ಆಂಧ್ರಪ್ರದೇಶದ ಅನಂತಪುರದಲ್ಲಿ 15 'ಭೂಮಿಯ ಅಪರೂಪದ ಅಂಶ' ಪತ್ತೆ ಮಾಡಿದ ವಿಜ್ಞಾನಿಗಳು!

By Santosh Naik  |  First Published Apr 8, 2023, 5:45 PM IST

ಎನ್‌ಜಿಆರ್‌ಐ ವಿಜ್ಞಾನಿ ಪಿ.ವಿ.ಸುಂದರ್‌ರಾಜು ಈ ಕುರಿತಾಗಿ ಮಾತನಾಡಿದ್ದು, ರೆಡ್ಡಿಪಲ್ಲೆ ಮತ್ತು ಪೆದ್ದವಾಡಗೂರು ಗ್ರಾಮಗಳಲ್ಲಿ ವಿವಿಧ ಆಕಾರಗಳ ಜಿರ್ಕಾನ್‌ ಕಂಡುಬಂದಿದೆ. ಭೂಮಿಯ ಅಪರೂಪದ ಅಂಶ (ರೇರ್‌ ಅರ್ತ್‌ ಎಲಿಮೆಂಟ್ಸ್‌) ವಿವಿಧ ಎಲೆಕ್ಟ್ರಾನಿಕ್‌ ಉತ್ಪನಗಳಲ್ಲಿ ಬಳಕೆ ಮಾಡಲಾಗುತ್ತದೆ.
 


ನವದೆಹಲಿ (ಏ.8): ಹೈದರಾಬಾದ್ ಮೂಲದ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ 15 ಅಪರೂಪದ ಭೂಮಿಯ ಅಂಶಗಳ (REE) ದೊಡ್ಡ ನಿಕ್ಷೇಪಗಳನ್ನು ಕಂಡುಹಿಡಿದಿದೆ. ಲ್ಯಾಂಥನೈಡ್ ಸರಣಿಯ ಆರ್‌ಇಇ, ಸೆಲ್‌ಫೋನ್‌ಗಳು, ಟೆಲಿವಿಷನ್‌ಗಳು, ಕಂಪ್ಯೂಟರ್‌ಗಳು ಮತ್ತು ಆಟೋಮೊಬೈಲ್‌ಗಳಂತಹ ಅನೇಕ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ದಿನನಿತ್ಯದ ಮತ್ತು ವಿವಿಧ ಕೈಗಾರಿಕಾ ಅಪ್ಲಿಕೇಶನ್‌ಗಳ ನಿರ್ಮಾಣದಲ್ಲಿ ನಿರ್ಣಾಯಕ ಅಂಶಗಳಾಗಿವೆ. ಎನ್‌ಜಿಆರ್‌ಐ ವಿಜ್ಞಾನಿಗಳು ಸೈನೈಟ್‌ಗಳಂತಹ ಸಾಂಪ್ರದಾಯಿಕವಲ್ಲದ ಬಂಡೆಗಳ ಸಮೀಕ್ಷೆಯನ್ನು ನಡೆಸುತ್ತಿದ್ದ ವೇಳೆ ಲ್ಯಾಂಥನೈಡ್ ಸರಣಿಯಲ್ಲಿನ ಖನಿಜಗಳ ದೊಡ್ಡ ನಿಕ್ಷೇಪಗಳನ್ನು ಪತ್ತೆ ಮಾಡಿದ್ದಾರೆ. ಗುರುತಿಸಲಾದ ಅಂಶಗಳಲ್ಲಿ ಅಲನೈಟ್, ಸೆರಿಯೇಟ್, ಥೋರೈಟ್, ಕೊಲಂಬೈಟ್, ಟ್ಯಾಂಟಲೈಟ್, ಅಪಟೈಟ್, ಜಿರ್ಕಾನ್, ಮೊನಾಜೈಟ್, ಪೈರೋಕ್ಲೋರ್ ಯುಕ್ಸೆನೈಟ್ ಮತ್ತು ಫ್ಲೋರೈಟ್ ಸೇರಿವೆ. ರೆಡ್ಡಿಪಲ್ಲೆ ಮತ್ತು ಪೆದ್ದವಾಡಗೂರು ಗ್ರಾಮಗಳಲ್ಲಿ ವಿವಿಧ ಆಕಾರಗಳ ಜಿರ್ಕಾನ್‌ ಕಂಡುಬಂದಿದೆ ಎಂದು ಎನ್‌ಜಿಆರ್‌ಐ ವಿಜ್ಞಾನಿ ಪಿವಿ ಸುಂದರ್‌ ರಾಜು ತಿಳಿಸಿದ್ದಾರೆ. "ಮೊನಾಜೈಟ್ ಅಂಶಗಳೂ ರೇಡಿಯಲ್ ಬಿರುಕುಗಳೊಂದಿಗೆ ಉನ್ನತ-ಕ್ರಮದ ಬಹು ಬಣ್ಣಗಳನ್ನು ತೋರಿಸಿದವು, ವಿಕಿರಣಶೀಲ ಅಂಶಗಳ ಉಪಸ್ಥಿತಿಯನ್ನು ಸೂಚಿಸುತ್ತವೆ, ಈ ಆರ್‌ಇಇ ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇನ್ನಷ್ಟು ಆಳವಾಗಿ ಕೊರೆಯುವ ಅಗತ್ಯವಿದೆ. ಆ ಮೂಲಕ ಹೆಚ್ಚಿನ ಕಾರ್ಯಸಾಧ್ಯತೆಯ ಅಧ್ಯಯನಗಳನ್ನು ನಡೆಸಲಾಗುವುದು ಎಂದು ರಾಜು ಹೇಳಿದರು.

ಈ ಅಂಶಗಳನ್ನು ಶುದ್ಧ ಶಕ್ತಿ, ಏರೋಸ್ಪೇಸ್, ರಕ್ಷಣೆ ಮತ್ತು ಆಯಸ್ಕಾಂತಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆಧುನಿಕ ಎಲೆಕ್ಟ್ರಾನಿಕ್ಸ್‌ನ ಪ್ರಮುಖ ಅಂಶಗಳಾದ ವಿಂಡ್ ಟರ್ಬೈನ್‌ಗಳು, ಜೆಟ್ ಏರ್‌ಕ್ರಾಫ್ಟ್ ಮತ್ತು ಹಲವಾರು ಇತರ ಉತ್ಪನ್ನಗಳನ್ನೂ ಇದರಿಂದ ತಯಾರಿಸುತ್ತಾರೆ. ಆರ್‌ಇಇಗಳನ್ನು ಅವುಗಳ ಪ್ರಕಾಶಕ ಮತ್ತು ವೇಗವರ್ಧಕ ಗುಣಲಕ್ಷಣಗಳಿಂದಾಗಿ ಉನ್ನತ ತಂತ್ರಜ್ಞಾನದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಲೋಹಶಾಸ್ತ್ರದ ಪರಿಣಾಮಗಳೊಂದಿಗೆ ಆರ್‌ಇಇಗಳ ಮೌಲ್ಯಮಾಪನವು ಈಗ ನಡೆಯುತ್ತಿದೆ ಎಂದು ಎನ್‌ಜಿಆರ್‌ಐ ವಿಜ್ಞಾನಿಗಳು ಹೇಳಿದ್ದಾರೆ.

ಲಿಥಿಯಂ ಅಂಶವು ನಿರ್ಣಾಯಕ ಸಂಪನ್ಮೂಲ ವರ್ಗಕ್ಕೆ ಸೇರಿದೆ. ಇದು ಭಾರತದಲ್ಲಿ ಮೊದಲು ಲಭ್ಯವಿರಲಿಲ್ಲ. ಲೀಥಿಯಂಅನ್ನು ನಾವು ಸಂಪೂರ್ಣವಾಗಿ ಬೇರೆ ರಾಷ್ಟ್ರಗಳ ಮೇಲೆ ಅವಲಂಬನೆಯಾಗಿದ್ದೇವೆ ಎಂದು ಹೇಳಿದ್ದಾರೆ.

Latest Videos

undefined

ಭೂಗರ್ಭದಿಂದ ಲೀಥಿಯಂ ಪಡೆವ ಕಾರ್ಯ ಶುರು: 50 ಎಕರೆ ಭೂಮಿ ಅಗೆತ

ಆದರೆ, ಕಳೆದ ಫೆಬ್ರವರಿಲ್ಲಿ ದೇಶದ ಮೊದಲ ಲೀಥಿಯಂ ನಿಕ್ಷೇಪ ಸಿಕ್ಕಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ 5.9 ಮಿಲಿಯನ್‌ ಟನ್‌ ಲೀಥಿಯಂ ನಿಕ್ಷೇಪ ಸಿಕ್ಕಿದೆ ಎಂದು ಅಧಿಕೃತವಾಗಿ ತಿಳಿಸಿತ್ತು. ಲೀಥಿಯಂ ಎನ್ನುವುದು ನಾನ್‌-ಫೆರಸ್‌ ಲೋಹ (ಕಬ್ಬಿಣದ ಅಂಶವನ್ನು ಹೊಂದಿರದ ಲೋಹ) ಇವಿ ಬ್ಯಾಟರಿಗಳ ತಯಾರಿಕೆಗೆ ಇದು ಬಹಳ ಮುಖ್ಯ ಅಂಶ ಎನ್ನಲಾಗುತ್ತದೆ.  ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಪತ್ತೆಯಾದ ಲಿಥಿಯಂ ಮೀಸಲುಅನ್ನು ಬಳಕೆ ಮಾಡಲು ಆರಂಭಿಸಿದರೆ, ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಭಾರತದ ವಿಶ್ವದ ನಂಬರ್ ಒನ್ ಆಟೋಮೊಬೈಲ್ ತಯಾರಕ ರಾಷ್ಟ್ರ ಎನಿಸಲಿದೆ ಎಂದಿದ್ದಾರೆ. ಲಿಥಿಯಂ ಹಗುರ ಲೋಹ. ಇದರ ಸಾಂದ್ರತೆಯು ನೀರಿಗಿಂತ ಕಡಿಮೆ. ಆದ್ದರಿಂದ ಇದನ್ನು ತೇಲುವ ಲೋಹ ಎಂದೂ ಕೂಡ ಹೇಳಬಹುದು. ಇದು ಭೂಮಿಯ ಮೇಲೆ ನೈಸರ್ಗಿಕವಾಗಿ ರೂಪುಗೊಂಡಿಲ್ಲ ಇದನ್ನು ಕಾಸ್ಮಿಕ್ ಲೋಹ ಎನ್ನುತ್ತಾರೆ.

ಕರ್ನಾಟಕಕ್ಕೆ ಮತ್ತೊಂದು ಲಾಟರಿ; ರಾಜ್ಯದಲ್ಲಿ ಸಿಕ್ತು ಅಪರೂಪ ಲೋಹದ ನಿಕ್ಷೇಪ

ಹೆಚ್ಚಿನ ಶಕ್ತಿಯ ಕಾಸ್ಮಿಕ್ ಕಿರಣಗಳು ಬಾಹ್ಯಾಕಾಶದಲ್ಲಿ ಕಾರ್ಬನ್ ಮತ್ತು ಆಮ್ಲಜನಕದಂತಹ ಭಾರವಾದ ಅಂಶಗಳಿಗೆ ಬಡಿದಾದ ಅವುಗಳನ್ನು ಹಗುರವಾದ ಪರಮಾಣುಗಳಾಗಿ ವಿಭಜಿಸಿದಾಗ, ಲಿಥಿಯಂ ರಚನೆಯಾಗಿರಬಹುದು ಎಂದು ಕೆಲವು ವಿಜ್ಞಾನಿಗಳು ನಂಬುತ್ತಾರೆ. 2020 ರಲ್ಲಿ, ಖಗೋಳಶಾಸ್ತ್ರಜ್ಞರು ನೂರಾರು ಸಾವಿರ ನಕ್ಷತ್ರಗಳ ಸಮೀಕ್ಷೆಯ ಆಧಾರದ ಮೇಲೆ ನಿರ್ದಿಷ್ಟ ರೀತಿಯ ಕೆಂಪು ದೈತ್ಯ ನಕ್ಷತ್ರಗಳು ತಮ್ಮ ಜೀವನದ ಕೊನೆಯಲ್ಲಿ ಲಿಥಿಯಂ ಕಾರ್ಖಾನೆಗಳಾಗಿ ಮಾರ್ಪಡುತ್ತವೆ ಎಂದು ಹೇಳಿದ್ದರು. ಲಿಥಿಯಂ ಹೆಚ್ಚು ಪ್ರತಿಕ್ರಿಯಾತ್ಮಕ ಲೋಹವಾಗಿದ್ದು, ಬಹಳ ಇಂಧನವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಿಕಲ್ ಮೆಟಲ್ ಹೈಡ್ರೈಡ್ (NiMh) ಬ್ಯಾಟರಿಯಲ್ಲಿನ 20 ಪ್ರತಿಶತ ನಷ್ಟಕ್ಕೆ ಹೋಲಿಸಿದರೆ ಲಿಥಿಯಂ-ಐಯಾನ್ ಬ್ಯಾಟರಿಯು ತಿಂಗಳಿಗೆ ಕೇವಲ 5 ಪ್ರತಿಶತದಷ್ಟು ಚಾರ್ಜ್ ಅನ್ನು ಕಳೆದುಕೊಳ್ಳುತ್ತದೆ. 

click me!