ಕರ್ನಾಟಕದಲ್ಲಿದ್ದು ಅಹಂಕಾರ ಬೇಡ ಕನ್ನಡ ಕಲಿ; ಚರ್ಚೆಗೆ ಗ್ರಾಸವಾದ ಆಟೋ ರಿಕ್ಷಾ ಬರಹ!

Published : Jul 24, 2023, 05:26 PM ISTUpdated : Jul 24, 2023, 05:28 PM IST
ಕರ್ನಾಟಕದಲ್ಲಿದ್ದು ಅಹಂಕಾರ ಬೇಡ ಕನ್ನಡ ಕಲಿ; ಚರ್ಚೆಗೆ ಗ್ರಾಸವಾದ ಆಟೋ ರಿಕ್ಷಾ ಬರಹ!

ಸಾರಾಂಶ

ಕರ್ನಾಟದದಲ್ಲಿದ್ದರೆ ಕನ್ನಡ ಕಲಿ, ಇಲ್ಲಿ ಬಂದು ಅಹಂಕಾರ ತೋರಿಸಬೇಡ, ನೀವು ಇಲ್ಲಿಗೆ ಬಂದಿರುವುದು ಭಿಕ್ಷೆಗಾಗಿ. ಇದು ಬೆಂಗಳೂರಿನ ಆಟೋ ರಿಕ್ಷಾ ಹಿಂದಿನ ಸಾಲುಗಳು. ಅನ್ಯಭಾಷಿಗರಿಗೆ ನೀಡಿದ ವಾರ್ನಿಂಗ್ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.   

ಬೆಂಗಳೂರು(ಜು.24) ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಧಲ್ಲಿ ಕನ್ನಡ, ಕರ್ನಾಟಕದ ಕುರಿತು ಚರ್ಚೆಯಾಗುತ್ತಿದೆ. ಕರ್ನಾಟದಲ್ಲಿದ್ದೇನೆ ಎಂದರೆ ನನನಗೆ ಕನ್ನಡ ಗೊತ್ತಿರಬೇಕು ಎಂದರ್ಥವಲ್ಲ ಅನ್ನೋ ಹೇಳಿಕೆ, ನನಗೆ ಕನ್ನಡ ಬರಲ್ಲ ಅನ್ನೋ ಮಾತುಗಳು ಕನ್ನಡಿಗರನ್ನು ಕೆರಳಿಸಿದೆ. ದಶಕಗಳಿಂದ ಕರ್ನಾಟಕದಲ್ಲಿದ್ದರೂ ಇನ್ನೂ ಕನ್ನಡ ಕಲಿಯದೇ ಅಹಂಕಾರ ತೋರಿಸುವ ಮಂದಿಗೆ ಇದೀಗ ಬೆಂಗಳೂರಿನ ಆಟೋ ರಿಕ್ಷಾ ಹಿಂದಿನ ಸಾಲು ಕಪಾಳಮೋಕ್ಷ ಮಾಡಿದಂತಿದೆ.ನೀನು ಕರ್ನಾಟಕದಲ್ಲಿದ್ದರೆ ಕನ್ನಡ ಕಲಿ, ಎಂದಿಗೂ ನಿಮ್ಮ ಅಹಂಕಾರ ತೋರಿಸಬೇಡಿ, ನೀವು ಇಲ್ಲಿಗೆ ಬಂದಿರುವುದು ಭಿಕ್ಷೆಗಾಗಿ ಎಂದು ಬರೆಯಲಾಗಿದೆ. ಆದರೆ ಈ ಸಾಲುಗಳಿಗೆ ಉತ್ತರ ಭಾರತೀಯರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. 

ಭಾರತದ ಹಲವು ಭಾಗಗಳಿಂದ ಬೆಂಗಳೂರಿಗೆ ಆಗಮಿಸುವ ಜನ, ಇಲ್ಲೇ ನೆಲೆಸುತ್ತಾರೆ. ಆದರೆ ದಶಕಗಳು ಕಳೆದರೂ ಕನ್ನಡ ಕಲಿಯುವ ಪ್ರಯತ್ನವನ್ನೂ ಮಾಡಿಲ್ಲ. ಕೇವಲ ಈ ವಿಚಾರ ಕನ್ನಡಗರ ಆಕ್ರೋಶಕ್ಕೆ ಕಾರಣವಲ್ಲ. ಇದೇ ಜನ ಕನ್ನಡದ ವಿರುದ್ಧ ಅಹಂಕಾರದ ಮಾತುಗಳನ್ನಾಡುವುದು ಕನ್ನಡಿಗರನ್ನು ಕೆರಳಿಸಿದೆ. ಕನ್ನಡ ಭಾಷೆಗೆ ಅವಮಾನ ಮಾಡುವುದು, ಇಲ್ಲಿನ ಸಂಸ್ಕೃತಿ, ಆಚಾರ ವಿಚಾರಗಳ ವಿರುದ್ಧ ಧ್ವನಿ ಎತ್ತುವುದು ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ವಿರೋಧಿ ನಡೆಗಳು ಹೆಚ್ಚಾಗಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ಇದೀಗ ಆಟೋ ರಿಕ್ಷಾದಲ್ಲಿನ ಸಾಲುಗಳು ಭಾರಿ ವೈರಲ್ ಆಗಿದೆ.

ಬೆಂಗ್ಳೂರಲ್ಲಿದ್ದರೆ ಕನ್ನಡ ಅರ್ಥವಾಗುತ್ತಿದೆ ಎಂದರ್ಥವಲ್ಲ, ಗೂಗಲ್‌ ಪ್ರಶ್ನಿಸಿದ ದೆಹಲಿ ಮಹಿಳೆಗೆ ಕನ್ನಡಿಗರ ಕ್ಲಾಸ್!

ಕರ್ನಾಟಕದಲ್ಲಿದ್ದರೆ ಕನ್ನಡ ಕಲಿ ಅನ್ನೋ ಆಟೋ ಬರಹ ಭಾರಿ ಸಂಚಲನ ಸೃಷ್ಟಿಸಿದೆ. ಟ್ವಿಟರ್‌ನಲ್ಲಿ ಕನ್ನಡ ಟ್ರೆಂಡ್ ಆಗಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಹಲವರು ಕಮೆಂಟ್ ಮಾಡಿದ್ದರೆ. ಪರ ವಿರೋಧ ಚರ್ಚೆ ಆರಂಭಗೊಂಡಿದೆ. ಅನ್ಯಭಾಷಿಕರು ಸ್ಥಳೀಯ ಭಾಷೆಗಳಿಗೆ ಗೌರವ ನೀಡಬೇಕು. ಕಲಿಯುವ ಪ್ರಯತ್ನ ಮಾಡಬೇಕು. ಇಲ್ಲೇ ನೆಲೆಸಿದ್ದರೂ ಸ್ಥಳೀಯ ಭಾಷೆ ಕಲಿಯದೇ ಬಳಿಕ ದರ್ಪ ತೋರುವುದು ಉತ್ತಮವಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

 

 

ಮತ್ತೆ ಕೆಲವರೂ ಕರ್ನಾಟಕಕ್ಕೆ ಯಾರೂ ಭಿಕ್ಷೆಗೆ ಬಂದಿಲ್ಲ. ಕರ್ನಾಟಕ ಭಾರತದೊಳಗಿದೆ. ಉತ್ತರ ಭಾರತೀಯರು ಬರದೇ ಇದ್ದರೆ, ಇಲ್ಲಿನ ಆಟೋಗಳು ನಿಲ್ದಾದಲ್ಲೇ ನಿಲ್ಲಬೇಕಿತ್ತು ಎಂದು ಖಾರವಾಗಿ ಕಮೆಂಟ್ ಮಾಡಿದ್ದಾರೆ. ಭಾರತದ ಯಾವುದೇ ರಾಜ್ಯಕ್ಕೆ ತೆರಳಿ ನೆಲೆಸುವುದು, ಕೆಲಸ ಮಾಡುವ ಹಕ್ಕು ಎಲ್ಲರಿಗೂ ಇದೆ. ಭಾಷೆ ಕಲೇಯಲೇಬೇಕು ಎಂದಿಲ್ಲ. ಅದು ಅವರ ವೈಯುಕ್ತಿಕ ವಿಚಾರ. ಹಾಗಂತ ಸ್ಥಳೀಯ ಭಾಷೆಗೆ ಅವಮಾನ ಮಾಡುವುದು ಸರಿಯಲ್ಲ. ಸ್ಥಳೀಯ ಭಾಷೆಗಳನ್ನು ಗೌರವಿಸಬೇಕು ಎಂದು ಕಲೆವರು ಕಮೆಂಟ್ ಮಾಡಿದ್ದಾರೆ.

ಕನ್ನಡದಲ್ಲಿ ಆನ್‌ಲೈನ್ ರೈಲು ಟಿಕೆಟ್ ಬುಕಿಂಗ್ ಆ್ಯಪ್ ಬಿಡುಗಡೆ ಮಾಡಿದ ನೈಋತ್ಯ ರೈಲ್ವೆ!

ಇದೀಗ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು ಜೋರಾಗುತ್ತಿದೆ. ಇತ್ತಿಚೆಗೆ ದೆಹಲಿ ಮೂಲದ ಮಹಿಳೆಯೊಬ್ಬರ  ಪ್ರತಿಕ್ರಿಯೆ ಕನ್ನಡಿಗರನ್ನು ಕೆರಳಿಸಿತ್ತು. ಬೆಂಗಳೂರಿನಲ್ಲಿ ನೆಲೆಸಿದ್ದ ಈ ಮಹಿಳೆ ಯೂಟ್ಯೂಬ್ ವೀಕ್ಷಣೆ ವೇಳೆ ಕನ್ನಡ ಜಾಹೀರಾತು ಪ್ರಸಾರವಾಗಿತ್ತು. ಇದರಿಂದ ಆಕ್ರೋಶಗೊಂಡ ಮಹಿಳೆ ಗೂಗಲ್‌ಗೆ ಪ್ರಶ್ನೆ ಹಾಕಿದ್ದಳು. ನಾನು ಕರ್ನಾಟಕದಲ್ಲಿದ್ದೇನೆ ಎಂದು ಮಾತ್ರಕ್ಕೆ ಕನ್ನಡ ಅರ್ಥವಾಗಬೇಕು ಎಂದಿಲ್ಲ ಎಂದಿದ್ದಳು. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡ ಭಾಷೆಯ ವಿಷಗಳು, ಕನ್ನಡ ಭಾಷೆಯ ಜಾಹೀರಾತುಗಳ ಕರ್ನಾಟಕದಲ್ಲಿ ಬಿಟ್ಟರೆ ಬೇರೆ ಯಾವ ರಾಜ್ಯದಲ್ಲಿ ಪ್ರಸಾರ ಮಾಡಲು ಸಾಧ್ಯ? ಕನ್ನಡ ಗೊತ್ತಿಲ್ಲದ ಎಂದರೆ ಕಲಿಯಲು ಪ್ರಯತ್ನಿಸಿ, ಹಾಗಂತ ಕರ್ನಾಟಕಕ್ಕೆ ಬಂದು ಕನ್ನಡವೇ ಯಾಕೆ? ಎಂದು ಪ್ರಶ್ನಿಸುವುದು ನಿಮ್ಮ ದರ್ಪ ತೋರಿಸುತ್ತದೆ.  ಕರ್ನಾಟಕದಲ್ಲಿ ಕನ್ನಡ ಭಾಷೆ. ನಿಮಗೆ ಅರ್ಥವಾದರೆ ನೋಡಿ, ಅರ್ಥವಾಗದಿದ್ದರೆ ಸುಮ್ಮನಿರಿ, ಅದರ ಬದಲು ಕನ್ನಡ ನೆಲದಲ್ಲಿ ನಿಂತು ಕನ್ನಡ ಯಾಕೆ ಎಂದು ಪ್ರಶ್ನಿಸುವುದು ಎಷ್ಟು ಸರಿ ಅನ್ನೋ ಖಾರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!