ನಾಡಹಬ್ಬ ದಸರಾದಲ್ಲಿ ಸಕ್ರೆಬೈಲಿನ ಆನೆಗಳಿಗೆ ಅವಕಾಶ ಸಿಗಲಿದೆಯೇ?

By Kannadaprabha News  |  First Published Aug 8, 2023, 6:36 AM IST

ಮೈಸೂರು ದಸರಾದಲ್ಲಿ ಜಂಬೂ ಸವಾರಿಯಲ್ಲಿ ಪ್ರಮುಖ ಪಾತ್ರ ವಹಿಸುವ ‘ಗಜಪಡೆ’ ಎಲ್ಲರ ಆಕರ್ಷಣೆಯ ಕೇಂದ್ರವಾಗಿರುತ್ತದೆ. ಈ ಬಾರಿಯ ದಸರಾದಲ್ಲಿ ಗಾಜನೂರು ಸಮೀಪದ ಸಕ್ರೆಬೈಲು ಆನೆ ಬಿಡಾರದ ಆನೆಗಳಿಗೆ ಪಾಲ್ಗೊಳ್ಳುವ ಅವಕಾಶ ಸಿಗಲಿದೆಯೇ?


ಗೋಪಾಲ್‌ ಯಡಗೆರೆ

ಶಿವಮೊಗ್ಗ (ಆ.8) :  ಮೈಸೂರು ದಸರಾದಲ್ಲಿ ಜಂಬೂ ಸವಾರಿಯಲ್ಲಿ ಪ್ರಮುಖ ಪಾತ್ರ ವಹಿಸುವ ‘ಗಜಪಡೆ’ ಎಲ್ಲರ ಆಕರ್ಷಣೆಯ ಕೇಂದ್ರವಾಗಿರುತ್ತದೆ. ಈ ಬಾರಿಯ ದಸರಾದಲ್ಲಿ ಗಾಜನೂರು ಸಮೀಪದ ಸಕ್ರೆಬೈಲು ಆನೆ ಬಿಡಾರದ ಆನೆಗಳಿಗೆ ಪಾಲ್ಗೊಳ್ಳುವ ಅವಕಾಶ ಸಿಗಲಿದೆಯೇ?

Tap to resize

Latest Videos

ಇಂತಹದೊಂದು ಕುತೂಹಲದ ಪ್ರಶ್ನೆ ಎದುರಾಗಿದೆ. ದಶಕಗಳ ಹಿಂದೆ ಇಂತಹದೊಂದು ಅವಕಾಶ ದೊರಕಿತ್ತು. ಇದೀಗ ಅಂತಹ ಅವಕಾಶ ಸಿಗಲಿದೆಯೇ ಎಂದು ಕಾದು ನೋಡಬೇಕು.

2023ರ ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಯ ತಂಡದ ಆಯ್ಕೆ ಬಹುತೇಕ ಅಂತಿಮಗೊಳ್ಳುತ್ತಿದೆ. ಕೊನೆಯ ಕ್ಷಣದಲ್ಲಿ ಅಂತಿಮ ಸ್ಪರ್ಷ ನೀಡುವ ಕಾರ್ಯ ನಡೆಯುತ್ತಿದ್ದು, ಆ. 8ರ ಮಂಗಳವಾರ ನಡೆಯಲಿರುವ ಮೈಸೂರಿನಲ್ಲಿ ಅರಣ್ಯ ಇಲಾಖೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಸರಾ ಗಜಪಡೆಯ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಈ ತಂಡದಲ್ಲಿ ಈ ಬಾರಿ ಶಿವಮೊಗ್ಗದ ಸಕ್ರೆಬೈಲಿನ ಆನೆಗಳನ್ನು ಸೇರ್ಪಡೆಗೊಳಿಸುವ ಪ್ರಯತ್ನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

 

Mysuru Dasara: ಈ ಸಲ ಮೈಸೂರು ದಸರಾದಲ್ಲಿ ಗ್ಯಾರಂಟಿ ಟ್ಯಾಬ್ಲೋ!

ಈ ಸಂಬಂಧ ಸೋಮವಾರ ಸಕ್ರೆಬೈಲಿನ ಆನೆ ಬಿಡಾರಕ್ಕೆ ಭೇಟಿ ನೀಡಿದ ಶಿವಮೊಗ್ಗದ ಡಿಸಿಎಫ್‌, ಎಸಿಎಫ್‌, ಆರ್‌ಎಫ್‌ಒ, ಮೈಸೂರಿನ ವನ್ಯಜೀವಿ ವೈದ್ಯಾಧಿಕಾರಿ ಡಾ.ಮುಜೀಬ್‌ ಇದ್ದ ತಂಡ ಅಲ್ಲಿನ ಆನೆಗಳ ಆರೋಗ್ಯ ಪರಿಶೀಲನೆ ನಡೆಸಿದೆ. ಈ ವರದಿ ನಾಳೆ ನಡೆಯುವ ಸಭೆಯಲ್ಲಿ ಮಂಡಿಸಲಾಗುತ್ತದೆ.

ಹಿಂದಿನ ವರ್ಷ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ ಗೋಪಾಲಸ್ವಾಮಿ, ದುರ್ಗಾಪರಮೇಶ್ವರಿ, ಬಲರಾಮ ಹೆಸರಿನ ಆನೆಗಳೂ ಈ ವರ್ಷದಲ್ಲಿ ಮೃತಪಟ್ಟಿವೆ. ಹಿಂದಿನ ಬಾರಿ ಬಂದಿದ್ದ ಲಕ್ಷ್ಮಿ ಆನೆ ಮರಿ ಹಾಕಿದೆ. ಇದರಿಂದ ನಾಲ್ಕೈದು ಆನೆಗಳ ಕೊರತೆ ಎದುರಾಗಿದ್ದು, ಇದನ್ನು ಭರ್ತಿ ಮಾಡುವುದು ಅರಣ್ಯ ಇಲಾಖೆಗೆ ಅನಿವಾರ್ಯವಾಗಿದೆ. ಹೀಗಾಗಿ ಹೊಸ ಆನೆಗಳ ಸೇರ್ಪಡೆಗೆ ಪ್ರಯತ್ನ ನಡೆದಿದೆ.

ಆಯ್ಕೆ ಹೇಗಿರುತ್ತದೆ?:

ಮೈಸೂರು ದಸರಾ ತಂಡದಲ್ಲಿ ಸಾಮಾನ್ಯವಾಗಿ ಸುಮಾರು 14 ಆನೆಗಳು ಇರುತ್ತದೆ. ಈ ಮೊದಲಿನಿಂದ ಆಯ್ಕೆ ಮಾಡಿದ ತಂಡವನ್ನು ಮುಂದುವರೆಸಲಾಗುತ್ತದೆ. ಆಗಾಗ ಹೊಸ ಆನೆಗಳು ಬೇಕಾದಾಗ ಕರ್ನಾಟಕದ ಬೇರೆ ಬೇರೆ ಆನೆ ಬಿಡಾರದಲ್ಲಿ ಇರುವ ಆನೆಗಳನ್ನು ಪರೀಕ್ಷಿಸಿ ದಸರಾ ತಂಡಕ್ಕೆ ಆಯ್ಕೆಯಾಗುವ ಅರ್ಹತೆ ಕಂಡು ಬಂದಲ್ಲಿ ಮಾತ್ರ ಸೇರ್ಪಡೆಗೊಳಿಸಲಾಗುತ್ತದೆ.

ಆನೆಗಳ ಆಯ್ಕೆಗೆ ಮುನ್ನ ಹೆಣ್ಣಾನೆಗಳ ಗರ್ಭಧಾರಣೆ ಪರೀಕ್ಷೆ, ಆನೆಗಳ ದೈಹಿಕ ಸಾಮರ್ಥ್ಯ ಪರೀಕ್ಷೆ, ಪಟಾಕಿ ಸಿಡಿಸುವ ಚಟುವಟಿಕೆಗಳನ್ನೂ ಮಾಡಲಾಗುತ್ತದೆ.

ದಸರಾ ಗಜಪಡೆಯ ತಂಡದಲ್ಲಿ ಸಧ್ಯ ಕೊಡಗಿನ ದುಬಾರೆ, ನಾಗರಹೊಳೆಯ ಮತ್ತಿಗೋಡು, ಬಳ್ಳೆ, ಚಾಮರಾಜನಗರ ಜಿಲ್ಲೆ ಕೆ.ಗುಡಿ, ಬಂಡೀಪುರದ ರಾಮಾಪುರ ಆನೆ ಶಿಬಿರಗಳಿಂದ ಆನೆಗಳನ್ನು ತರಲಾಗುತ್ತಿದೆ. ಅಲ್ಲಿರುವ ಆನೆಗಳಲ್ಲಿ ಪ್ರತಿ ವರ್ಷ ದಸರಾ ಆರಂಭವಾಗುವ ಎರಡು ತಿಂಗಳ ಮೊದಲೇ ಅರಣ್ಯಾಧಿಕಾರಿಗಳು, ವನ್ಯಜೀವಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ತೆರಳಿ ಆನೆಗಳ ಆರೋಗ್ಯ. ದೈಹಿಕ ಸ್ಥಿತಿಗತಿ, ಹೆಣ್ಣು ಆನೆಗಳು ಗರ್ಭ ಧರಿಸಿದ್ದರೆ ಅವುಗಳ ಮಾಹಿತಿಯನ್ನೆಲ್ಲಾ ಕಲೆ ಹಾಕಲಾಗುತ್ತದೆ. 20-25 ಆನೆಗಳ ಪಟ್ಟಿಯನ್ನು ಸಿದ್ದಪಡಿಸಿಕೊಂಡು ಕೊನೆಗೆ ಹದಿನಾಲ್ಕುಗಳನ್ನು ಅಂತಿಮಗೊಳಿಸಿ ಎರಡು ತಂಡಗಳಲ್ಲಿ ಮೈಸೂರಿಗೆ ಕರೆ ತರಲಾಗುತ್ತದೆ.

ಮಂಗಳವಾರ ಸಭೆ:

ಮೈಸೂರಿನ ಅರಣ್ಯಭವನದಲ್ಲಿ ದಸರಾ ಆನೆಗಳ ಆಯ್ಕೆಗೆ ಸಂಬಂಧಿಸಿ ಅರಣ್ಯ ಇಲಾಖೆ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಹುಲಿ ಯೋಜನೆ ನಿರ್ದೇಶಕರಾದ ಜಿ.ವಿ. ರಂಗರಾವ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಈ ಬಾರಿ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪಟ್ಟಿಅಂತಿಮಗೊಳಿಸಲಾಗುತ್ತದೆ.

ಸೆ.1ರಂದು ಮೈಸೂರಿನತ್ತ ದಸರಾ ಗಜಪಯಣ ಶುರು

ಮೈಸೂರು: ಈ ಬಾರಿಯ ದಸರಾ ಮಹೋತ್ಸವಕ್ಕೆ ಸೆಪ್ಟೆಂಬರ್‌ 1ಕ್ಕೆ ಗಜಪಯಣ ಆರಂಭವಾಗಲಿದ್ದು, ಅದೇ ದಿನ ಗಜಪಡೆಯು ಮೈಸೂರಿಗೆ ಆಗಮಿಸಲಿವೆ ಎಂದು ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಸುತ್ತೂರು ಶ್ರೀಗಳಿಂದ ಚಾಲನೆ.!: ಸಿಎಂ ಸಿದ್ದರಾಮಯ್ಯ ಮಾಹಿತಿ

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ 14 ಆನೆಗಳು ಮೈಸೂರಿಗೆ ಬರಲಿದ್ದು, ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಸಾಂಪ್ರ ದಾಯಿಕವಾಗಿ ಗಜಪಯಣ ಆಯೋಜಿಸಲಾಗಿದೆ ಎಂದರು. ಈ ಬಾರಿಯ ದಸರಾಗೆ ವಿಶೇಷ ಅನುದಾನವನ್ನೇನೂ ಕೇಳಿಲ್ಲ. ಅದ್ಧೂರಿ ದಸರಾಗೆ ಬೇಕಾಗುವಷ್ಟುಅನುದಾನ ಸರ್ಕಾರವೇ ಕೊಡುತ್ತದೆ. ಇನ್ನು, ದಸರಾ ಉದ್ಘಾಟಕರ ಬಗ್ಗೆ ತೀರ್ಮಾನವನ್ನು ಮುಖ್ಯಮಂತ್ರಿ ವಿವೇಚನೆಗೇ ಬಿಟ್ಟಿದ್ದೇವೆ. ಮುಖ್ಯಮಂತ್ರಿಗಳೇ ಉದ್ಘಾಟಕರ ಹೆಸರು ಸೂಚಿಸಲಿದ್ದಾರೆ ಎಂದು ಅವರು ಹೇಳಿದರು.

click me!