ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸುವ ಜಾಗತಿಕ ಅತ್ಯುತ್ತಮ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನದಲ್ಲಿ ರಾಜ್ಯದ ವಿಹಾನ್ ತಾಳ್ಯ ವಿಕಾಸ್‌ಗೆ 10 ವರ್ಷದೊಳಗಿನ ವಿಭಾಗದಲ್ಲಿ 2023ನೇ ಸಾಲಿನ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿದೆ
ಬೆಂಗಳೂರು (ಅ.22) : ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸುವ ಜಾಗತಿಕ ಅತ್ಯುತ್ತಮ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನದಲ್ಲಿ ರಾಜ್ಯದ ವಿಹಾನ್ ತಾಳ್ಯ ವಿಕಾಸ್‌ಗೆ 10 ವರ್ಷದೊಳಗಿನ ವಿಭಾಗದಲ್ಲಿ 2023ನೇ ಸಾಲಿನ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿದೆ.
ಕರ್ನಾಟಕದ ನಲ್ಲೂರಿನ ಪಾರಂಪರಿಕ ಹುಣಸೆ ತೋಪಿನ ಬಳಿಯ ಪುರಾತನ ದೇವಸ್ಥಾನದ ಗೋಡೆ ಮೇಲೆ ಮರದ ಕಾಂಡದ ಜೇಡವು ತನ್ನ ಬೇಟೆ ತಪ್ಪಿಸಿಕೊಳ್ಳದಂತೆ ತಡೆಯುವ ಚಿತ್ರವನ್ನು ಸೆರೆ ಹಿಡಿದಿದ್ದ ವಿಹಾನ್ ತಾಳ್ಯ ವಿಕಾಸ್ ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಅತ್ಯುತ್ತಮ ವನ್ಯಜೀವಿ ಛಾಯಾಗ್ರಹಣ ಪ್ರದರ್ಶನಕ್ಕೆ ಕಳುಹಿಸಿದ್ದರು. ಇದೀಗ ಆ ಛಾಯಾಚಿತ್ರಕ್ಕೆ 10 ವರ್ಷದೊಳಗಿನ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
ಬಂಡೆ ಮೇಲೆ ಜೊತೆಯಾಗಿ ಫೋಸ್ ಕೊಟ್ಟ ಬ್ಲ್ಯಾಕ್ ಪ್ಯಾಂಥರ್, ಚಿರತೆ: ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಸ್ಪರ್ಧೆಯ ಕೆಲವು ವಿವರ:
ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸುವ ಜಾಗತಿಕವಾಗಿ ಹೆಸರಾಂತ ಸ್ಪರ್ಧೆಯು ಪ್ರಪಂಚದಾದ್ಯಂತದ ಅತ್ಯುತ್ತಮ ವನ್ಯಜೀವಿ ಛಾಯಾಚಿತ್ರವನ್ನು ಪ್ರದರ್ಶಿಸುತ್ತದೆ. ಜಗತ್ತಿನಾದ್ಯಂತ ಅರ್ಧಕ್ಕಿಂತ ಹೆಚ್ಚು ದೇಶಗಳನ್ನು ಪ್ರತಿನಿಧಿಸುತ್ತದೆ. ಪ್ರತಿ ವರ್ಷ ಸ್ಪರ್ಧೆಗೆ ಸಾವಿರಾರು ಚಿತ್ರಗಳನ್ನು ಪಡೆಯುತ್ತದೆ. ಈ ಪೈಕಿ, ಕೇವಲ 100 ಚಿತ್ರಗಳನ್ನು ಗುರುತಿಸುವಿಕೆ ಮತ್ತು ಪ್ರಶಸ್ತಿಗಳಿಗಾಗಿ ಶಾರ್ಟ್‌ಲಿಸ್ಟ್ ಮಾಡುತ್ತದೆ. ಈ ವರ್ಷದ ಸ್ಪರ್ಧೆಗೆ 95 ದೇಶಗಳಿಂದ 50ಸಾವಿರ ಚಿತ್ರಗಳನ್ನು ಸ್ವೀಕರಿಸಿದೆ.
ಇದು ದೇವಭೂಮಿ; ಉತ್ತರಾಖಂಡದ ಈ 10 ದೇವಾಲಯಗಳು ಹಿಂದೂಗಳಿಗೆ ಬಲು ಪವಿತ್ರ
ವರ್ಷದ ವನ್ಯಜೀವಿ ಛಾಯಾಗ್ರಾಹಕ ಸ್ಪರ್ಧೆಯನ್ನು ಮೂಲತಃ ಬಿಬಿಸಿ ಆಯೋಜಿಸಿತ್ತು. 1984ರಿಂದ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯವು ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ಆಯೋಜಿಸುವ ಚುಕ್ಕಾಣಿ ಹಿಡಿದಿದೆ.