Belagavi Assembly Session : 'ರೇಪ್‌ ತಪ್ಪಿಸಿಕೊಳ್ಳಲು ಅಸಾಧ್ಯ ಎಂದಾಗ ಎಂಜಾಯ್ ಮಾಡ್ಬೇಕು'!

By Suvarna News  |  First Published Dec 16, 2021, 11:59 PM IST

* ಬೆಳಗಾವಿ ವಿಧಾನಸಭೆ ಕಲಾಪ
* ಅಗ್ರ ನಾಯಕರಿಂದ ಸಂವೇದನೆ ಇಲ್ಲದ ಮಾತು
* ಅತ್ಯಾಚಾರ ಪಕ್ಕಾ ಎಂದಾದ್ರೆ ಅದನ್ನು ಎಂಜಾಯ್ ಮಾಡಬೇಕು
* ಸ್ಪೀಕರ್ ಮತ್ತು ಮಾಜಿ ಸ್ಪೀಕರ್ ಮಾತಿಗೆ ವ್ಯಾಪಕ ಟೀಕೆ


ಬೆಳಗಾವಿ(ಡಿ. 16) ಸದನದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷದ ನಡುವೆ ಕಾದಾಟವಿರುತ್ತದೆ. ತಮಾಷೆ ಇರುತ್ತದೆ. ಆರೋಪ-ಪ್ರತ್ಯಾರೋಪ ಇರುತ್ತದೆ. ಕಾಲೆಳೆಯುತ್ತಾರೆ.. ಆದರೆ ಇದೆಲ್ಲದಕ್ಕೂ ಒಂದು ಸಂವೇದನೆ ಇರುವುದು ಮುಖ್ಯ. ಸಂವೇದನೆ  ಇಲ್ಲದೆ ಮಾತನಾಡಿದರೆ ಇಂಥ ಪರಿಸ್ಥಿತಿಯೇ ಬರುತ್ತದೆ.

ಮತ್ತೆ ರಮೇಶ್ ಕುಮಾರ್  (Ramesh Kumar) ಮಾತನಾಡುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಬಾರಿ ಸಭ್ಯ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri)ಅವರಿಗೂ ವಿಚಾರ ಥಳಕು  ಹಾಕಿಕೊಂಡಿದೆ.

Latest Videos

undefined

ವಿಧಾನಸಭೆ ಕಲಾಪದ (Belagavi Assembly Session)ಇಂಥದ್ದೊಂದು ಘಟನೆಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಮಾಧ್ಯಮಗಳು ಈ ವಿಚಾರವನ್ನು ದೊಡ್ಡ ಮಟ್ಟದ ಸುದ್ದಿ ಮಾಡಿವೆ.  ಸಭಾಪತಿಗಳ (Speaker) ಪರಿಸ್ಥಿತಿಯ ಕುರಿತಾಗಿ ಹೇಳಿಕೆ ನೀಡುವ ಭರದಲ್ಲಿ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್  ಆಡಿದ ಮಾತು ಎಂಥವರನ್ನು ಒಂದು ಕ್ಷಣ ಕೆರಳಿಸುವಂತೆ ಇದೆ.

ಅಧಿವೇಶನ ಮುಗಿಯುವವರೆಗೂ ಕಾಂಗ್ರೆಸ್ ಪ್ರತಿಭಟನೆ

ಅತಿವೃಷ್ಟಿ (Rain) ಹಾನಿ ಸಂಬಂಧ  ನಿಯಮ 69 ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ (Congress) ಸದಸ್ಯರು ನಮಗೂ ಮಾತನಾಡಲು ಅವಕಾಶ ಕೊಡಿ ಎಂದು ಸ್ಪೀಕರ್ ವಿಶ್ವೇಶ್ವರ ಕಾಗೇರಿ ಅವರಲ್ಲಿ ಮನವಿ ಮಾಡಿದರು.   ಆಗ ಕಾಗೇರಿ ಏನು ಮಾಡುವುದು ಎಲ್ಲ ತೀರ್ಮಾನ ನೀವೇ ತೆಗೆದುಕೊಳ್ಳುತ್ತೀರಿ. ಅಲ್ಲವೇ ರಮೇಶ್ ಕುಮಾರ್ ಅವರೇ ಎಂದಾಗ ರಮೇಶ್ ಕುಮಾರ್ ಆಡಿದ ಮಾತು ಹೀಗಿತ್ತು.

'ಅತ್ಯಾಚಾರ ನಡೆಯುತ್ತಿದ್ದಾಗ ಅದನ್ನು ತಡೆಯಲು ಸಾಧ್ಯವಿಲ್ಲ ಎಂದಾಗ ಸುಮ್ಮನೆ ಮಲಗಿ ಎಂಜಾಯ್ ಮಾಡಬೇಕು' ಎಂಬರ್ಥದ ಇಂಗ್ಲಿಷ್  (English) ಸೇಯಿಂಗ್ ರಮೇಶ್ ಕುಮಾರ್ ಅವರ ಬಾಯಿಂದ ಬಂತು.

"

ಆಗ ಎದ್ದು ನಿಂತ ರಮೇಶ್ ಕುಮಾರ್, ಒಂದು ಮಾತಿದೆ…. ವೆನ್ ರೇಪ್ ಈಸ್ ಇನ್​ಎವಿಟಬಲ್ ಲೈ ಡೌನ್ ಅಂಡ್ ಎಂಜಾಯ್ ಇಟ್ (When Rape is inevitable, lie down and enjoy it- ಯಾವಾಗ ರೇಪ್ ಅನಿವಾರ್ಯ ಎಂಬಂತಾದಾಗ ಮಲಗಿ ಆನಂದಿಸಿಬಿಡಬೇಕು ಎಂದು ಹೇಳಿದರು. ಈ ಮಾತು ಹೇಳುವಾಗ ಕಾಗೇರಿ ಅವರು ನಗುತ್ತಿದ್ದರು.

ಇದೆ ಮೊದಲಲ್ಲ:  ಈ ಹಿಂದೆ ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದಾಗಲೂ ರಮೇಶ್ ಕುಮಾರ್ ಇಂಥದ್ದೇ ವಿವಾದಿತ ಹೇಳಿಕೆ ನೀಡಿದ್ದರು. ಒಮ್ಮೆ ಅತ್ಯಾಚಾರದವಾದರೆ  ಕೇಸು ದಾಖಲಾದರೆ ಪದೇ ಪದೇ ಅದನ್ನೇ ಕೇಳುತ್ತಾರೆ.. ಎನ್ನುವ ಅರ್ಥದಲ್ಲಿ ಮಾತನಾಡುತ್ತ ಎಡವಟ್ಟು ಮಾಡಿಕೊಂಡಿದ್ದರು. ಆಪರೇಶನ್ ಕಮಲದ ವಿಚಾರದಲ್ಲಿಯೂ ರಮೇಶ್ ಕುಮಾರ್ ನನ್ನ ಸ್ಥಿತಿ ರೇಪ್ ಗೆ ಒಳಗಾದ ಹಾಗೆ ಆಗಿದೆ ಎಂದು ಹೇಳಿದ್ದರುಯ. ಮಹಿಳಾ ಸದಸ್ಯರು ಇದನ್ನು ವ್ಯಾಪಕವಾಗಿ ವಿರೋಧಿಸಿದ್ದರು.

ಸೋಶಿಯಲ್ ಮೀಡಿಯಾದಲ್ಲಿಯೂ ದೊಡ್ಡ ಚರ್ಚೆ: ರಮೇಶ್ ಕುಮಾರ್ ಮತ್ತು  ಹೇಳಿಕೆ ಕೊಡುವಾಗ ನಕ್ಕ ಸ್ಪೀಕರ್ ಕಾಗೇರಿ ವರ್ತನೆ ಸೋಶಿಯಲ್ ಮೀಡಿಯಾದಲ್ಲಿಯೂ ಪ್ರಶ್ನೆ ಕೇಳುವಂತೆ ಮಾಡಿದೆ. ಕೊಟ್ಯಂತರ ಜನ ಕಲಾಪ ವೀಕ್ಷಣೆ ಮಾಡುತ್ತಿದ್ದು ಈ ರೀತಿ ನಡೆದುಕೊಂಡರೆ ಹೇಗೆ ಎಂದು ನಾಗರಿಕರು ಪ್ರಶ್ನೆ ಮಾಡಿದ್ದಾರೆ.

ನಿರ್ಭಯಾ ಪ್ರಕರಣದಿಂದ ಹಿಡಿದು ಮೈಸೂರಿನ ಪ್ರಕರಣದವರೆಗೆ ಪ್ರತಿಯೊಂದು ಸಂದರ್ಭದಲ್ಲಿಯೂ ಸಂತ್ರಸ್ತರು ಅನುಭವಿಸಿದ ನೋವು ಅವರಿಗೆ ತಾನೇ ಗೊತ್ತು. ಅಗ್ರ ನಾಯಕರಿಂದಲೇ ಈ ರೀತಿಯ ಸಂವೇದನೆ ಇಲ್ಲದ ಹೇಳಿಕೆಗಳು ಬಂದಾಗ ಸಹಜವಾಗಿಯೇ ಪ್ರಶ್ನೆಗಳು ಎದ್ದೇಳುತ್ತವೆ. 

click me!