
ಬೆಂಗಳೂರು (ಆ.8) : ದೇಶದ್ರೋಹ ಕಾನೂನಿನ ದುರ್ಬಳಕೆ ಹೆಚ್ಚಾಗಿರುವ ಸಂದರ್ಭದಲ್ಲಿ ಆ ಕಾನೂನು ಮುಂದುವರಿಯಬೇಕು ಎಂಬ ಕಾನೂನು ಆಯೋಗದ ಶಿಫಾರಸು ಎಷ್ಟುಸಮಂಜಸ ಎಂದು ಹೈಕೋರ್ಚ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಪ್ರಶ್ನಿಸಿದ್ದಾರೆ.
ಸೋಮವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಎ.ಅಣ್ಣಾಮಲೈ ವಿರಚಿತ ’ಗಾಂಧಿ ದಿ ಲಾಯರ್’ ಕೃತಿ ಲೋಕಾರ್ಪಣೆ('Gandhi the Lawyer' is dedicated to the world) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ತಮ್ಮ ಹೇಳಿಕೆ ಹಾಗೂ ನಡವಳಿಕೆಗೆ ಬದ್ಧರಾಗಿದ್ದರು. ಇದರ ಪರಿಣಾಮ ಅವರು ದೇಶದ್ರೋಹ ಸೇರಿ ಇತರೆ ಪ್ರಕರಣ ಎದುರಿಸಿ ಮೂರುವರೆ ಸಾವಿರ ದಿನ ಜೈಲಿನಲ್ಲಿ ಕಳೆಯಬೇಕಾಯಿತು. ಬ್ರಿಟಿಷರು ತಂದಿದ್ದ ದೇಶದ್ರೋಹದ ಕಾಯ್ದೆಯನ್ನೆ ಈಗ ಮುಂದುವರಿಸಿಕೊಂಡು ಹೋಗುವುದು ಎಷ್ಟುಸರಿ? ಅದರ ದುರ್ಬಳಕೆ ಹೆಚ್ಚಾಗಿರುವ ಹೊತ್ತಲ್ಲಿ ಅದರ ರದ್ದತಿಗೆ ಒತ್ತಾಯಿಸಿದ್ದೆವು. ಆದರೆ, ಕಾನೂನು ಆಯೋಗ ದೇಶದ್ರೋಹದ ಕಾನೂನು ( ಐಪಿಸಿ 124ಎ) ರದ್ದುಗೊಳಿಸುವ ಅಗತ್ಯವಿಲ್ಲ. ಇನ್ನೂ ಹೆಚ್ಚಿನ ಸ್ಪಷ್ಟತೆಗಾಗಿ ತಿದ್ದುಪಡಿ ತರಬೇಕು. ಹೆಚ್ಚಿನ ಶಿಕ್ಷೆ ವಿಧಿಸಬೇಕು ಎಂದು ಶಿಫಾರಸು ನೀಡಿದೆ. ಇದು ಎಷ್ಟರ ಮಟ್ಟಿಗೆ ಸಮಂಜಸ, ಈ ಕಾನೂನು ರದ್ದಾಗಬೇಕು ಎಂಬುದು ನಮ್ಮ ಆಗ್ರಹ ಎಂದರು.
ಗಾಂಧಿಯವರು ದೇಶದ ಸಾಮಾನ್ಯ ರೈತರಿಗೂ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕುರಿತು ಅರ್ಥ ಮಾಡಿಸಿ ಹೋರಾಟಕ್ಕಿಳಿಯುವಂತೆ ಮಾಡಿದ್ದರು. ಆದರೆ ಇಂದು ಅಂತಹ ಮುಖಂಡರ ಕೊರತೆ ಕಾಣುತ್ತಿದೆ ಎಂದರು.
ದೇಶದ್ರೋಹದ ಕಾನೂನು: ರಾಜಕಾರಣದ ಗಾಳಕ್ಕೆ ಸಿಕ್ಕ ಮೀನು!
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, ಐರೋಪ್ಯರು ಗಾಂಧಿ ಹೋರಾಟವನ್ನು ರಕ್ತ ರಹಿತ ಕ್ರಾಂತಿ ಎಂದು ಕರೆದಿದ್ದಾರೆ. ಮಾನವನ ಹಕ್ಕುಗಳು ಹೇಗಿರಬೇಕು ಎಂಬುದರ ಬಗ್ಗೆ ವಿಶ್ವ ಸಂಸ್ಥೆಯ ಕರಡು ಸಿದ್ಧಪಡಿಸುವಾಗ ಗಾಂಧೀಜಿ ಕರ್ತವ್ಯದ ಕುರಿತು ಒತ್ತುಕೊಟ್ಟು ಹೇಳಿಕೆ ನೀಡಿದ್ದರು. ಅವರ ಜೀವನ ಯುವ ವಕೀಲರಿಗೆ ಮಾದರಿ ಎಂದು ಹೇಳಿದರು.
ಕಾನೂನು ಕಾಲೇಜು ವಿಶ್ವವಿದ್ಯಾಲಯದ ಡೀನ್ ಪ್ರೊ. ಸುರೇಶ್ ವಿ.ನಾಡಗೌಡರ್, ಲೇಖಕ ಎ.ಅಣ್ಣಾಮಲೈ ಮಾತನಾಡಿದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಬರಹಗಾರ ಪ್ರಕಾಶಕರೂ ಇದ್ರೇನೇ ಪುಸ್ತಕೋದ್ಯಮ ಬೆಳೆಯಲು ಸಾದ್ಯ: ಸಿಎಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ