
ಬೆಂಗಳೂರು (ಡಿ.18): ಆಧಾರ್ ಕಾರ್ಡ್ ಮಾಡಿಸಿಲ್ಲ ಅಥ್ವಾ ಆಧಾರ್ ಕಾರ್ಡ್‌ನಲ್ಲಿ ವಿಳಾಸ, ಮೊಬೈಲ್ ನಂಬರ್ ಏನಾದ್ರೂ ಅಪ್ಡೇಟ್ ಮಾಡೋದಾದ್ರೆ ಇನ್ಮುಂದೆ ಸುಲಭ!
UID ಪ್ರಾಧಿಕಾರವು ದೇಶಾದ್ಯಂತ ಬೇರೆ ಬೇರೆ ನಗರಗಳಲ್ಲಿ 21 ಹೊಸ ಆಧಾರ್ ಸೇವಾ ಕೇಂದ್ರಗಳನ್ನು ಆರಂಭಿಸಿದ್ದು, ಶೀಘ್ರದಲ್ಲೇ ಇನ್ನು 93 ಕೇಂದ್ರಗಳನ್ನು ಆರಂಭಿಸುವುದಾಗಿ ಹೇಳಿದೆ.
ಅವುಗಳ ಪೈಕಿ ಎರಡು ಆಧಾರ್ ಕೇಂದ್ರಗಳು ಕರ್ನಾಟಕದ ಎರಡು ಕೇಂದ್ರಗಳಲ್ಲಿ ಆರಂಭವಾಗಿವೆ.
ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ ಪೈ ವಿಸ್ತಾ ಕನ್ವೆಶನ್ ಸೆಂಟರ್ ಹಾಗೂ ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿರುವ ಸಿಸಿಕೆ ಕಟ್ಟಡದಲ್ಲಿ ಆಧಾರ್ ಕೇಂದ್ರಗಳು ಶುರುವಾಗಿವೆ.
ಇದನ್ನೂ ಓದಿ | ಇನ್ಮುಂದೆ ಮೊಬೈಲ್ ಇಂಟರ್ನೆಟ್ ಬಳಸಬೇಕಾದ್ರೆ ಚಹರೆ ಸ್ಕ್ಯಾನ್ ಮಾಡೋದು ಕಡ್ಡಾಯ!...
ಈ ಕೇಂದ್ರಗಳು ವಾರದ ಏಳು ದಿನಗಳು ಕಾರ್ಯ ನಿರ್ವಹಿಸಲಿದ್ದು, ಬೆಳಗ್ಗೆ 9.30 ಯಿಂದ ಸಂಜೆ 5.30ರ ತನಕ ತೆರೆದಿರುತ್ತೆ. ಈ ಕೇಂದ್ರಗಳು ಒಂದು ದಿನಕ್ಕೆ ಸುಮಾರು 1000 ಎನ್ರೋಲ್ಮೆಂಟ್ ಮತ್ತು ಅಪ್ಡೇಟ್ ಅರ್ಜಿಗಳನ್ನು ವಿಲೇವಾರಿ ಮಾಡುವ ಸಾಮರ್ಥ್ಯ ಹೊಂದಿವೆ.
ಈ ಕೇಂದ್ರಗಳಲ್ಲಿ ಆಧಾರ್ ಎನ್ರೋಲ್ಮೆಂಟ್ ಉಚಿತವಾಗಿದ್ದು, ಅಪ್ಡೇಟ್ ಮಾಡಿಸಲು ₹50 ಶುಲ್ಕವನ್ನು ಪಾವತಿಸಬೇಕು.
ಪ್ರಾಧಿಕಾರವು ಭಾರತದ ಸುಮಾರು 53 ನಗರಗಳಲ್ಲಿ 114 ಇಂತಹ ಕೇಂದ್ರಗಳನ್ನು ತೆರೆಯುವ ಯೋಜನೆ ಹಾಕಿಕೊಂಡಿತ್ತು. ಇದಲ್ಲದೇ, ಬ್ಯಾಂಕ್, ಪೋಸ್ಟ್ ಆಫೀಸ್ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು ನಡೆಸುವ ಸುಮಾರು 35 ಸಾವಿರ ಕೇಂದ್ರಗಳಲ್ಲಿಯೂ ಆಧಾರ್ ಎನ್ರೋಲ್ ಮಾಡುವ ವ್ಯವಸ್ಥೆ ಇದೆ.
ಆಧಾರ್ ಕೇಂದ್ರಗಳಿಗೆ ಭೇಟಿ ನೀಡುವ ಮುನ್ನ UIDAI ಪೋರ್ಟಲ್‌ನಲ್ಲಿ ಆನ್‌ಲೈನ್ ಅಪಾಯಿಂಟ್ಮೆಂಟ್ ತೆಗೆದುಕೊಲ್ಳಬೇಕು.
ಇದನ್ನೂ ಓದಿ | ವಾಟ್ಸಪ್‌ನಲ್ಲಿ ಹೊಸ ಫೀಚರ್; ಈಗ ನೀವೇ ಬಾಸ್, ನೀವೇ ಸ್ಪೆಶಲ್!...
ಆಧಾರ್ ಕೇಂದ್ರಗಳಲ್ಲಿ ಸಿಗುವ ಸೇವೆಯ ಪಟ್ಟಿ:
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.