ವಿಘ್ನೇಶ್ವರನ ಮೂರ್ತಿ ತಯಾರಿಸುವವರಿಗೇ ನೂರೆಂಟು ವಿಘ್ನಗಳು ಎದುರಾಗಿವೆ. ಪ್ರತಿ ಬಾರಿಯಂತೆಯೂ ಮಣ್ಣಿನ ಗಣಪನಾ ಅಥವಾ ಪಿಓಪಿ ಗಣಪನಾ? ಎಂಬ ಗೊಂದಲ ಪ್ರಾರಂಭವಾಗಿದೆ.
ವರದಿ - ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಆ.27): ಈ ವರ್ಷ ಅಧಿಕ ಮಾಸ ಹೀಗಾಗಿ ಗಣೇಶ ಚತುರ್ಥಿ ಒಂದು ತಿಂಗಳು ಮುಂದಕ್ಕೆ ಹೋಗಿದೆ. ಈ ನಡುವೆ ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಗಣೇಶನ ಮೂರ್ತಿ ತಯಾರಿಸುವ ಕಾರ್ಯವು ಭರದಿಂದ ಸಾಗಿದೆ. ವಿಘ್ನೇಶ್ವರನನ್ನೆ ತಯಾರಿಸುವ ಮೂರ್ತಿ ತಯಾರಿಕರಿಗೆ ನೂರೆಂಟು ವಿಘ್ನಗಳು ಎದುರಾಗಿವೆ. ಪ್ರತಿ ಬಾರಿಯಂತೆಯೂ ಈ ಬಾರಿ ಮಣ್ಣಿನ ಗಣಪನಾ ಹಾಗೂ ಪಿಓಪಿ ಗಣಪನಾ? ಎಂಬ ಗೊಂದಲ ಪ್ರಾರಂಭವಾಗಿದೆ. ಈ ಬಾರಿ ಅತಿ ಹೆಚ್ಚು ಗೊಂದಲಕ್ಕೀಡಾದವರು ಗಣೇಶ ಮೂರ್ತಿ ತಯಾರಕರು.
ವಿಜಯಪುರ ನಗರದಲ್ಲಿ ಹತ್ತಾರು ಕುಟುಂಬಗಳು ಮಣ್ಣಿನ ಗಣೇಶ ಮೂರ್ತಿ ತಯಾರಿಸಿ ಬದುಕು ಸಾಗಿಸುತ್ತಿದ್ದಾರೆ. ಅತಿ ಹೆಚ್ಚು ಮಣ್ಣಿನ ಗಣೇಶ ಮೂರ್ತಿ ತಯಾರಕರೇ ಇದ್ದಾರೆ. ಕೆಲವರು ಪಿಓಪಿ (Plaster of Paris) ಗಣೇಶ ಮೂರ್ತಿ ತಂದು ವ್ಯಾಪಾರ ನಡೆಸುತ್ತಾರೆ. ಸರಕಾರ ಪಿಓಪಿ ಗಣೇಶ ಮೂರ್ತಿ ನಿಷೇಧ ಹೇರಿದ್ದರೂ ಕೂಡಾ ಭಕ್ತರು ಮಾತ್ರ ಪಿಓಪಿ ಮೂರ್ತಿ ಕೇಳುತ್ತಾರೆ. ಪಿಓಪಿ ಗಣೇಶ ಮೂರ್ತಿ ನೋಡಲು ಅಂದವಾಗಿರುತ್ತದೆ. ಅಲ್ಲದೇ ಮುಕ್ಕಾಗುವದಿಲ್ಲಾ ಹೀಗಾಗಿ ನಂಬಿಕೆಗಳಿಗೆ ಯಾವದೇ ಧಕ್ಕೆ ಬಾರದಂತೆ ಗಣೇಶ ಉತ್ಸವ ಆಚರಿಸಬಹುದು ಎಂಬುದು ಭಕ್ತರ ಕಲ್ಪನೆ. ಇನ್ನೂ ಮಣ್ಣಿನ ಗಣಪ ನೋಡಲು ಅಷ್ಟು ಆಕರ್ಷಕವಾಗಿರೊದಿಲ್ಲಾ, ಮಣ್ಣಿನ ಮೂರ್ತಿಯಾದ್ರೆ ನಾಜೂಕು ಅಲ್ಲದೇ ಮುಕ್ಕಾದರೆ ದೇವರ ಕೋಪಕ್ಕೆ ತುತ್ತಾದೆವು ಎಂಬ ಭಯದಲ್ಲಿ ಭಕ್ತರು ಹೆಚ್ಚಾಗಿ ಪಿಓಪಿ ಮೂರ್ತಿಯ ಕಡೆಗೆ ಒಲವು ತೊರ್ತಾರೆ. ಇನ್ನೂ ಕೆಲ ಸಂಪ್ರದಾಯಸ್ಥರು ಮಾತ್ರ ಮಣ್ಣಿನ ಮೂರ್ತಿ ಕಡೆ ಒಲವು ತೊರ್ತಾರೆ. ಹೀಗಾಗಿ ಮೂರ್ತಿ ತಯಾರಕರು ಯಾವ ಗಣಪತಿ ತಯಾರಿಸಬೇಕು ಎಷ್ಟು ತಯಾರಿಸಬೇಕು ಎಂಬ ಗೊಂದಲದಲ್ಲಿ ಇದ್ದಾರೆ.
3 ಈಡಿಯಟ್ಸ್ ಸಿನಿಮಾ ಶೈಲಿಯಲ್ಲಿ ಹಸೆಮಣೆಯಿಂದ ಎದ್ದು ಹೋದ ಮಗಳನ್ನು ಪ್ರಿಯಕರನೊಂದಿಗೆ ಸೇರಿಸಿದ ಪೋಷಕರು
ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ತಯಾರಿಕೆ ಸರಳವಲ್ಲ: ಗಣೇಶನ ಪ್ರತಿಷ್ಠಾಪನೆಯ 5ನೇ ದಿನ, 7ನೇ ದಿ, 11, 21ನೇ ದಿನಕ್ಕೆ ಗಣೇಶ ಮೂರ್ತಿಯ ವಿಸರ್ಜನೆಯಾಗುತ್ತೆ. ಹತ್ತಿರದ ಕೆರೆ, ನದಿ, ಬಾವಿಗಳಲ್ಲಿ ಮೂರ್ತಿಗಳನ್ನ ವಿಸರ್ಜನೆ ಮಾಡಲಾಗುತ್ತೆ. ಹೀಗಾಗಿ ಪಿಓಪಿ ಗಣೇಶ ಮೂರ್ತಿಗಳ ವಿಸರ್ಜನೆಯಿಂದ ನೀರು ಮಲೀನವಾಗುತ್ತೆ ಅನ್ನೋದು ಸರ್ಕಾರದ ವಾದ, ಹೀಗಾಗಿ ಪಿಓಪಿ ಗಣೇಶ ಮೂರ್ತಿ ಪ್ರತಿಷ್ಟಾಪನೆ, ವಿಸರ್ಜನೆ ಬೇರ ಮಣ್ಣಿನ ಮೂರ್ತಿಗಳನ್ನ ಪ್ರತಿಷ್ಠಾಪಿಸಿ ಎನ್ನುತ್ತೆ. ಹಾಗಂದ ಮಾತ್ರಕ್ಕೆ ಮಣ್ಣಿನ ಮೂರ್ತಿ ತಯಾರಿಕೆ ಸುಲಭದ ಕಾರ್ಯವಲ್ಲ. ಮಣ್ಣು ನೆನೆಯಿಟ್ಟು, ಹದಕ್ಕೆ ಬಂದ ಮೇಲೆ ಕಾದು ಮೂರ್ತಿ ತಯಾರಿಸಿ, ಬಳಿಕ ಒಣಗಿಸಿ ಬಣ್ಣ ಹಚ್ಚಿ ಮಾರಾಟ ಮಾಡಬೇಕಾಗುತ್ತೆ. ಸರಕಾರ ಮೂರ್ತಿ ತಯಾರಕರಿಗೆ ಒಂದಷ್ಟು ಸೌಲಭ್ಯ ಸಹಾಯ ಒದಗಿಸಲಿ ಎಂದು ಆಗ್ರಹಿಸುತ್ತಿದ್ದಾರೆ.
ಮಣ್ಣಿನ ಗಣೇಶ ತಯಾರಿಸುವವರಿಗೆ ಪಿಓಪಿ ಭಯ: ಇತ್ತ ಸರಕಾರ ಆರಂಭದಲ್ಲಿ ಪಿಓಪಿ ಮೂರ್ತಿ ಬ್ಯಾನ್ ಎಂದು ಆದೇಶ ಹೊರಡಿಸುತ್ತೆ. ಮಾರ್ಗಸೂಚಿಯಂತೆ ಮಣ್ಣಿನ ಗಣಪ ತಯಾರಿಸುತ್ತಿದ್ದಾರೆ. ಲಕ್ಷಾಂತರ ಗಣೇಶನ ಮೂರ್ತಿ ಬೇಡಿಕೆ ಇರೋವಾಗ ಅಷ್ಟೊಂದು ಪ್ರಮಾಣದಲ್ಲಿ ಮಣ್ಣಿನ ಗಣೇಶ ನಿರ್ಮಾಣ ಕಷ್ಟ-ಸಾಧ್ಯ ಹೀಗಾಗಿ ಕೊನೆಯ ಕ್ಷಣದಲ್ಲಿ ಪಿಓಪಿ ಗಣೇಶ ಮೂರ್ತಿಗಳು ಮಾರುಕಟ್ಟೆ ಆವರಿಸಿಕೊಂಡು ಬಿಡುತ್ವೆ. ಇದರಿಂದ ಮಣ್ಣಿನ ಮೂರ್ತಿ ತಯಾರಿಸಿದವರಿಗೆ ಬಹುದೊಡ್ಡ ಹೊಡೆತ ಬಿದ್ದು ಬಿಡುತ್ತೆ. ಅಷ್ಟೇ ನಷ್ಟವು ಉಂಟಾಗುತ್ತದೆ. ಹೀಗಾಗಿ ಮಣ್ಣಿನ ಗಣೇಶ ಮೂರ್ತಿ ತಯಾರಿಸೋ ಕಲಾವಿದರಿಗೆ ಪಿಓಪಿ ಗಣೇಶ ಮೂರ್ತಿಗಳದ್ದೆ ಭಯ ಶುರುವಾಗಿದೆ. ಗಣೇಶ ಮೂರ್ತಿ ತಯಾರಿಕೆ ಮಾಡುವವರು ನಮಗೆ ಮೂರ್ತಿ ತಯಾರಿಸುವ ಕಲೆ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲಾ, ವರ್ಷವಿಡಿ ಮೂರ್ತಿ ತಯಾರಿಸುವದೇ ನಮ್ಮ ಕಾಯಕವಾಗಿದೆ ಹೀಗಾಗಿ ಸರಕಾರ ನಮಗೆ ಏನಾದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಿ, ನಮಗೆ ಏನಾದರೂ ಸಹಾಯ ಮಾಡಲಿ, ಎಂದು ವಿನಂತಿಸಿ ಕೊಳ್ಳುತ್ತಿದ್ದಾರೆ.
ಪಿಎಸ್‌ಐ ಪುತ್ರನೇ ಕಳ್ಳ? ಜನರಿಗೊಂದು ನ್ಯಾಯ, ಪೊಲೀಸರ ಮಕ್ಕಳಿಗೊಂದು ನ್ಯಾಯವೇ?
ಸಹಾಯಕ್ಕೆ ಬರುತ್ತಾ ಸರ್ಕಾರ: ಗಣೇಶ ಮೂರ್ತಿ ತಯಾರಕರು ಗಣೇಶ ಹಬ್ಬ ಬಂದಾಗ ತಮಗಾಗುವ ಹಿಂಸೆ, ಕಷ್ಟವನ್ನ ಹೇಳಿಕೊಳ್ತಾರೆ. ಆದ್ರೆ ತಿಂಗಳಲ್ಲಿ ಗಣೇಶ ಹಬ್ಬ ಮುಗಿದು ಹೋದ್ರೆ ಮುಗಿದು ಹೋಯ್ತು, ವಾಪಸ್ ಯಾರು ಮಾತನಾಡಿಸೋಲ್ಲ. ಹೀಗಾಗಿ ಸರ್ಕಾರ ಒಂದು ಖಡಕ್ ನಿರ್ಧಾರಕ್ಕೆ ಬರಬೇಕು, ಒಂದೋ ಪಿಓಪಿ ಗಣೇಶ ಮಾರಾಟಕ್ಕೆ ಅನುಮತಿ ನೀಡಲಿ, ಇಲ್ಲವೇ ಮಣ್ಣಿನ ಗಣೇಶ ಮಾರಾಟ ಮಾತ್ರ ಮಾಡಬೇಕು, ಪಿಓಪಿ ಗಣೇಶ ಕೂರಿಸಲೇ ಬಾರದು ಅಂತಾ ಕಠಿಣ ನಿಯಮವನ್ನಾದ್ರು ಮಾಡಲಿ ನಾವು ಕಷ್ಟ ಪಟ್ಟು ತಯಾರಿಸಿದ ಗಣೇಶ ಮೂರ್ತಿಗಳಾದ್ರು ಮಾರಾಟವಾಗುತ್ವೆ ಅನ್ನೋದು ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟ ಮಾಡುವವರ ಮಾತಾಗಿದೆ. ಇಲ್ಲವೆ ಸರ್ಕಾರವಾದ್ರು ಸಹಾಯಕ್ಕೆ ಬರಲಿ ಅನ್ನೋದು ಕಲಾವಿದರ ಅಳಲಾಗಿದೆ.