ಬರದ ಬರೆಯ ನಡುವೆ ದ್ರಾಕ್ಷಿ ಬೆಳೆದ ರೈತರಿಗೆ ಇನ್ಸುರೆನ್ಸ್‌ ಶಾಕ್: ವಿಮಾ ಕಂಪನಿಯ ಮಹಾ ದೋಖಾ, ರೈತರೇ ಕಂಗಾಲು!

By Govindaraj S  |  First Published Nov 9, 2023, 8:43 PM IST

ವಿಜಯಪುರ ಜಿಲ್ಲೆಯಲ್ಲಿ ಬರದ ನಡುವೆ ದ್ರಾಕ್ಷಿ ಬೆಳೆದ ರೈತರಿಗೆ ಈಗ ಇನ್ಸುರೆನ್ಸ್‌ ಶಾಕ್‌ ಎದುರಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ದ್ರಾಕ್ಷಿ ಬೆಳೆ ಹಾನಿಯಾಗಿತ್ತು. 


ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ನ.09): ವಿಜಯಪುರ ಜಿಲ್ಲೆಯಲ್ಲಿ ಬರದ ನಡುವೆ ದ್ರಾಕ್ಷಿ ಬೆಳೆದ ರೈತರಿಗೆ ಈಗ ಇನ್ಸುರೆನ್ಸ್‌ ಶಾಕ್‌ ಎದುರಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ದ್ರಾಕ್ಷಿ ಬೆಳೆ ಹಾನಿಯಾಗಿತ್ತು. ಈಗ ದ್ರಾಕ್ಷಿ ವಿಮೆ ಪರಿಹಾರ ಬಂದಿದ್ದು, ರೈತರನ್ನ ಆಕ್ರೋಶಗೊಳ್ಳುವಂತೆ ಮಾಡಿದೆ.  ಕಾರಣ ಬೆಳೆ ವಿಮೆ ಪರಿಹಾರ ನೀಡುವಲ್ಲಿ ಇನ್ಸುರೆನ್ಸ್‌ ಕಂಪನಿ ಭಾರೀ ದೋಖಾ ಮಾಡಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿವೆ

Tap to resize

Latest Videos

ವಿಜಯಪುರ ದ್ರಾಕ್ಷಿ ಬೆಳೆಗಾರರಿಗೆ ಇನ್ಸುರೆನ್ಸ್‌ ಶಾಕ್: ಜಿಲ್ಲೆಯಲ್ಲಿ ಅತಿಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತೆ. ಜಿಲ್ಲೆಯಲ್ಲಿ ಅಕಾಲಿಕ ಮಳೆ, ಹವಾಮಾನ ವೈಪರಿತ್ಯದಿಂದಾಗಿ ಬಹುತೇಕ ರೈತರು ಎಸ್ಬಿಐ ಕಂಪನಿಯಲ್ಲಿ ದ್ರಾಕ್ಷಿ ಬೆಳೆಯ ವಿಮೆ ಮಾಡಿಸಿದ್ರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಹಾನಿಯಾದ ಬಳಿಕ ರೈತರು ಇನ್ಸುರೆನ್ಸ್‌ ಹಣದ ಮೇಲೆ ನಿರೀಕ್ಷೆ ಇಟ್ಟಿದ್ದರು. ಬರದ ನಡುವೆ ವಿಮೆ ಪರಿಹಾರವಾದ್ರು ಕೈಹಿಡಿಯುತ್ತೆ ಅದುಕೊಂಡಿದ್ರು. ಸಧ್ಯ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆಯಾಗಿದ್ದು, ರೈತರು ಶಾಕ್‌ ಆಗಿದ್ದಾರೆ. ಯಾಕಂದ್ರೆ ವಿಮೆ ಪರಿಹಾರದಲ್ಲಿ ಭಾರಿ ಪ್ರಮಾಣದಲ್ಲಿ ತಾರತಮ್ಯವಾಗಿದೆ ಎನ್ನುವ ಆರೋಪವನ್ನ ದ್ರಾಕ್ಷಿ ಬೆಳೆಗಾರರು ಮಾಡಿದ್ದಾರೆ. ಗರಿಷ್ಠ ವಿಮೆ ಪರಿಹಾರ ಸಿಗಬೇಕಿದ್ದ ರೈತರಿಗೆ ಕನಿಷ್ಠ ಪರಿಹಾರ ಸಿಕ್ಕಿದ್ದು ಆಕ್ರೋಶ ಹೊರಹಾಕ್ತಿದ್ದಾರೆ.

ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು

ಹೆಚ್ಚು ದ್ರಾಕ್ಷಿ ಬೆಳೆಯುವ ರೈತರಿಗೆ ಕಡಿಮೆ ವಿಮೆ ಪರಿಹಾರ: ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ತಿಕೋಟ, ಬಾಬಾನಗರ, ಬಿಜ್ಜರಗಿ, ಕಣಮಡಿ ಭಾಗದ ರೈತರಿಗೆ ಪ್ರತಿ ಹೆಕ್ಟರ್‌ ಗೆ ಅತಿ ಕಡಿಮೆ 20 ಸಾವಿರ ವಿಮೆ ಪರಿಹಾರ ನೀಡಲಾಗಿದೆ. ಆದ್ರೆ ಕಡಿಮೆ ದ್ರಾಕ್ಷಿ ಬೆಳೆಯುವ ಮುದ್ದೇಬಿಹಾಳ ಭಾಗದಲ್ಲಿ ಅತಿ ಹೆಚ್ಚು ಅಂದ್ರೆ ಪ್ರತಿ ಹೆಕ್ಟರ್‌ಗೆ 1 ಲಕ್ಷ 60 ಸಾವಿರದ ವರೆಗೂ ವಿಮೆ ಪರಿ ಬಿಡುಗಡೆ ಮಾಡಲಾಗ್ತಿದೆ. ಈ ವಿಚಾರ ಸಹಜವಾಗಿಯೇ ಕಡಿಮೆ ವಿಮೆ ಪರಿಹಾರ ಪಡೆದ ದ್ರಾಕ್ಷಿ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳೆ ವಿಮೆ ಪರಿಹಾರ ನೀಡುವಲ್ಲಿ ಭಾರೀ ತಾರತಮ್ಯವಾಗಿದೆ ಎಂದು ರೈತರು ಆಕ್ರೋಶ ಹೊರಹಾಕ್ತಿದ್ದಾರೆ

ಹೆಕ್ಟೆರ್‌ಗೆ 14 ಸಾವಿರ ಇನ್ಸರೆನ್ಸ್ ಹಣ ಕಟ್ಟಿರುವ ರೈತರು: ವಿಜಯಪುರ ಜಿಲ್ಲೆಯಲ್ಲಿ 70 ಸಾವಿರ ಏಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಈ ಪೈಕಿ 10 ಸಾವಿರಕ್ಕು ಅಧಿಕ ರೈತರು ಎಸ್‌ಬಿಐ ಇನ್ಸರೆನ್ಸ್‌ ಕಂಪನಿಯಿಂದ ಹವಾಮಾನ ಆಧಾರಿತ ವಿಮೆ ಮಾಡಿಸಿದ್ದಾರೆ. ಪ್ರತಿ ಹೆಕ್ಟರ್‌ ಗೆ 14 ಸಾವಿರ ರೂಪಾಯಿಯಂತೆ ವಿಮೆ ಹಣ ಕಟ್ಟಿದ್ದಾರೆ. ದೊಡ್ಡ ಅಮೌಂಟನ್ನ ಇನ್ಸುರೆನ್ಸ್ ಕಂಪನಿಗೆ ಪಾವತಿ ಮಾಡಿರುವ ರೈತರಲ್ಲಿ ಕಡಿಮೆ ವಿಮೆ ಸಿಕ್ಕಿರೋದು ಅಸಮಧಾನ ಹುಟ್ಟಿಸಿದೆ.

ಹವಾಮಾನ ವೈಪರೀತ್ಯ, ಉದುರಿ ಹೋಗಿದ್ದ ದ್ರಾಕ್ಷಿ ಹೂವು: ಕಳೆದ 2022ರ ಆಕ್ಟೋಬರ್‌ ತಿಂಗಳಲ್ಲಿ ಹವಾಮಾನ ವೈಪರಿತ್ಯದಿಂದ ರೋಗದಿಂದ ಹೂವು ಕರಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. ಈಗ ಇನ್ಸರೆನ್ಸ್‌ ಕಂಪನಿ ರೈತರಿಗೆ ವಿಮೆ ಪರಿಹಾರ ಹಣ ಪರಿಹಾರ ನೀಡ್ತಿದೆ. ಆದ್ರೆ ವಿಮೆ ಬಿಡುಗಡೆ ಮಾಡುವಾಗ ಭಾರೀ ತಾರತಮ್ಯ ಉಂಟಾಗಿರೋದು ರೈತರ ಆಕ್ರೋಶವನ್ನ ಇಮ್ಮಡಿಗೊಳಿದೆ. 

ತೋಟಗಾರಿಕೆ ಅಧಿಕಾರಿಗಳು ಹೇಳೋದೇನು?: ಈ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನ ಕೇಳಿದ್ರೆ ಹೇಳೋದೆ ಬೇರೆ. ಆಯಾ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹವಾಮಾನ ವೈಪರಿತ್ಯ, ರೋಗ ಯಾವ ಹಂತದಲ್ಲಿದೆ, ಅದರ  ಪ್ರಮಾಣ ಆಧರಿಸಿ ಸಂದಾಯವಾಗಿದೆ ಎಂದಿದ್ದಾರೆ. ಒಂದು ಜಮೀನು ಯಾವ ಗ್ರಾಮ ಪಂಚಾಯತ್ ವ್ಯಪ್ತಿಗೆ ಬರುತ್ತದೆ, ಅಲ್ಲಿ ಹವಾಮಾನ ಪರಿಸ್ಥಿತಿ ಹೇಗಿತ್ತು ಅನ್ನೋದರ ಮೇಲೆ ಆ ಜಮೀನಿನ ಬೆಳೆಗೆ ವಿಮೆ ಜಮೆ ಮಾಡಲಾಗ್ತಿದೆ ಎಂದಿದ್ದಾರೆ.

ಕಾಂಗ್ರೆಸ್ ವಿರುದ್ಧ ತೆಲಂಗಾಣದಲ್ಲಿ ಪ್ರಚಾರ: ಕೋಡಿಹಳ್ಳಿ ಚಂದ್ರಶೇಖರ್

ಬರದ ನಡುವೆ ರೈತರಿಗೆ ತಾರತಮ್ಯ ; ಸರಿಪಡಿಸಬೇಕಿದೆ ಸರ್ಕಾರ: ಇನ್ಸುರೆನ್ಸ್‌ ಕಂಪನಿಯ ಬೆಳೆ ವಿಮೆ ಪರಿಹಾರ ತಾರತಮ್ಯ ರೈತರನ್ನ ಕಂಗೆಡುವಂತೆ ಮಾಡಿದೆ. ಬರದ ನಡುವೆ ದ್ರಾಕ್ಷಿ ಬೆಳೆ ಕಾಪಾಡಿಕೊಳ್ಳಲು ಹರಸಾಹಸ ಪಡ್ತಿರೋ ರೈತರಿಗೆ ಇನ್ಸರೆನ್ಸ್‌ ದೋಖಾ ದಂಗು ಬಡಿಸಿದೆ. ಈ ವಿಮೆ ತಾರತಮ್ಯವನ್ನ ಸರ್ಕಾರವೇ ಸರಿಪಡೆಸಬೇಕಿದೆ.

click me!