ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕಳೆದ ಎರಡು ತಿಂಗಳಲ್ಲಿ ಇಬ್ಬರ ಸಾವಿಗೆ ಕಾರಣವಾದ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭಗೊಂಡಿದೆ. ಸಿಎಂ ಸೂಚನೆ ಹಿನ್ನೆಲೆಯಲ್ಲಿ ಮೂರು ಸಾಕಾನೆ ನೇತೃತ್ವದಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ನ.09): ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕಳೆದ ಎರಡು ತಿಂಗಳಲ್ಲಿ ಇಬ್ಬರ ಸಾವಿಗೆ ಕಾರಣವಾದ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭಗೊಂಡಿದೆ. ಸಿಎಂ ಸೂಚನೆ ಹಿನ್ನೆಲೆಯಲ್ಲಿ ಮೂರು ಸಾಕಾನೆ ನೇತೃತ್ವದಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿದೆ. ಹಿರಿಯ ಅರಣ್ಯಾಧಿಕಾರಿಗಳು ಸಿಬ್ಬಂದಿ ಭಾಗಿ ಆಗಿದ್ದು ಮತ್ತಾವರ ಫಾರೆಸ್ಟ್ ಐಬಿಯಿಂದ ಕಾರ್ಯಚರಣೆಗೆ ಚಾಲನೆ ನೀಡಲಾಯಿತು. .
undefined
ದುಬಾರೆ ಆನೆ ಶಿಬಿರದಿಂದ ಮತ್ತೆ ನಾಲ್ಕು ಆನೆಗಳು: ಆಲ್ದೂರು ಸಮೀಪ ಹೆಡದಾಳು ಗ್ರಾಮದಲ್ಲಿ ಬುಧವಾರ ಒಂಟಿ ಸಲಗದ ದಾಳಿಗೆ ಮೀನಾ ಎಂಬ ಮಹಿಳೆ ಬಲಿಯಾದ ಹಿನ್ನೆಲೆಯಲ್ಲಿ ಮೂಡಿಗೆರೆಯಲ್ಲೇ ಇದ್ದ ಮುಖ್ಯಮಂತ್ರಿಗಳು ಆನೆ ಸ್ಥಳಾಂತರ ಕಾರ್ಯಾಚರಣೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಸಕ್ರೆಬೈಲು ಆನೆ ಶಿಬಿರದಿಂದ ನಿನ್ನೆ ರಾತ್ರಿಯೇ ಸೋಮಣ್ಣ, ಅಲೆ ಮತ್ತು ಬಹದ್ದರ್ ಎನ್ನುವ ಮೂರು ಆನೆಗಳನ್ನು ಚಿಕ್ಕಮಗಳೂರಿಗೆ ಕರೆತರಲಾಯಿತು.ಇಂದು ಮಧ್ಯಾಹ್ನ ನಗರ ಹೊರವಲಯದ ಮತ್ತಾವರ ಅರಣ್ಯ ಅತಿಥಿಗೃಹದ ಬಳಿ ಅರವಳಿಕೆ ತಜ್ಞ ಡಾ. ವಿನಯ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ. ನಾಳೆ ಮಡಿಕೇರಿಯ ದುಬಾರೆ ಆನೆ ಶಿಬಿರದಿಂದ ಮತ್ತೆ ನಾಲ್ಕು ಆನೆಗಳು ಸೇರ್ಪಡೆಗೊಳ್ಳಲಿವೆ.
ಆಲ್ದೂರು ವಲಯದಲ್ಲಿ ಉಪಟಳ ನೀಡುತ್ತಿರುವ ಆನೆಯ ಹಿಂಡಿನಲ್ಲಿ ಭುವನೇಶ್ವರಿ ಎನ್ನುವ ಆನೆಯೂ ಇದೆ. ಅದರೊಂದಿಗೆ ಆರೇಳು ಆನೆಗಳಿದ್ದು, ಹಿಂಡಿನಿಂದಿ ಬೇರ್ಪಟ್ಟಿರುವ ಸಲಗ ನಿನ್ನೆ ಕಾರ್ಮಿಕ ಮಹಿಳೆಯನ್ನು ಬಲಿ ಪಡೆದಿದೆ.ಈ ಒಂಟಿ ಸಲಗವನ್ನು ಸೆರೆ ಹಿಡಿದು ಆನೆ ಶಿಬಿರಕ್ಕೆ ಸಾಗಿಸುವುದು ಮತ್ತು ಭುವನೇಶ್ವರಿಯೊಂದಿಗೆ ಉಳಿದ ಆರೇಳು ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವುದು ಕಾರ್ಯಾಚರಣೆಯ ಉದ್ದೇಶವಾಗಿದೆ.ಕಾಡಾನೆ ಹಿಂಡು ಚಿಕ್ಕಮಗಳೂರು ತಾಲೂಕಿನ 20 ಕ್ಕೂ ಅಧಿಕ ಗ್ರಾಮದಲ್ಲಿ ದಾಂಧಲೆ ನಡೆಸಿವೆ. ನಗರದಿಂದ 2ಕಿ.ಮೀ ದೂರದಲ್ಲಿರುವ ಮತ್ತಾವರ ಗ್ರಾಮದ ಬಳಿ ಇಂದು ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಮೂರು ತಿಂಗಳಿನಿಂದ ನಿರಂತರವಾಗಿ ಕೋಟ್ಯಾಂತರ ಮೌಲ್ಯದ ಬೆಳೆ ನಾಶ ಮಾಡಿವೆ.
ಬರದ ಬರೆಯ ನಡುವೆ ದ್ರಾಕ್ಷಿ ಬೆಳೆದ ರೈತರಿಗೆ ಇನ್ಸುರೆನ್ಸ್ ಶಾಕ್: ವಿಮಾ ಕಂಪನಿಯ ಮಹಾ ದೋಖಾ, ರೈತರೇ ಕಂಗಾಲು!
ನಿನ್ನೆ ಮಹಿಳೆ, ಇಂದು ಆನೆ ಬಲಿ: ಜಿಲ್ಲೆಯಲ್ಲಿ ಕಾಡಾನೆಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷ ಮುಂದುವರಿದಿದೆ. ಬುಧವಾರವಷ್ಟೇ ಆಲ್ದೂರು ಬಳಿ ಆನೆ ದಾಳಿಗೆ ಮಹಿಳೆ ಬಲಿಯಾಗಿದ್ದರೆ, ಗುರುವಾರ ಬೆಳಗ್ಗೆ ರೈತರು ಜಮೀನಿಗೆ ಅಳವಡಿಸಿದ್ದ ವಿದ್ಯುತ್ ಸ್ಪರ್ಷಿಸಿ ಕಾಡಾನೆಯೊಂದು ಮೃತಪಟ್ಟ ಘಟನೆ ತರೀಕೆರೆ ತಾಲ್ಲೂಕಿನ ಹರುವನ ಹಳ್ಳಿ ಗ್ರಾಮದಲ್ಲಿ ನಡೆದಿದೆ.ಆನೆಗಳು ತೋಟ, ಹೊಲ, ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುವುದನ್ನು ತಪ್ಪಿಸುವ ಸಲುವಾಗಿ ರೈತರು ಜಮೀನಿಗೆ ವಿದ್ಯುತ್ ತಂತಿ ಬೇಲಿ ಹಾಕಿಕೊಂಡಿದ್ದಾರೆ. ಹರುವನಹಳ್ಳಿಯಲ್ಲಿ ಇದೇ ರೀತಿ ಜೋಳದ ಹೊಲಕ್ಕೆ ಅಳವಡಿಸಿದ್ದ ವಿದ್ಯುತ್ ಬೇಲಿ ತಗುಲಿ ಗಂಡಾನೆ ಮೃತಪಟ್ಟಿದೆ.ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಡಿಸಿಎಫ್ ಯಶ್ಪಾಲ್ ಕ್ಷೀರಸಾಗರ, ಎಸಿಎಫ್ ವೀರೇಶ್ ಭೇಟಿ ನೀಡಿ ಪರಿಶೀನಲೆ ನಡೆಸಿದರು. ಬಳಿಕ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಿದರು.