ಓಲ್ಡ್ ಈಸ್ ಗೋಲ್ಡ್! ಹಳೆ ಪ್ಲಾನ್‌ ಮರುಪರಿಚಯಿಸಿದ ಜಿಯೋ

Suvarna News   | Asianet News
Published : Dec 18, 2019, 05:36 PM IST
ಓಲ್ಡ್ ಈಸ್ ಗೋಲ್ಡ್! ಹಳೆ ಪ್ಲಾನ್‌ ಮರುಪರಿಚಯಿಸಿದ ಜಿಯೋ

ಸಾರಾಂಶ

ಮುಂದುವರಿದ ದರ ಸಮರ; ಬಳಕೆದಾರರನ್ನು ಹಿಡಿದಿಟ್ಟುಕೊಳ್ಳಲು ಟೆಲಿಕಾಂ ಕಂಪನಿಗಳಿಂದ ತೀವ್ರ ಪೈಪೋಟಿ; ಹಳೆ ಪ್ಲಾನ್ ಮೊರೆ ಹೋದ ಜಿಯೋ 

ಬೆಂಗಳೂರು (ಡಿ.18): ಏರ್ಟೆಲ್ ಮತ್ತು ವೊಡಾಫೋನ್‌ ಅನ್ಲಿಮಿಟೆಡ್ ವಾಯ್ಸ್ ಕಾಲ್ ಪ್ಲಾನ್‌ ಬಿಡುಗಡೆ ಮಾಡಿದ ಬೆನ್ನಲ್ಲೇ ರಿಲಯನ್ಸ್ ಜಿಯೋ ತನ್ನ ಹಳೆಯ ಪ್ಲಾನನ್ನು ಮರುಪರಿಚಯಿಸಿದೆ. 

₹149 ಮತ್ತು ₹98 ಪ್ರಿಪೇಯ್ಡ್ ಪ್ಲಾನ್‌ಗಳನ್ನು ಜಿಯೋ ಈಗ ಮರು ಪರಿಚಯಿಸಿದೆ.  ಕಳೆದ ಡಿ.06ರಿಂದ ಅನ್ವಯವಾಗುವಂತೆ ಜಿಯೋ ದರಗಳನ್ನು ಪರಿಷ್ಕರಿಸಿತ್ತು. ದರಗಳನ್ನು ಸುಮಾರು 39ಶೇ.ರಷ್ಟು ಹೆಚ್ಚಿಸಲಾಗಿತ್ತು.

28 ದಿನಗಳಿಂದ 365 ದಿನಗಳಿಗೆ ಅನ್ವಯವಾಗುವ 11 ಹೊಸ ಆಲ್-ಇನ್-ಒನ್  ಪ್ಲಾನ್‌ಗಳನ್ನು ಕೂಡಾ ಜಿಯೋ ಪ್ರಕಟಿಸಿತ್ತು. 28 ದಿನಗಳ ವ್ಯಾಲಿಡಿಟಿ ಹೊಂದಿದ್ದ ₹129 ಪ್ಲಾನ್ 2GB ಡೇಟಾ ಹಾಗೂ 1000 ನಿಮಿಷ ಟಾಕ್ ಟೈಮ್ ಸೌಲಭ್ಯಹೊಂದಿತ್ತು.

ಇದನ್ನೂ ಓದಿ | ಜನವರಿಯಿಂದ ಈ ಫೋನ್‌ಗಳಲ್ಲಿ ವಾಟ್ಸಪ್‌ ಬಂದ್!...

₹98 ಪ್ಲಾನ್‌ನಲ್ಲಿ ಏನಿದೆ?

ಈ ಪ್ಲಾನ್ ಕೂಡಾ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು,  ಪ್ರತಿದಿನ 2GB ಡೇಟಾ ಸಿಗಲಿದೆ. ಇದು ಮುಗಿದ ಬಳಿಕ ಇಂಟರ್ನೆಟ್ ಸ್ಪೀಡ್ 64Kbps ಆಗಿರಲಿದೆ. ಈ ಪ್ಲಾನ್‌ನಲ್ಲಿ 300 ಉಚಿತ ಎಸ್ಸೆಮ್ಮೆಸ್ ಸೌಲಭ್ಯ ಕೂಡಾ ಇದೆ.

ಈ ಫ್ಲಾನ್‌ನಲ್ಲಿ ಜಿಯೋ ಮತ್ತು ಲ್ಯಾಂಡ್‌ಲೈನ್ ಫೋನ್‌ಗಳಿಗೆ ವಾಯ್ಸ್ ಕಾಲ್ಸ್ ಉಚಿತವಾಗಿವೆ. ಜೀಯೋಯೇತರ ಮೊಬೈಲ್‌ಗಳಿಗೆ ಕಾಲ್ ಮಾಡಬೇಕಾದ್ರೆ ಟಾಪ್‌ಅಪ್ ವೋಚರ್‌ ಖರೀದಿಸಬೇಕು. ಆಫ್‌ನೆಟ್ ಕಾಲ್‌ಗಳಿಗೆ  ₹10  ಖರ್ಚು ಮಾಡಿದರೆ, ಬಳಕೆದಾರರಿಗೆ 1GB ಹೆಚ್ಚುವರಿ ಡೇಟಾ ಉಚಿತವಾಗಿ ಸಿಗಲಿದೆ. 

₹149 ಪ್ಲಾನ್‌ನಲ್ಲಿ ಏನಿದೆ?

₹149 ಪ್ಲಾನ್‌ನಲ್ಲಿ 24 ದಿನಗಳ ವ್ಯಾಲಿಡಿಟಿ ಇದೆ. ಒಟ್ಟು 24GB ಡೇಟಾ ಸಿಗಲಿದೆ. ಜಿಯೋಯೇತರ ಮೊಬೈಲ್‌ಗಳಿಗೆ 300 ನಿಮಿಷ ಉಚಿತ ಕರೆ ಮಾಡಬಹುದು.  ಜೊತೆಗೆ 100 ಎಸ್ಸೆಮ್ಮೆಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳ ಉಚಿತ ಸಬ್‌ಸ್ಕ್ರಿಪ್ಶನ್ ಸಿಗಲಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?