ಟೆಲಿಕಾಂ ಕಂಪನಿಗಳು ಮೊಬೈಲ್ ಕರೆ ದರಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ, ಬಳಕೆದಾರರಿಗೆ ಮತ್ತೊಂದು ಕಹಿಸುದ್ದಿ ಹೊರಬಿದ್ದಿದೆ. ಈವರೆಗೆ ಎಂಜಾಯ್ ಮಾಡುತ್ತಿದ್ದ ಸೌಲಭ್ಯ ಇನ್ಮುಂದೆ ಸಿಗಲ್ಲ! ಏನದು? ಇಲ್ಲಿದೆ ವಿವರ...
ನವದೆಹಲಿ (ಡಿ. 18): ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳು ತಮ್ಮ ಮೊಬೈಲ್ ಕರೆ ದರಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ, ಭಾರತೀಯ ದೂರ ಸಂಪರ್ಕ ನಿಯಂತ್ರಣಾ ಸಂಸ್ಥೆ- ಟ್ರಾಯ್ ಉಚಿತ ಮೊಬೈಲ್ ಕರೆಗಳಿಗೆ ಕಡಿವಾಣ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಇದರಿಂದ ಉಚಿತ ಮೊಬೈಲ್ ಕರೆಗಳ ಜಮಾನಕ್ಕೆ ಸಂಪೂರ್ಣ ತೆರೆ ಬೀಳಲಿದೆ. ಮೊಬೈಲ್ ಪೋನ್ ಕರೆಗಳಿಗೆ ಕನಿಷ್ಠ ಮೂಲ ದರ ನಿಗದಿಗೊಳಿಸುವ ಕುರಿತಂತೆ ಸಮಾಲೋಚನೆ ಆರಂಭಿಸಿದೆ.
undefined
ಇದನ್ನೂ ಓದಿ |
ಜಿಯೋದ ಉಚಿತ ಕರೆ ಮತ್ತು ಅಗ್ಗದ ಡೇಟಾ ಸ್ಪರ್ಧೆಯಿಂದಾಗಿ ಟೆಲಿಕಾಂ ವಲಯದ ಕಾರ್ಯಸಾಧ್ಯತೆ ಕ್ಷೀಣಿಸುತ್ತಿದೆ. ಹೀಗಾಗಿ ಮೂಲ ದರವನ್ನು ನಿಗದಿಪಡಿಸಬೇಕು ಎಂದು ಭಾರ್ತಿ ಏರ್ಟೆಲ್ ಬೇಡಿಕೆ ಇಟ್ಟಿತ್ತು.
ಈ ಬೇಡಿಕೆಗೆ ಸ್ಪಂದಿಸಿರುವ ಟ್ರಾಯ್, ನಿರ್ದಿಷ್ಟ ದರವನ್ನು ನಿಗದಿಪಡಿಸದೇ ಇರುವ ತನ್ನ ನಿಲುವನ್ನು ಪರಿಷ್ಕರಿಸಿದೆ.
ಇತ್ತೀಚೆಗೆ ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಕಾಲ್ ಮತ್ತು ಡೇಟಾ ದರಗಳನ್ನು ಪರಿಷ್ಕರಿಸಿವೆ.
ಡಿಸೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ