ಗೂಗಲ್‌ ಸರ್ಚ್‌ನಲ್ಲಿ ಕೃತಕ ಬುದ್ಧಿಮತ್ತೆ ಸೇರ್ಪಡೆ; ಚಾಟ್‌ಬಾಟ್‌ನಿಂದ ಅವಕಾಶ ಸೃಷ್ಟಿ: ಸುಂದರ್ ಪಿಚೈ

By Kannadaprabha News  |  First Published Apr 8, 2023, 10:16 AM IST

ಕೃತಕ ಬುದ್ಧಿಮತ್ತೆಯನ್ನು ಗೂಗಲ್‌ನಲ್ಲಿ ಅಳವಡಿಸುವುದರಿಂದ ವಿವಿಧ ವಿಷಯಗಳ ಬಗ್ಗೆ ಜನರು ಪ್ರಶ್ನೆ ಕೇಳಿದಾಗ ಗೂಗಲ್‌ಗೆ ಉತ್ತರಿಸುವುದು ಸುಲಭವಾಗಲಿದೆ ಎಂದು ಸುಂದರ್‌ ಪಿಚೈ  ಹೇಳಿದ್ದಾರೆ. ಇದೇ ವೇಳೆ ಚಾಟ್‌ಬಾಟ್‌ನಿಂದ ಗೂಗಲ್‌ಗೆ ತೊಂದರೆ ಉಂಟಾಗಿದೆ ಎಂಬ ಹೇಳಿಕೆಯನ್ನು ತಿರಸ್ಕರಿಸಿರುವ ಸುಂದರ್‌ ಪಿಚೈ, ಇದು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು  ಹೇಳಿದ್ದಾರೆ.


ನ್ಯೂಯಾರ್ಕ್ (ಏಪ್ರಿಲ್ 8, 2023): ಟೆಕ್ನಾಲಜಿ ಕ್ಷೇತ್ರದ ದೈತ್ಯ ಗೂಗಲ್‌ ತನ್ನ ಸರ್ಚ್‌ ಎಂಜಿನ್‌ನಲ್ಲಿ ‘ಕೃತಕ ಬುದ್ಧಿಮತ್ತೆ’ಯನ್ನು (ಎಐ) ಸೇರಿಸಲು ನಿರ್ಧರಿಸಿದೆ ಎಂದು ಗೂಗಲ್‌ನ ಸಿಇಒ ಸುಂದರ್‌ ಪಿಚೈ ಹೇಳಿದ್ದಾರೆ. ಚಾಟ್‌ ಜಿಪಿಟಿಯಿಂದ ಗೂಗಲ್‌ಗೆ ಉಂಟಾಗಿರುವ ಸ್ಪರ್ಧೆಯನ್ನು ಎದುರಿಸಲು ಈ ನಿರ್ಧಾರ ಕೈಗೊಂಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕೃತಕ ಬುದ್ಧಿಮತ್ತೆಯನ್ನು (Artificial Intelligence) ಗೂಗಲ್‌ನಲ್ಲಿ (Google) ಅಳವಡಿಸುವುದರಿಂದ ವಿವಿಧ ವಿಷಯಗಳ ಬಗ್ಗೆ ಜನರು ಪ್ರಶ್ನೆ ಕೇಳಿದಾಗ ಗೂಗಲ್‌ಗೆ ಉತ್ತರಿಸುವುದು ಸುಲಭವಾಗಲಿದೆ ಎಂದು ಸುಂದರ್‌ ಪಿಚೈ (Sundar Pichai) ಹೇಳಿದ್ದಾರೆ. ಇದೇ ವೇಳೆ ಚಾಟ್‌ಬಾಟ್‌ನಿಂದ (ChatBot) ಗೂಗಲ್‌ಗೆ ತೊಂದರೆ ಉಂಟಾಗಿದೆ ಎಂಬ ಹೇಳಿಕೆಯನ್ನು ತಿರಸ್ಕರಿಸಿರುವ ಸುಂದರ್‌ ಪಿಚೈ, ಇದು ಅವಕಾಶಗಳನ್ನು ಸೃಷ್ಟಿಸುತ್ತದೆ. ಅದು ಹಿಂದೆ ಇದ್ದುದ್ದಕ್ಕಿಂತಲೂ ದೊಡ್ಡ ಅವಕಾಶವನ್ನು ಒದಗಿಸಲಿದೆ ಎಂದು ಅವರು ಹೇಳಿದ್ದಾರೆ.

Latest Videos

undefined

ಇದನ್ನು ಓದಿ: ಚಾಟ್‌ ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ‘ಬರ್ಡ್‌’ ಶುರು; ಶೀಘ್ರವೇ ಹೊಸ ಸೇವೆ ಆರಂಭ: ಸುಂದರ್ ಪಿಚೈ

ಮೈಕ್ರೋಸಾಫ್ಟ್ ಸಿಇಒ (Microsoft CEO) ಸತ್ಯ ನಾಡೆಲ್ಲಾ (Satya Nadella) ಕಂಪನಿಯ ಹೊಸ AI-ಚಾಲಿತ ಸರ್ಚ್ ಇಂಜಿನ್ (Search Engine) ಅನ್ನು ಬಿಡುಗಡೆ ಮಾಡಿದ ನಂತರ, ಹೊಸ ಬೆಳವಣಿಗೆಗಳು ವೈಯಕ್ತಿಕ ಕಂಪ್ಯೂಟರ್‌ಗಳು (Personal Computer) ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿನ (Cloud Computing) ಹಿಂದಿನ ಪ್ರಗತಿಯಂತೆ ಸರ್ಚ್ ಸೇರಿದಂತೆ ತಮಗೆ ತಿಳಿದಿರುವ "ಪ್ರತಿ ಸಾಫ್ಟ್‌ವೇರ್ ವರ್ಗವನ್ನು ಮರುರೂಪಿಸುತ್ತದೆ" ಎಂದು ಹೇಳಿದ್ದಾರೆ.

ಈ ಸಂಬಂಧ ಅಂತಾರಾಷ್ಟ್ರೀಯ ಮಾದ್ಯಮ ವಾಲ್‌ ಸ್ಟ್ರೀಟ್‌ ಜರ್ನಲ್‌ಗೆ ಮಾಹಿತಿ ನಿಡಿದ ಸುಂದರ್‌ ಪಿಚೈ "ಈ ತಂತ್ರಜ್ಞಾನಗಳ ಅಳವಡಿಕೆಯ ಸುತ್ತಲಿನ ಗ್ರಾಹಕರ ಉತ್ಸಾಹ, ಮತ್ತು ಅದರಲ್ಲಿ ಕೆಲವು ಆಹ್ಲಾದಕರವಾದ ಆಶ್ಚರ್ಯಕರವಾಗಿದೆ" ಗೂಗಲ್‌ನ ಚಾಟ್‌ಬಾಟ್ ಬರ್ಡ್‌ಗೆ ಸಂಬಂಧಿಸಿದಂತೆ ಇನ್‌ಕ್ರೆಡಿಬಲ್‌ ಎಂದು ಭಾರತೀಯ ಮೂಲದ ಗೂಗಲ್‌ ಹಾಗೂ ಆಲ್ಫಬೆಟ್ ಸಿಇಒ ಸುಂದರ್ ಪಿಚೈ ಹೇಳಿದರು. 

ಇದನ್ನೂ ಓದಿ: AI ಬಗ್ಗೆ ಇರಲಿ ಎಚ್ಚರ: ಚಾಟ್‌ಜಿಪಿಟಿಯಂತಹ ಆ್ಯಪ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ..!

ಇತ್ತೀಚಿಗೆ ಚಾಟ್‌ ಜಿಪಿಟಿಯನ್ನು ಮೈಕ್ರೋಸಾಫ್ಟ್‌ ತನ್ನ ಸರ್ಚ್‌ ಎಂಜಿನ್‌ ಆದಂತಹ ಬಿಂಗ್‌ನಲ್ಲಿ ಅಳವಡಿಸಿತ್ತು.

ಇದನ್ನೂ ಓದಿ: ಮೊದಲ ಬಾರಿಗೆ ಕೋರ್ಟಲ್ಲಿ ChatGPT ಬಳಕೆ: ಜಾಮೀನು ತೀರ್ಪಿನ ವೇಳೆ ಕೃತಕ ಬುದ್ಧಿಮತ್ತೆ ಅಭಿಪ್ರಾಯ ಪಡೆದ ಹೈಕೋರ್ಟ್‌

click me!