೆ ವರದಿ ಮಾಡಿದೆ.
undefined
ಲಾನ್ಸ್ ಜಂಕ್ ಮೊದಲ ಬಾರಿ ಚಾಟ್‌ಜಿಪಿಟಿಯನ್ನು ನವೆಂಬರ್‌ನಲ್ಲಿ ಬಳಸಿದ ನಂತರ ಅದರಿಂದ ಪ್ರಭಾವಿತರಾದ ಅವರು ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೇಗೆ ಬಳಸಬೇಕೆಂಬ ಬಗ್ಗೆ ಜನರಿಗೆ ಕಲಿಸುವ ಬಗ್ಗೆ ಆಸಕ್ತರಾದರು.
AI ಚಾಟ್‌ಬಾಟ್‌ನಲ್ಲಿ ಫ್ಲರ್ಟ್ ಮಾಡೋಕೆ ಹೋಗಿ ಪೇಚಿಗೆ ಸಿಲುಕಿದ, ಯುವತಿ ಹೇಳಿದ್ದೇನು?
ಇದೊಂದು ನಂಬಲಸಾಧ್ಯವಾದ ಕಲಿಕಾ ಶಕ್ತಿ ಇದೆ. ಆದರೆ ಜನರಿಗೆ ಚಾಟ್ ಜಿಪಿಟಿ ಬಗ್ಗೆ ಸ್ವಲ್ಪಮಟ್ಟಿನ ಹೆದರಿಕೆ ಇದೆ ಎಂದು ನಾನು ಭಾವಿಸಿದ್ದೆ. ಹೀಗಾಗಿ ನಾನು ಜನರಿಗೆ ಈ ಭಯದಿಂದ ದೂರಾಗಿ ಉತ್ತೇಜನ ನೀಡಲು ಪ್ರಯತ್ನಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಚಾಟ್‌ಜಿಪಿಟಿಯೊಂದಿಗೆ ಗಂಟೆಗಳನ್ನು ವ್ಯಯಿಸುವ ಹೊರತಾಗಿ ಲ್ಯಾನ್ಸ್ ಜಂಕ್ ಆ ಬಗ್ಗೆ ಇಂಟರ್‌ನೆಟ್‌ನಲ್ಲಿ ಇರುವ ಎಲ್ಲಾ ವಿಚಾರಗಳನ್ನು ಓದಿದರು. ಇವರು ಮಾಡಿದ ಚಾಟ್‌ಜಿಪಿಟಿ ಮಾಸ್ಟರ್‌ಕ್ಲಾಸ್‌ನಲ್ಲಿ 15,800 ವಿದ್ಯಾರ್ಥಿಗಳಿದ್ದರು.
ಅಲ್ಲದೇ ಈ ಕೋರ್ಸ್ 7 ಗಂಟೆಗೂ ಅಧಿಕವಾಗಿದ್ದು, ಒಟ್ಟು 50 ಉಪನ್ಯಾಸಗಳನ್ನು ಹೊಂದಿತ್ತು. ಲ್ಯಾನ್ಸ್ ಈ ಕೋರ್ಸ್‌ನ್ನು ರೆಕಾರ್ಡ್ ಮಾಡಲು ಮೂರು ವಾರಗಳನ್ನು ತೆಗೆದುಕೊಂಡಿದ್ದರು. ಈ ಮಾಸ್ಟರ್‌ಕ್ಲಾಸ್ ಮೊದಲ ಚಾಟ್ ಜಿಪಿಟಿ ಪ್ರಾಂಪ್ಟ್ ಅನ್ನು ಬರೆಯುವುದರೊಂದಿಗೆ ಪ್ರಾರಂಭವಾಗುತ್ತದೆ ಮತ್ತು ನಂತರ ವ್ಯವಹಾರಕ್ಕೆ ಸಂಬಂಧಿಸಿದಂತೆ, ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ನಿರ್ದಿಷ್ಟ ಬಳಕೆಗಳ ಕುರಿತು ಹೇಳುತ್ತದೆ.
ಚಾಟ್‌ಜಿಪಿಟಿಯಂತಹ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಭಿವೃದ್ಧಿ ಸ್ಥಗಿತಕ್ಕೆ ಜಾಗತಿಕ ಗಣ್ಯರ ಕೂಗು
ವೆಬ್‌ಸೈಟ್ ಅನ್ನು ಹೇಗೆ ನಿರ್ಮಿಸುವುದು ಮತ್ತು ಚಾಟ್‌ಜಿಪಿಟಿಯನ್ನು (ChatGPT) ಬಳಸಿಕೊಂಡು ಲ್ಯಾಂಡಿಂಗ್ ಪೇಜ್‌ಗಳು, ಮಾರಾಟದ ಫನಲ್‌ಗಳನ್ನು ಹೇಗೆ ರಚಿಸುವುದು ಮತ್ತು ವೈಯಕ್ತೀಕರಿಸಿದ, ಲಾಭದಾಯಕವಾದ ಮತ್ತು ತೊಡಗಿಸಿಕೊಳ್ಳುವ ಯುಟ್ಯೂಬ್ ವಿಷಯವನ್ನು ರಚಿಸಲು ಚಾಟ್‌ಜಿಪಿಟಿಯನ್ನು ಬಳಸುವ ತಂತ್ರಗಳನ್ನು ಕೋರ್ಸ್ ಕಲಿಸುತ್ತದೆ. ಅಲ್ಲದೇ ಡಲ್ಲೆಯನ್ನು ಬಳಸಿಕೊಂಡು ಉತ್ತಮ ಗುಣಮಟ್ಟದ ಚಿತ್ರಗಳನ್ನು ಹೇಗೆ ರಚಿಸುವುದು ಎಂಬುದನ್ನು ಸಹ ಇದು ಕಲಿಸುತ್ತದೆ.
ಈ ಕೋರ್ಸ್‌ನಲ್ಲಿ ಅಮೆರಿಕಾ, ಭಾರತ, ಜಪಾನ್ (Japan), ಕೆನಡಾ (Canada) ಮತ್ತು ಹಲವಾರು ಇತರ ದೇಶಗಳಿಂದ ಬಂದ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ಕೋರ್ಸ್ 4.5-ಸ್ಟಾರ್ ರೇಟಿಂಗ್ ಅನ್ನು ಹೊಂದಿದೆ. ಮುಂದೆ ಈ ಕೋರ್ಸ್‌ಗೆ ಮೈಕ್ರೋಸಾಫ್ಟ್‌ನ (Microsoft) ಹೊಸ ಬಿಂಗ್ ಮತ್ತು ಗೂಗಲ್‌ನ (Google) ಬಾರ್ಡ್(Bard) ಅನ್ನು ಸಾರ್ವಜನಿಕರಿಗೆ ಅಧಿಕೃತವಾಗಿ ಪ್ರಾರಂಭಿಸಿದಾಗ ಅವುಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಉಪನ್ಯಾಸಗಳನ್ನು ಸೇರಿಸಲು ಲ್ಯಾನ್ಸ್ ಚಿಂತನೆ ನಡೆಸಿದ್ದಾರೆ.