ನಿರಂತರ ಮಳೆಗೆ ಕುಸಿದು ಬಿದ್ದ ಮನೆ; ಸುರಿವ ಮಳೆಯಲ್ಲೇ ಹೊರಗೆ ನಿಂತ ಕುಟುಂಬ!

By Kannadaprabha News  |  First Published Jul 24, 2023, 1:14 PM IST

ಕಳೆದ ಎರಡು ಮೂರು ದಿನಗಳಿಂದ ತರೀಕೆರೆ ಪಟ್ಟಣ ಮತ್ತು ಸುತ್ತಮುತ್ತ ಬಿಟ್ಟು ಬಿಟ್ಟು ಬರುತ್ತಿರುವ ಮಳೆ ಭಾನುವಾರವೂ ಮುಂದುವರಿದಿದೆ. ಮಳೆಯ ಜೊತೆಯಲ್ಲಿ ಥಂಡಿ ಗಾಳಿ ಕೂಡ ಬೀಸುತ್ತಿದೆ.


ತರೀಕೆರೆ (ಜು.24): ಕಳೆದ ಎರಡು ಮೂರು ದಿನಗಳಿಂದ ತರೀಕೆರೆ ಪಟ್ಟಣ ಮತ್ತು ಸುತ್ತಮುತ್ತ ಬಿಟ್ಟು ಬಿಟ್ಟು ಬರುತ್ತಿರುವ ಮಳೆ ಭಾನುವಾರವೂ ಮುಂದುವರಿದಿದೆ. ಮಳೆಯ ಜೊತೆಯಲ್ಲಿ ಥಂಡಿ ಗಾಳಿ ಕೂಡ ಬೀಸುತ್ತಿದೆ. ತಾಲೂಕಿನ ಲಕ್ಕವಳ್ಳಿ ಹೋಬಳಿ ಶಾಂತಿಪುರ (ವೆಂಕಟಾಪುರ) ಸುಜಾತ ಅವರ ಮನೆ ಗೋಡೆ ಮಳೆಯಿಂದಾಗಿ ಬಿದ್ದುಹೋಗಿದೆ ಎಂದು ತಹಸೀಲ್ದಾರ್‌ ಪೂರ್ಣಿಮ ತಿಳಿಸಿದ್ದಾರೆ.

ಕೆಮ್ಮಣಗುಂಡಿ ಗಿರಿಧಾಮದಲ್ಲಿ ಮಳೆ ಮತ್ತು ಭಾರೀ ಗಾಳಿ ಬೀಸುತ್ತಿದ್ದು, ಗಾಳಿಯ ತೀವ್ರತೆಯಿಂದಾಗಿ ಗಿರಿಧಾಮದಲ್ಲಿದ್ದ ಮರಗಳ ಎಲೆಗಳು ಉದುರಲಾರಂಭಿಸಿದೆ. ಮಳೆಯ ನಡುವೆಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಗಿರಿಧಾಮಕ್ಕೆ ಆಗಮಿಸುತ್ತಿದ್ದಾರೆ ಎಂದು ಕೆಮ್ಮಣಗುಂಡಿ ಗಿರಿಧಾಮದ ವಿಶೇಷಾಧಿಕಾರಿ ಕುಬೇರ್‌ ಆಚಾರ್‌ ತಿಳಿಸಿದ್ದು, ಕೆಮ್ಣಣಗುಂಡಿ ಗಿರಿಧಾಮದ ರಸ್ತೆಗಳು ದುರಸ್ತಿಯಾಗಬೇಕಿದ್ದು ಸಂಬಂಧಿಸಿದ ಇಲಾಖೆ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Latest Videos

undefined

ಮುಂಡಾಜೆ: ಬೃಹತ್‌ ಗಾತ್ರದ ಮರ ಉರುಳಿ ಒಂದೂವರೆ ತಾಸು ಸಂಚಾರ ವ್ಯತ್ಯಯ

ಮಳೆ ಹಾಗೂ ಭಾರಿ ಗಾಳಿ​ಯಿಂದಾಗಿ ಮರ​ಗಳು ಉರುಳಿ ಕಲ್ಲ​ತ್ತ​ಗಿ​ರಿಯಲ್ಲಿ ಐದು ವಿದ್ಯುತ್‌ ಕಂಬ, ಗುಳ್ಳ​ದಮನೆ ಗ್ರಾಮ​ದಲ್ಲಿ 2 ಕಂಬ ಹಾಗೂ ಧೂಪ​ದ​ಖಾನ್‌ನಲ್ಲಿ ಐದು ವಿದ್ಯುತ್‌ ಕಂಬ​ಗಳು ಧರೆ​ಗು​ರು​ಳಿವೆ ಎಂದು ಲಿಂಗದ​ಹಳ್ಳಿ ವಿಭಾ​ಗದ ಬೆಸ್ಕಾಂ ಹಿರಿಯ ಇಂಜಿ​ನಿಯರ್‌ ತಿಪ್ಪೇ​ಶಪ್ಪ ತಿಳಿ​ಸಿ​ದ್ದಾ​ರೆ.

23ಕೆಟಿಆರ್‌ಕೆ8ಃ ತರೀಕೆರೆ ಸಮೀಪದ ಲಕ್ಕವಳ್ಳಿ ಹೋಬಳಿ ಶಾಂತಿಪುರದಲ್ಲಿ ಮನೆ ಗೋಡೆ ಮಳೆಯಿಂದಾಗಿ ಬಿದ್ದುಹೋಗಿದೆ.

ನಿರಂತರ ಮಳೆಗೆ ಕುಸಿದು ಬಿದ್ದ ಮನೆ

ಕಡೂರು: ಕಳೆದ ಮೂರು ದಿನಗಳಿಂದ ತಾಲೂಕಿನ ಹಲವೆಡೆ ಮಳೆ ಬೀಳುತಿದ್ದು, ಹೆಚ್ಚಿನ ಮಳೆಯಿಂದ ತಾಲೂಕಿನ ಎಮ್ಮೇದೊಡ್ಡಿ ಪ್ರದೇಶದಲ್ಲಿ ಮನೆಯೊಂದು ಕುಸಿದಿರುವ ಘಟನೆ ನಡೆದಿದೆ.

ಭಾನುವಾರ ಮಧ್ಯಾಹ್ನ ಸುರಿದ ಮಳೆಗೆ ತಾಲೂಕಿನ ಎಮ್ಮೇದೊಡ್ಡಿ ಪ್ರದೇಶದ ಗಾಳಿಗುತ್ತಿ ಗ್ರಾಮದಲ್ಲಿ ಶ್ರೀಮತಿ ಪುಷ್ಪಾಬಾಯಿ ಕೋಂ. ಪುಟ್ಟಾನಾಯ್ಕ ಎಂಬುವರ ಮನೆಯು ಮಳೆಗೆ ಕುಸಿದಿದೆ. ಮನೆ ಕುಸಿಯುವ ಸಮಯದಲ್ಲಿ ಭೀತಿಗೊಂಡ ಮನೆಯವರು ಕೂಡಲೇ ಮನೆಯಿಂದ ಹೊರ ಬಂದಿದ್ದಾರೆ. ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಕಡೂರು-ಬೀರೂರು ಸೇರಿದಂತೆ ತಾಲೂಕಿನ ಸುತ್ತಮುತ್ತಲಿನಲ್ಲಿ ಉತ್ತಮ ಮಳೆ ಬರುತಿದ್ದು, ಭಾನುವಾರ ಕೂಡ ಬೆಳಗಿನಿಂದಲೂ ಮಳೆ ಸುರಿಯುತ್ತಿತ್ತು. ರಾತ್ರಿ ಕೂಡ ಸೋನೆ ಮುಂದುವರಿದಿತ್ತು.

ಉಪ್ಪಿನಂಗಡಿ: ಭಾರಿ ಮಳೆಗೆ ಹೆದ್ದಾರಿ ತಡೆಗೋಡೆ ಕುಸಿತ

ವಿದ್ಯುತ್ ಹರಿಯುತ್ತಿದ್ದ ತಂತಿ ತುಳಿದು ವ್ಯಕ್ತಿ ಸಾವು

ಕಡೂರು: ವಿದ್ಯುತ್‌ ಹರಿಯುತಿದ್ದ ತಂತಿ ತುಳಿದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆಯು ಕಡೂರು ತಾಲೂಕಿನ ಎಂ. ಕೋಡಿಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಎಂ. ಕೋಡಿ ಹಳ್ಳಿಯ 50 ವರ್ಷದ ಹನುಮಂತಪ್ಪ ಮೃತಪಟ್ಟವರಾಗಿದ್ದಾರೆ. ಭಾನುವಾರ ಮಧ್ಯಾಹ್ನ ಗ್ರಾಮದ ಜಮೀನಿನ ಬಳಿ ದನಗಳನ್ನು ಮೇಯಿಸುತ್ತಿರುವಾಗ ವಿದ್ಯುತ್‌ ತಂತಿಯನ್ನು ತುಳಿದ ಪರಿಣಾಮ ಆತನು ಸ್ಥಳದಲ್ಲಿಯೇ ಮತೃಪಟ್ಟಿದ್ದಾರೆ. ಈ ಬಗ್ಗೆ ಕಡೂರು ಪೋಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟ್ರ್‌ ಧನಂಜಯರವರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

click me!