ಬೀದರ್‌ನಲ್ಲಿ ಕಾಡುಹಂದಿ ದಾಳಿಗೆ ಮಹಿಳೆ ಸಾವು: ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ವಿತರಣೆ!

By Kannadaprabha NewsFirst Published Mar 8, 2024, 11:42 PM IST
Highlights

ಬೀದರ್ ಹೊಕ್ರಾಣ ಗ್ರಾಮದಲ್ಲಿ ಕಾಡುಹಂದಿ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದು ರಾಜ್ಯ ಸರ್ಕಾರ ಪರಿಹಾರ ಮೊತ್ತ ವಿತರಿಸಿದೆ. ಮೃತ ಮಹಿಳೆಯನ್ನು 45 ವರ್ಷದ ಕವಿತಾ ಎಂದು ಗುರುತಿಸಲಾಗಿದೆ. ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದಾಗ ಕಾಡುಹಂದಿ ದಾಳಿ ಮಾಡಿತ್ತು.

ಬೀದರ್ (ಮಾ.8): ಬೀದರ್ ಹೊಕ್ರಾಣ ಗ್ರಾಮದಲ್ಲಿ ಕಾಡುಹಂದಿ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದು ರಾಜ್ಯ ಸರ್ಕಾರ ಪರಿಹಾರ ಮೊತ್ತ ವಿತರಿಸಿದೆ.

ಮೃತ ಮಹಿಳೆಯನ್ನು 45 ವರ್ಷದ ಕವಿತಾ ಎಂದು ಗುರುತಿಸಲಾಗಿದೆ. ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದಾಗ ಕಾಡುಹಂದಿ ದಾಳಿ ಮಾಡಿತ್ತು. ಕಾಡುಹಂದಿ ಮಹಿಳೆಯ ಹೊಟ್ಟೆಗೆ ಕಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಹಿಳೆ ಸಾವನ್ನಪ್ಪಿದ್ದರು.

ಕಾಂಗ್ರೆಸ್‌ ಪಕ್ಷಕ್ಕೆ ಜನರ ಸಾಥ್‌ ಗ್ಯಾರಂಟಿ: ಸಚಿವ ಈಶ್ವರ್‌ ಖಂಡ್ರೆ

ಮೃತ ಕುಟುಂಬದ ಮನೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ತಕ್ಷಣವೇ ಮೃತರ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು. ಇನ್ಮುಂದೆ ಇಂತಹ ಯಾವುದೇ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿಲು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಮುಂದಿನ ವರ್ಷವೇ 'ವಚನ ವಿಶ್ವವಿದ್ಯಾಲಯ' ಸ್ಥಾಪನೆ: ಸಿಎಂ ಘೋಷಣೆ

click me!