ಆಲಮೇಲ (ಅ.28): ಇಡೀ ರಾಷ್ಟ್ರಕ್ಕೆ (India) ಗೊತ್ತಿದೆ ಯಾರು ಸುಳ್ಳು ಹೇಳುತ್ತಾರೆ ಎಂದು. ಮೊದಲು ಅವರು ತಮ್ಮ ಬಾಯಿ ಸರಿ ಮಾಡಿಕೊಳ್ಳಲಿ. ಸಿದ್ದರಾಮಯ್ಯ (Siddaramaiah) ಏನೇ ಹೇಳಿದರೂ ಒಂದು ಪರ್ಸೆಂಟ್ ಎಫೆಕ್ಟ್ ಆಗಲ್ಲ ಎಂದು ಸಚಿವ ವಿ.ಸೋಮಣ್ಣ (Minister V Somanna) ಹೇಳಿದರು.
ವಿಜಯಪುರ (Vijayapura) ಜಿಲ್ಲೆಯ ಆಲಮೇಲದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ (BJP) ಸುಳ್ಳಿನ ಫ್ಯಾಕ್ಟರಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಏನೇ ಹೇಳಿದರೂ ಅದು ಅವರಿಗೆ ಸೇರಿದ್ದು. ಎಲ್ಲ ಸಚಿವರು (Minister) ಇಲ್ಲೇ ಇದ್ದಾರೆ. ಹಾಗಾಗಿ ಈ ಚುನಾವಣೆ (Election) ಅಭಿವೃದ್ಧಿಯ ಸಂಕೇತವಾಗಿದೆ ಎಂದು ಹೇಳಿದರು.
undefined
ಕಂಬಳಿಗೆ ಹಾಕಲು ಜಾತಿಯವರೇ ಆಗ್ಬೇಕು ಅಂದ್ರೆ ಟೋಪಿ ಹಾಕಲು?ಸಿಟಿ ರವಿ ವಿವಾದಾತ್ಮಕ ಟ್ವೀಟ್!
ಯಾರು ಲಾಕ್ ಆಗಿದ್ದಾರೆ, ಯಾರು ಲಾಕ್ ಆಗಿಲ್ಲ ಎಂದು ಸಿದ್ದರಾಮಯ್ಯನವರಿಗೆ ಗೊತ್ತು. ಮೊದಲು ಸಿದ್ದರಾಮಯ್ಯ ಭಾಷೆ (language) ಸರಿ ಮಾಡಿಕೊಳ್ಳಲಿ. ರಾಜ್ಯದಲ್ಲಿ 5 ವರ್ಷಗಳ ಕಾಲ ಸಿಎಂ ಆಗಿದ್ದವರಿಗೆ ಯಾವ ಮಾತು ಆಡಬೇಕು ಎಂಬುದು ಗೊತ್ತಿರಬೇಕು ಎಂದು ತಿರುಗೇಟು ನೀಡಿದರು. ರಾಷ್ಟ್ರದಲ್ಲಿ ಬದಲಾವಣೆಯ ಪರ್ವ ಬೀಸುತ್ತಿದೆ. ಸಿದ್ದರಾಮಯ್ಯಗೆ ಹತಾಶೆ ಆಗಿದೆ. ಹತಾಶೆಯಿಂದ ಅವರು ಭಾವನೆಗಳನ್ನು ಹೇಳುತ್ತಿದ್ದಾರೆ ಎಂದರು.
ನೂರಕ್ಕೆ ನೂರು ಹಾನಗಲ್ (hanagal), ಸಿಂದಗಿ (Sindagi) ಗೆಲ್ಲುತ್ತೇವೆ. ಈ ಚುನಾವಣೆ ಸಿಂದಗಿ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದೆ ಎಂದ ಸಚಿವರು, ಇಲ್ಲಿ ಯಾವ ಪಾರ್ಟಿನೂ ಇಲ್ಲ, ಅಭಿವೃದ್ಧಿಯೇ ಇಲ್ಲಿ ಪಾರ್ಟಿ ಎಂದು ಹೇಳಿದರು. ಇದೊಂದು ಅನಿರೀಕ್ಷಿತ ಚುನಾವಣೆಯಾಗಿದೆ. ಸದ್ಯಕ್ಕೆ ಕ್ಷೇತ್ರದ ಅಭಿವೃದ್ಧಿಯ ಅವಶ್ಯಕತೆ ಇದೆ. ಹೊಸದಾಗಿ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ (Basavaraj Bommai) ಕೂಡ ಬಂದಿದ್ದಾರೆ. ಜನ ತೀರ್ಮಾನ ಮಾಡಿದ್ದು, ಬಿಜೆಪಿ ಪರವಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಮೀರ್ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ:
ಎಲ್ಲದಕ್ಕೂ ಅಂತ್ಯ ಇರುತ್ತದೆ. ಆ ಅಂತ್ಯವನ್ನು ಜಮೀರ್ ಈಗಲೇ ತರಿಸಿಕೊಂಡರೆ, ಯಾರು ಏನು ಮಾಡೋಕೆ ಆಗಲ್ಲ ಎಂದು ಸಚಿವ ಸೋಮಣ್ಣ ಹೇಳಿದರು.
ಮುಸ್ಲಿಂ ಓಲೈಕೆಗೆ ಜಮೀರ್ ಹೀಗೆ ಮಾತನಾಡುತ್ತಿದ್ದಾರೆ. ಆತನ ಬೆಳವಣಿಗೆಗೆ ಇದು ಒಳ್ಳೆಯದಲ್ಲ. ಇನ್ನಾದರೂ ಜಮೀರ್ ತಿದ್ದುಕೊಳ್ಳಲಿ ಎಂದು ಸಲಹೆ ನೀಡಿದ ಅವರು, ಜಮೀರ್‌ಗೆ ಉಪಕಾರ ಸ್ಮರಣೆ, ಕೃತಜ್ಞತೆ ಎನ್ನುವುದೇ ಇಲ್ಲ. ಜಮೀರ್ ಹತಾಶನಾಗಿದ್ದಾನೆ. ಈ ರೀತಿ ಮಾತನಾಡುವುದು ಮರ್ಯಾದೆ ತರುವುದಿಲ್ಲ ಎಂದರು.
ಜಮೀರ್ ಉದ್ವೇಗಗೊಳಿಸುವ ಕೆಲಸ ಬಿಟ್ಟು ಬಿಡಲಿ ಎಂದ ಅವರು, ಜಮೀರ್ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ ನಡೆಸಿದ್ದೇವೆ. ಚುನಾವಣೆ ಬಳಿಕ ಲೀಗಲ… ಆ್ಯಕ್ಷನ್ ಬಗ್ಗೆ ಚಿಂತನೆ ಇದೆ. ಸದ್ಯ ಚುನಾವಣೆ ಅವಸರದಲ್ಲಿದ್ದೇವೆ. ಬಳಿಕ ಈ ಬಗ್ಗೆ ಚಿಂತನೆ ಮಾಡುತ್ತೇವೆ ಎಂದರು.
ಸಿಎಂ ಹಾಗು ಶ್ರೀ ರಾಮುಲು ವಾಗ್ದಾಳಿ
ಚುನಾವನಾ ಪ್ರಚಾರದ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹಾಗು ಕರ್ನಾಟಕ ಸಾರಿಕೆ ಸಚಿವ ಶ್ರೀ ರಾಮುಲು ಅವರು ಕೂಡ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಅವರ ಕಂಬಳಿ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣ ಅಗಿದೆ.