
ಹುಬ್ಬಳ್ಳಿ-ಧಾರವಾಡ (ನ.26): ಬೆಳಗಾವಿ ಅಧಿವೇಶನದಲ್ಲಿ ಬರಿ ಪ್ರತಿಭಟನೆಗಳು ನಡೆಯುತ್ತಲೇ ದೂರದ ಮೈಸೂರು, ಬೆಂಗಳೂರು ನಿಂದ ಬರೋರು ಶುಕ್ರವಾರ ಹೋಗಿ ಬಿಡ್ತಾರೆ. ಕೇವಲ ಪ್ರತಿಭಟನೆ ಮಾಡೋದು, ಬಾವಿಗೆ ಇಳಿದು ಕೂರುವದು ಮಾಡಬೇಡಿ ಅಂತ ಎಲ್ಲರಿಗೆ ಹೇಳಿದ್ದೇನೆ. ಉತ್ತರ ಕರ್ನಾಟಕ ಸದಸ್ಯರ ಪ್ರಶ್ನೆಗೆ ಹೆಚ್ಚಿನ ಅವಕಾಶ ನೀಡುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಎಲ್ಲಾ ಶಾಸಕರು ಆಸಕ್ತಿ ವಹಿಸಿ ಸದನದಲ್ಲಿ ಭಾಗಿಯಾಗಬೇಕು. ಕೇವಲ ಪ್ರತಿಭಟನೆ ಮಾಡೋದು, ಬಾವಿಗೆ ಇಳಿದು ಕೂರುವದು ಮಾಡಬೇಡಿ ಅಂತ ಎಲ್ಲರಿಗೆ ಹೇಳಿದ್ದೇನೆ. ಶಾಸಕರು ತಂಗಲು ಶಾಸಕರ ಭವನ ಕಟ್ಟಿಸುವ ಅವಶ್ಯಕತೆ ಇದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಾಗುವದು ಎಂದರು. ಅನೇಕ ಶಾಸಕರು ಸಚಿವರು ಇಂತಹದೇ ಹೋಟೆಲ್‌ನಲ್ಲಿ ಕೋಣೆ ಬೇಕು ಅಂತ ಪತ್ರ ಬರೆದಿದ್ದಾರೆ. ಅದನ್ನು ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆ ವಿಚಾರವಾಗಿ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು. ಇಲ್ಲಿವರಗೆ ಸಭಾಪತಿ ಮೇಲೆ ಅವಿಶ್ವಾಸ ಮಂಡನೆ ಮಾಡಿಲ್ಲಾ. ಭ್ರಷ್ಟಾಚಾರ, ಏಕಪಕ್ಷೀಯವಾಗಿ ವರ್ತಿಸಿದ್ರೆ ಅವಿಶ್ವಾಸ ಮಂಡನೆ ಮಾಡಬೇಕು. ಆದ್ರೆ ನನ್ನ ಮೇಲೆ ಯಾವುದೇ ಆರೋಪಗಳಿಲ್ಲಾ. ಅವಿಶ್ವಾಸ ಮಂಡನೆ ಮಾಡಲು ಏನಾದ್ರು ಬೇಕಲ್ಲಾ..? ಎಂದು ಪ್ರಶ್ನಿಸಿದರು.
ನಾನು ಸಭಾಪತಿಯಾಗಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪ್ರಜಾಪ್ರಭುತ್ವ ದ ಅವರ ಅಧಿಕಾರ ಬಗ್ಗೆ ನಾನು ಏನು ಹೇಳಲ್ಲಾ. ಇಲ್ಲಿವರಗೆ 24 ಸಭಾಪತಿ ಗಳಾಗಿದ್ದಾರೆ. ಆದ್ರೆ ಇಲ್ಲಿವರಗೆ ಯಾರ ಮೇಲೆ ಅವಿಶ್ವಾಸ ಮಂಡನೆಯಾಗಿಲ್ಲಾ. ಪ್ರಮಾಣಿಕವಾಗಿ ಕೆಲಸ ಮಾಡೋರು ಸಭಾಪತಿಯಾಗಿರಬೇಕು. ಆದ್ರೆ ಅವರು ಮಾಡಲೇಬೇಕು ಅಂದ್ರೆ ಮಾಡಲಿ. ಆದ್ರೆ ಮಾಡಿದ್ರೆ ಯಾಕೆ ಮಾಡಿದ್ರೆ ಅಂತ ಕೇಳ್ತೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ