
ವಿಜಯನಗರ (ನ.9): ಚಾಲಕನ ನಿಯಂತ್ರಣ ತಪ್ಪಿ ಸೇಬು ಹಣ್ಣು ತುಂಬಿದ್ದ ಲಾರಿ ಪಲ್ಟಿಯಾಗಿದೆ ಈ ವೇಳೆ ಜನರು ಹಣ್ಣಿಗಾಗಿ ಮುಗಿಬಿದ್ದ ಘಟನೆ ವಿಜಯನಗರದ ಬಣವಿಕಲ್ಲು ಗ್ರಾಮದ ಬಳಿ ನಡೆದಿದೆ.
ಶ್ರೀನಗರದಿಂದ ಕೇರಳದ ಕೊಚ್ಚಿನ್ ಗೆ ಹೊರಟ್ಟಿದ್ದ ಲಾರಿ. ಈ ವೇಳೆ ಅತಿ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಸೇರಿ ಲಾರಿಯಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಲಾರಿ ಬಿಳುತ್ತಿದ್ದಂತೆ ಸೇಬಿಗೆ ಮುಗಿಬಿದ್ದ ಜನರು:
ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಸೇಬುಹಣ್ಣುಗಳನ್ನು ತುಂಬಿದ ಲಾರಿ ಮುಗುಚಿಬಿಳುತ್ತಿದ್ದಂತೆ ರಕ್ಷಣೆ ಬದಲು ಹಣ್ಣುಗಳನ್ನು ಹೊತ್ತೊಯ್ಯಲು ಮುಗಿಬಿದ್ದ ಜನರು. ನೆಲಬೊಮ್ಮನಹಳ್ಳಿ, ಉಲ್ಲಾನಹಳ್ಳಿ, ಚಿಕ್ಕೋಬನಹಳ್ಳಿ,ಸೂಲಸಹಳ್ಳಿ, ಬಣವಿಕಲ್ಲು, ಎಂ.ಬಿ.ಅಯ್ಯನಹಳ್ಳಿಯ ಗ್ರಾಮಸ್ಥರು ಸೇಬುಹಣ್ಣಿಗಾಗಿ ನೂಕುನುಗ್ಗಲು. ಒಬ್ಬರ ಮೇಲೆ ಒಬ್ಬರು ಬಿದ್ದು ಹಣ್ಣಿಗಾಗಿ ಕಾದಾಟ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕಾನಹೊಸಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ