
ತುಮಕೂರು/ಚಿಕ್ಕನಾಯಕನಹಳ್ಳಿ (ನ.26): ಕಾಂಗ್ರೆಸ್‌ನಲ್ಲಿ ನಾಯಕತ್ವದ ಕುರಿತಾದ ಚರ್ಚೆಗಳು ತಾರಕಕ್ಕೇರಿರುವ ಸಂದರ್ಭದಲ್ಲಿ, ಮಾಜಿ ಸಚಿವ ಕೆಎನ್ ರಾಜಣ್ಣ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನೀಡಿರುವ ಹೇಳಿಕೆಗಳು ತೀವ್ರ ಸಂಚಲನ ಮೂಡಿಸಿವೆ. ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದ 'ಕುರ್ಚಿ ಕದನ' ಕುರಿತು ಮಾತನಾಡಿರುವ ರಾಜಣ್ಣ, ಡಿಕೆ ಶಿವಕುಮಾರ ಸಿಎಂ ಆಗಲಿ ಆದರೆ ಅದಕ್ಕೂ ಮೊದಲು ಜಿ ಪರಮೇಶ್ವರ್ ಸಿಎಂ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ ನೇತೃತ್ವದಲ್ಲಿ ಚುನಾವಣೆ ಹೋಗಿ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡಿ ಬಹುಮತ ತಂದು ಆಗ ಡಿಕೆ ಶಿವಕುಮಾರ್ ಐದು ವರ್ಷ ಸಿಎಂ ಆಗಲಿ ಎಂದು ರಾಜಣ್ಣ ಪುನರುಚ್ಚರಿಸಿದರು. ಆದರೆ, ಕೊನೆಯಲ್ಲಿ ಅವರು ಡಿಕೆ ಶಿವಕುಮಾರ್ ಸಿಎಂ ಆಗಲೇಬಾರದು ಎಂದು ಪರೋಕ್ಷವಾಗಿ ಹೇಳಿ ಗೊಂದಲ ಮೂಡಿಸಿದ್ದಾರೆ.
2013 ರಲ್ಲಿ ಪರಮೇಶ್ವರ್ ಪಕ್ಷ ಅಧಿಕಾರಕ್ಕೆ ತಂದರು. ಆದರೆ ಅವರು ಸೋತು ಬಿಟ್ಟರು. ಡಿಕೆ ಶಿವಕುಮಾರ ಅವರು ಕೂಲಿ ಕೇಳಿದಂತೆ ಸಿಎಂ ಸ್ಥಾನ ಕೇಳುತ್ತಿದ್ದಾರೆ. ಹಾಗಾದರೆ ಪರಮೇಶ್ವರ್ ಕೂಡ ಸರ್ಕಾರ ಅಧಿಕಾರಕ್ಕೆ ತಂದಿದ್ದಾರೆ ಅಂದ್ಮೇಲೆ ಅವರು ಕೂಡ ಕೂಲಿ ಕೇಳಬೇಕಲ್ಲ. ಮೊದಲು ಜಿ ಪರಮೇಶ್ವರ್ ಅವರ ಹಳೇ ಕೂಲಿ ಕ್ಲಿಯರ್ ಆಗಲಿ ನಂತರ ಡಿಕೆ ಶಿವಕುಮಾರ ಸಿಎಂ ಬಗ್ಗೆ ನೋಡೋಣ ಎನ್ನುವ ಮೂಲಕ ಸಿಎಂ ಹುದ್ದೆಯ ರೇಸ್‌ನಲ್ಲಿ ಪರಮೇಶ್ವರ್ ಪರ ಬ್ಯಾಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರಿಯಲಿ:
ನನ್ನ ವೈಯಕ್ತಿಕ ಆಶಯ ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಬೇಕು ಎಂದು. ಒಂದು ವೇಳೆ ಅನಿವಾರ್ಯತೆ ಬಂದರೆ ಪರಮೇಶ್ವರ್ ಸಿಎಂ ಆಗಲಿ ಅನ್ನೋದು ನನ್ನ ಅಭಿಪ್ರಾಯ ಎಂದರು. ಇದೇ ವೇಳೆ ಅಧಿಕಾರ ಹಂಚಿಕೆಯ ಆಣೆ ಪ್ರಮಾಣ ತಳ್ಳಿ ಹಾಕಿದ ರಾಜಣ್ಣ ಅವರು, 30-30 ತಿಂಗಳು ಒಪ್ಪಂದ ಎಂದು ಸುಮ್ಮನೇ ಹೇಳ್ತಾರೆ. ಯಾರಾದರೂ ಬಂದು ಹೇಳೋರಿದ್ದಾರಾ? ಸಿಎಲ್‌ಪಿ (CLP) ಯಲ್ಲಿ ಯಾರಾದರೂ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಎಂದು ಕೇಳಿದಾರಾ? ಎಂದು ಪ್ರಶ್ನಿಸಿದರು.
ಹೈಕಮಾಂಡ್ ನಾಯಕತ್ವ ಬಗ್ಗೆ ಯಾರೂ ಮಾತಾಡಬಾರದು ಎಂದು ಹೇಳಿದ್ದಾರೆ, ನಾನು ಅದರ ಬಗ್ಗೆ ಮಾತಾಡಲ್ಲ. ಒಂದು ಅಥವಾ ಎರಡು ದಿನದಲ್ಲಿ ಎಐಸಿಸಿ (AICC) ಎಲ್ಲವನ್ನೂ ಕ್ಲಿಯರ್ ಮಾಡುತ್ತೆ ಎಂದರು. ಇದೇ ವೇಳೆ ಜಾತಿ ರಾಜಕಾರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ ರಾಜಣ್ಣ ಅವರು, ದಾರ್ಶನಿಕರ ದಿನಾಚರಣೆ ಕೇವಲ ಸಮುದಾಯಕ್ಕೆ ಸೀಮಿತವಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ