ಮನೆಗಳಿಗೆ ನುಗ್ಗುತ್ತಿದ್ದ ಪುಂಡಾನೆಯನ್ನು ಕೊನೆಗೆ ಬಂಡೀಪುರದ ಅಧಿಕಾರಿಗಳು ಖೆಡ್ಡಾಗೆ ಕೆಡವಿದ್ದಾರೆ. ಹೀಗೆ ಸೆರೆಸಿಕ್ಕುವ ಪುಂಡಾನೆಗೆ ಪಾಠ ಕಲಿಸುವ ಟ್ರೈನಿಂಗ್ ಕೊಡುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಆ.27) : ಅವನದು ಮೂರು ರಾಜ್ಯದ ಕಾಡಂಚಿನ ಗ್ರಾಮದಲ್ಲಿ ಸಂಚಾರ. ಅವನ ಹೆಸರು ಕೇಳಿದ್ರೆನೇ ನಿದ್ರೆಯಲ್ಲೂ ಅರಣ್ಯಾಧಿಕಾರಿಗಳು ಬೆಚ್ಚಿ ಬೀಳ್ತಾಯಿದ್ರು. ಅವನ ಹೆಸರು 'ಟ್ರೈ ಜಂಕ್ಷನ್ ಕಿಂಗ್', ಅಕ್ಕಿ ರಾಜ ಅನ್ನೋ ಹೆಸರಿನಿಂದ ಖ್ಯಾತಿ ಹೊಂದಿದ್ದ. ಕೊನೆಗೆ ಬಂಡೀಪುರದ ಅಧಿಕಾರಿಗಳು ಖೆಡ್ಡಾಗೆ ಕೆಡವಿದ್ದರು. ಹೀಗೆ ಸೆರೆಸಿಕ್ಕುವ ಪುಂಡಾನೆಗೆ ಪಾಠ ಕಲಿಸುವ ಟ್ರೈನಿಂಗ್ ಕೊಡುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇದು ಸಾಕಾನೆ ಶಿಬಿರದ ಜೊತೆಗೆ ಪುಂಡಾನೆಗೆ ಟ್ರೈನಿಂಗ್ ಕೊಡುವ ಶಿಬಿರವಾಗಿ ಬದಲಾಗಿದೆ.
undefined
ಹೌದು ಎಂಟೆದೆಯ ಬಂಟನಾದ್ರು ಕೂಡ ಈತನನ್ನು ನೋಡಿದ್ರೆ ಗಾಬರಿಯಾಗದೆ ಇರೋದಿಲ್ಲ. ಈತ ಒಂದು ಗುಟುರು ಹಾಕಿದ್ರೆ ಸುತ್ತ ಮುತ್ತ ಇರೋ ಪ್ರಾಣಿಗಳೆಲ್ಲ ಬೆಚ್ಚಿ ಬೀಳೋದು ಪಕ್ಕಾ. ಅಜಾನು ಬಾಹು ದೇಹ ದೈತ್ಯ ಒಂಟಿ ಸಲಗ ಈಗ ಅರಣ್ಯಾಧಿಕಾರಿಗಳ ತೆಕ್ಕೆಗೆ ಬಿದ್ದಿದೆ. ಕಳೆದ ಎರಡು ವರ್ಷಗಳಿಂದ ಬಿಟ್ಟು ಬಿಡದೆ ತಮಿಳುನಾಡು, ಕರ್ನಾಟಕ ಹಾಗೂ ಕೇರಳದ ಕಾಡಂಚಿನ ಜಮೀನುಗಳು ಮತ್ತು ತೋಟದ ಮನೆಗಳಿಗೆ ನುಗ್ಗಿ ದಾಂದಲೆ ನಡೆಸುತ್ತಿದ್ದು ರೈತರಿಗೆ ದುಃಸ್ವಪ್ನವಾಗಿದ್ದ ಕೆಲವೊಂದು ತೋಟದ ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಅಂಗಡಿ ಮನೆಗಳ ಬಾಗಿಲು ಮುರಿದು ಬಾಳೆಹಣ್ಣು, ಬೆಲ್ಲ, ತರಕಾರಿ ಇನ್ನಿತರ ಪದಾರ್ಥಗಳನ್ನು ಲೂಟಿ ಮಾಡುತ್ತಿದ್ದ ಟ್ರೈ ಜಂಕ್ಷನ್ ಕಿಂಗ್ ಖೆಡ್ಡಾಗೆ ಬಿದ್ದಿದ್ದು ಈ ವಿಚಾರ ಕೇಳಿ ಜನರು ಫುಲ್ ಖುಷ್ ಆಗಿದ್ದರು .ಒಂಟಿ ಮನೆಗಳನ್ನು ಟಾರ್ಗೆಟ್ ಮಾಡ್ತಿದ್ದ, ಇದೀಗ ಸೆರೆಹಿಡಿದ ಬಳಿಕ ಇಂತಹ ಪುಂಡಾನೆಗೆ ಟ್ರೈನಿಂಗ್ ಕೊಡ್ತಿದ್ದು, ಕ್ರಾಲ್ ನಲ್ಲಿಟ್ಟು ಪಳಗಿಸುವ ಕೆಲಸಕ್ಕೆ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.
ವನ್ಯಜೀವಿ ರಕ್ಷಣೆ: ಸಿಎಂಗೆ ರಿಷಬ್ ಶೆಟ್ಟಿ 22 ಅಂಶಗಳ ಮನವಿ
ಇನ್ನೂ ಬಂಡೀಪುರದ ರಾಂಪುರ ಆನೆ ಶಿಬಿರದಲ್ಲಿ ಇಲ್ಲಿಯವರೆಗೂ ಕೂಡ ಸಾಕಾನೆಗಳನ್ನು ಸಾಕುವ ಬಿಡಾರವಾಗಿತ್ತು. ಆದ್ರೆ ಕಾಡಿನಿಂದ ನಾಡಿಗೆ ಬಂದು ದಾಂಧಲೆ ನಡೆಸಿ ಸೆರೆಸಿಕ್ಕುವ ಕಾಡಾನೆಗಳಿಗೆ ಪಾಠ ಕಲಿಸುವ ಟ್ರೈನಿಂಗ್ ಕೊಡುವ ಕೆಲಸಕ್ಕೆ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಮೂರಕ್ಕೂ ಹೆಚ್ಚು ಪುಂಡಾನೆಗಳು ಸೆರೆಸಿಕ್ಕಿವೆ.ಈ ಸೆರೆ ಸಿಕ್ಕ ಆನೆಗಳನ್ನು ರಾಂಪುರ ಆನೆ ಶಿಬಿರಕ್ಕೆ ತಂದು ಟ್ರೈನಿಂಗ್ ಕೊಡಲಾಗ್ತಿದೆ. ಮೊದಲ ಹಂತದಲ್ಲಿ ಕ್ರಾಲ್ ಅನ್ನೋ ಸಿದ್ದಪಡಿಸಿ ಪುಂಡಾನೆಯನ್ನು ಅದರಲ್ಲಿ ಕೂಡಿ ಹಾಕ್ತಾರೆ. ನಂತರ ನಿಧಾನವಾಗಿ ಆ ಕಾಡಾನೆಯ ಪೋಷಣೆಯ ಜವಾಬ್ದಾರಿ ಒಬ್ಬ ಮಾವುತ ಅಥವಾ ಕಾವಾಡಿಗೆ ವಹಿಸಲಾಗ್ತಿದ್ದು, ಅದಕ್ಕೆ ಅಗತ್ಯವಾದ ಟ್ರೈನಿಂಗ್ ಕೊಡಲಾಗ್ತಿದೆ. ಇದೀಗ ಮೂರಕ್ಕೂ ಹೆಚ್ಚು ಆನೆಗಳಿಗೆ ಟ್ರೈನಿಂಗ್ ಕೊಡಲಾಗಿದೆ.
ಒಟ್ನಲ್ಲಿ ಬಂಡೀಪುರದ ರಾಂಪುರ ಆನೆ ಶಿಬಿರ(Rampur Elephant Camp in Bandipur) ಇಲ್ಲಿಯವರೆಗೂ ಸಾಕಾನೆಗಳ ಅಡ್ಡವಾಗಿತ್ತು. ಇದೀಗ ಪುಂಡಾನೆ ಪಳಗಿಸುವ ಕೆಲಸಕ್ಕೂ ಕೂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈ ಹಾಕಿದ್ದಾರೆ.ಆ ಮೂಲಕ ಸೆರೆಸಿಕ್ಕುವ ಪುಂಡಾನೆಗಳಿಗೆ ಟ್ರೈನಿಂಗ್ ಕೊಡಲಾಗ್ತಿದೆ.
ರೌಡಿ ಕೋತಿ ಕೊನೆಗೂ ಸೆರೆ, ನಿಟ್ಟುಸಿರು ಬಿಟ್ಟ ಹಳೇ ಕುಂದುವಾಡ ಗ್ರಾಮಸ್ಥರು!