'ನಾನು ರಾಜಕೀಯಕ್ಕೆ ಬರ್ತೀನಿ ಅಂತಾ ಅಂದ್ಕೊಂಡಿರಲಿಲ್ಲ' : ಹೆಚ್‌ಡಿ ಕುಮಾರಸ್ವಾಮಿ

By Ravi JanekalFirst Published Mar 8, 2024, 9:46 PM IST
Highlights

ಲಕ್ಷಾಂತರ ಕುಟುಂಬದ ಜೀವಗಳನ್ನ ಕಾಪಾಡಿದ ನಮ್ಮ ಕುಟುಂಬದ ಬಗ್ಗೆ ‌ನನಗೆ ಹೆಮ್ಮೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ತಿಳಿಸಿದರು. ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ‌ ಮುನಿರತ್ನ ಏರ್ಪಡಿಸಿರುವ ಮಹಾಶಿವರಾತ್ರಿ ಜಾಗರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದರು.

ಬೆಂಗಳೂರು (ಮಾ.8): ಲಕ್ಷಾಂತರ ಕುಟುಂಬದ ಜೀವಗಳನ್ನ ಕಾಪಾಡಿದ ನಮ್ಮ ಕುಟುಂಬದ ಬಗ್ಗೆ ‌ನನಗೆ ಹೆಮ್ಮೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ತಿಳಿಸಿದರು.

ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ‌ ಮುನಿರತ್ನ ಏರ್ಪಡಿಸಿರುವ ಮಹಾಶಿವರಾತ್ರಿ ಜಾಗರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ, ದೇಶ ವಿದೇಶದಲ್ಲಿ ಹೆಸರು ಮಾಡಿದ ಡಾ. ಮಂಜುನಾಥ್ ಅವರು ಇದೇ ಮೊದಲಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಾನು ರಾಜಕೀಯಕ್ಕೆ ಬರ್ತಿನಿ ಅಂತ ಅಂದುಕೊಂಡಿರಲಿಲ್ಲ. ಆದರೆ ನಾನು ರಾಜಕೀಯ ಪ್ರವೇಶ ಮಾಡಿದಾಗ ಈ ಭಾಗದ ಜನರು ಸಹಕಾರ ಕೊಟ್ಟಿದ್ದಾರೆ ಎಂದು ಸ್ಮರಿಸಿಕೊಂಡರು.

Latest Videos

ನನಗೆ ಟಿಕೆಟ್ ಸಿಗುವುದು ನಿಶ್ಚಿತ, ಪ್ರತಾಪ್ ಸಿಂಹ ಸೋಲು ಖಚಿತ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

ಇನ್ನು ಬೆಂಗಳೂರಿನಲ್ಲಿ ಬೇಸಗೆಗೆ Maಮುನ್ನವೇ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಬೇಸಗೆಗೆ ಹೀಗೆಲ್ಲ ನೀರಿನ ಸಮಸ್ಯೆಗೆ ಆಗುತ್ತೆ ಗೊತ್ತಿದ್ರೂ ತಮಿಳನಾಡಿಗೆ ರಾತ್ರೋರಾತ್ರಿ ತಮಿಳನಾಡಿಗೆ ನೀರು ಹರಿಬಿಟ್ಟು, ಈಗ ಕಾರು ತೊಳೆಯಲು ಕೈತೋಟಕ್ಕೆ ಹೆಚ್ಚಿಗೆ ನೀರು ಬಳಕೆ ಮಾಡೋರ ಮೇಲೆ ದಂಡ ಹಹಾಕೋದು ಸರಿಯಲ್ಲ ಎಂದು ಟೀಕಿಸಿದರು.

ಬಿಜೆಪಿ ಜೆಡಿಎಸ್ ಜೊತೆ ಭಿನ್ನಾಭಿಪ್ರಾಯವಿತ್ತು. ಅದನ್ನು ಮರೆತು ನಾವು ಮುಂದೆ ಹೋಗಿದ್ದೇವೆ. ನಾವು ಅತ್ಯುತ್ತಮ ಸರ್ಕಾರ ಕೊಟ್ಟಿದ್ದು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದಾಗ. ಮುಂದೆಯೇ ಬಿಜೆಪಿ ಜೊತೆಗೆ ಉತ್ತಮ ಸರ್ಕಾರ ತರುತ್ತೇವೆ ಎಂದರು. 

ಇನ್ನು ಕಾಂಗ್ರೆಸ್ ಗ್ಯಾರಂಟಿ ಯೋಜನೆ ವಿಚಾರ ಸಂಬಂಧ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ ಪ್ರತಿ ತಿಂಗಳು ಸರ್ಕಾರ ಕೊಡುವ 2000 ರೂ  ನಿಮಗೆ ಸಾಕಾ? ಅದರಲ್ಲಿ ಮಕ್ಕಳ ಫೀ ಕಟ್ಟಲು ಸಹ ಆಗೊಲ್ಲ. ಸ್ಕೂಲ್ ಫೀ ಲಕ್ಷಾಂತರ ರೂಪಾಯಿ ಕಟ್ಟಬೇಕು. ಬಡ ಕುಟುಂಬದ ಮಕ್ಕಳಿಗೂ ಕೂಡ ಉತ್ತಮ ಶಿಕ್ಷಣ ಸಿಗಬೇಕಿದೆ. ಸರ್ಕಾರ 200 ಕೋಟಿ ರೂಪಾಯಿ ಜಾಹೀರಾತುಗಳಿಗೆ ಖರ್ಚು ಮಾಡಿದೆ ಅಷ್ಟೇ ದುಡ್ಡನ್ನು ಕುಡಿಯುವ ನೀರಿಗೆ ಖರ್ಚು ಮಾಡುತ್ತಿಲ್ಲ. ತಮ್ಮ ಪಕ್ಷದ ಜಾಹೀರಾತುಗಳಿಗೆ ಖರ್ಚು ಮಾಡುವ ಹಣ ಯಾರದ್ದು? ನಿಮ್ಮ ತೆರಿಗೆ ಹಣ ಇವತ್ತು ಒಂದು ಲಕ್ಷ ಕೋಟಿ ಸಾಲ ಮಾಡ್ತಾ ಇದ್ದಾರೆ. ಸಾಲ ಮಾಡಿ ಐದು ಗ್ಯಾರಂಟಿ ಗಳಿಗೆ ಕೊಡ್ತಾ ಇದ್ದಾರೆ. ಚುನಾವಣೆಯಲ್ಲಿ ನಿಮ್ಮಿಂದ ಮತ ಪಡೆಯಲು ಈ ರೀತಿ ಉಚಿತ ಆಮಿಷೆ ತೋರಿಸ್ತಿದ್ದಾರೆ. ಇವರ ಕುತಂತ್ರಗಳನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.

ಕೋಲಾರ ಜೆಡಿಎಸ್‌ ನಾಯಕರ ಜತೆ ಕುಮಾರಸ್ವಾಮಿ ಮಾತುಕತೆ

ಈ ಸರ್ಕಾರಕ್ಕೆ ನೀರಾವರಿ ಯೋಜನೆಗಳ ಬಗ್ಗೆ ಚಿಂತನೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಯಾವುದೇ ಆಸೆ ಆಮಿಷೆಗಳಿಗೆ ಒಳಗಾಗದೆ ಉತ್ತಮ ಅಭ್ಯರ್ಥಿಗಳನ್ನ ಆಯ್ಕೆ ಮಾಡಬೇಕು ಎಂದು ಜನರಿಗೆ ಮನವಿ ಮಾಡಿದರು.

click me!