Festivals

ಕೇದಾರನಾಥ

ಉತ್ತರಾಖಂಡದ ಪವಿತ್ರವಾದ ದೇವಾಲಯಗಳಲ್ಲಿ ಕೇದಾರನಾಥ ಕೂಡ ಒಂದು. ಇದು ಹಿಂದೂಗಳ ಪುಣ್ಯಕ್ಷೇತ್ರ. ಇಲ್ಲಿ ಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದು, 12 ಜ್ಯೋತಿರ್ಲಿಂಗಗಳಲ್ಲಿ ಪ್ರಮುಖವಾಗಿದೆ.
 

Image credits: social media

ಬದರಿನಾಥ್‌

ಉತ್ತರಾಖಂಡದ ಪವಿತ್ರವಾದ ಯಾತ್ರಾ ಸ್ಥಳಗಳಲ್ಲಿ ಬದರಿನಾಥ್‌ ಕೂಡ ಒಂದು. ಇಲ್ಲಿ ಮಹಾವಿಷ್ಣುವನ್ನು ಆರಾಧಿಸಲಾಗುತ್ತದೆ. ಇದು ಪ್ರಮುಖ ಚಾರ್ ಧಾಮ್‌ ಯಾತ್ರೆ ಅಥವಾ ಚೋಟಾ ಚಾರ್ ಧಾಮ್‌ ಯಾತ್ರೆಗಳಲ್ಲಿ ಒಂದು.

Image credits: social media

ಜಾಗೇಶ್ವರ ಧಾಮ್

ಇದು ಒಂದು ರಮಣೀಯ ಮತ್ತು ಶಾಂತ ಸ್ಥಳವಾಗಿದೆ. ಈ ಸ್ಥಳವು ಸುಮಾರು 124 ಹಿಂದೂ ದೇವಾಲಯಗಳ ಗುಂಪಿಗೆ ಜನಪ್ರಿಯವಾಗಿದೆ. ಇದು 1870 ಮೀಟರ್ ಎತ್ತರದಲ್ಲಿ ಇದೆ.
 

Image credits: social media

ಗಂಗೋತ್ರಿ ಧಾಮ್

ಇದು ಉತ್ತರಾಖಂಡದ ಗರ್ವಾಲ್ ಪ್ರದೇಶದ ನಾಲ್ಕು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇದು ಭಾಗೀರಥಿ ನದಿಯ ದಡದಲ್ಲಿದೆ ಮತ್ತು ಇದು ಭಾರತದ ಪವಿತ್ರ ಹಿಂದೂ ದೇವಾಲಯಗಳಲ್ಲಿ ಒಂದು.

Image credits: social media

ಯಮುನೋತ್ರಿ ಧಾಮ್

ಯಮುನಾ ನದಿಯ ಮೂಲ ಎಂದು ಕರೆಯಲ್ಪಡುವ ಯಮುನೋತ್ರಿ ಧಾಮ್‌ನ್ನು ಅತ್ಯಂತ ಪವಿತ್ರ ಮತ್ತು ಪೂಜ್ಯವೆಂದು ಪರಿಗಣಿಸಲಾಗಿದೆ. ಇದು ಉತ್ತರಕಾಶಿಯಿಂದ ಕೇವಲ 129 ಕಿಮೀ ದೂರದಲ್ಲಿದೆ.

Image credits: social media

ತುಂಗನಾಥ್ ಧಾಮ್

ಇದು ಹಿಂದೂ ಧರ್ಮದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಇದು 3,680 ಮೀಟರ್ ಎತ್ತರದಲ್ಲಿದೆ. ಈ ದೇವಾಲಯವು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ ಕೇದಾರ ದೇವಾಲಯಗಳಲ್ಲಿ ಅತಿ ಎತ್ತರದ ದೇವಾಲಯವಾಗಿದೆ.

Image credits: social media

ನೀಲಕಂಠ ಮಹಾದೇವ ದೇವಾಲಯ

ಇದು ಶಿವನ ಅಂಶವಾದ ನೀಲಕಂಠನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಋಷಿಕೇಶದಿಂದ ಸುಮಾರು 32 ಕಿ.ಮೀ ದೂರದಲ್ಲಿದೆ. 

Image credits: social media

ಧರಿದೇವಿ ಮಾತಾ ದೇವಸ್ಥಾನ

ಈ ದೇವಾಲಯವು ಶ್ರೀನಗರ ಮತ್ತು ರುದ್ರಪ್ರಯಾಗ ನಡುವೆ ಅಲಕನಂದಾ ನದಿಯ ದಡದಲ್ಲಿದೆ. ಈ ದೇವಿಯನ್ನು ಉತ್ತರಾಖಂಡದಲ್ಲಿರುವ ಚಾರ್ ಧಾಮ್‌ಗಳ ರಕ್ಷಕಿ ಎಂದು ಪರಿಗಣಿಸಲಾಗಿದೆ.

Image credits: social media

ಗಿರಿಜಾ ದೇವಿ ಮಂದಿರ

ಇದು ಉತ್ತರಾಖಂಡದ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಇದು ಅತ್ಯಂತ ಪವಿತ್ರ ಸ್ಥಳವಾಗಿದೆ. ಗಿರಿಜಾ ದೇವಿಯು ಹಿಮಾಲಯ ದೇವನ ಮಗಳು ಮತ್ತು ಶಿವನ ಪತ್ನಿಯಾಗಿದ್ದು, ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ.

Image credits: social media

ಚಿತಾಯ್ ಗೋಲು ದೇವತಾ ಮಂದಿರ

ಉತ್ತರ ಖಂಡದ ಪ್ರಮುಖ ದೇವಾಲಯಗಳಲ್ಲಿ ಚಿತಾಯ್ ಗೋಲು ದೇವತಾ ಮಂದಿರ ಕೂಡ ಒಂದು. ಸ್ಥಳೀಯರು ಗೋಲು ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಇಲ್ಲಿಗೆ ಅನೇಕ ಭಕ್ತರು ಭೇಟಿ ನೀಡುತ್ತಾರೆ.

Image credits: social media

ಸಾವಿಗೂ ಮುಂಚೆ ಸಿಗುತ್ತೆ ಮುನ್ಸೂಚನೆ; ಈ 6 ಲಕ್ಷ್ಮಣಗಳು ಕಂಡರೆ 6 ತಿಂಗಳಲ್ಲಿ ಮರಣ

ಜ್ಞಾನವಾಪಿ ಮಸೀದಿ ವಿವಾದ; ಮಣ್ಣಲ್ಲಿ ಹೂತು ಹೋಗಿದೆಯಾ ಶಿವನ ದೇವಾಲಯ..?

ಅಧಿಕ ಮಾಸ ಆರಂಭ; ಏನು ಮಾಡಬೇಕು? ಏನು ಮಾಡಬಾರದು ?

ಈ 5 ದೇವಾಲಯಗಳಲ್ಲಿ ಪುರುಷರಿಗೆ ನೋ ಎಂಟ್ರಿ; ಕಾರಣ ಏನು?