
ಬೆಂಗಳೂರು(ಜು.28): ಕೃಷ್ಣಾ ನದಿ ಮೂಲಕ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣದಿಂದ ಜು.28ರಿಂದ ಜಲಾಶಯ ಕಾಲುವೆಗಳಿಗೆ ನೀರು ಪೂರೈಸಲು ಕೃಷ್ಣ ಮೇಲ್ದಂಡೆ ನೀರಾವರಿ ಸಲಹಾ ಸಮಿತಿ ತಿಳಿಸಿದೆ.
ಪ್ರಸಕ್ತ ಸಾಲಿನಲ್ಲಿ ಆಲಮಟ್ಟಿ ಜಲಾಶಯಕ್ಕೆ ಜು.6ರಿಂದ ಒಳಹರಿವು ಪ್ರಾರಂಭವಾಗಿದೆ. ಆ ಹಿನ್ನೆಲೆಯಲ್ಲಿ ಜು. 27ಕ್ಕೆ ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯಗಳಲ್ಲಿ 147.96 ಟಿಎಂಸಿ ಅಡಿಗಳನ್ನು ಒಟ್ಟಾರೆ ಮತ್ತು 115.59 ಟಿಎಂಸಿ ಅಡಿಗಳಷ್ಟು ಡೆಡ್ ಸ್ಟೋರೇಜ್ ಹೊರತುಪಡಿಸಿದ ನೀರು ಸಂಗ್ರಹವಾಗಿದೆ. ಜತೆಗೆ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲೂ ಏರಿಕೆಯಾಗಿದೆ. ಹೀಗಾಗಿ ಜು. 28ರಿಂದ ಜಲಾಶಯದ ಕಾಲುವೆ ಜಾಲಕ್ಕೆ ನೀರು ಹರಿಸಲಾಗುತ್ತದೆ.
ಒಂದು ವೇಳೆ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಕಡಿಮೆಯಾದಲ್ಲಿ ಜಲಾಶಯದ ಸಂಗ್ರಕ್ಕನುಗುಣವಾಗಿ ಈ ಹಿಂದಿನಂತೆ 14 ದಿನ ನೀರು ಹರಿಸುವುದು, ನಂತರದ 10 ದಿನಗಳು ನೀರು ಸ್ಥಗಿತ ಪದ್ಧತಿ ಅನುಸರಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ. ಇದೀಗ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿದರೂ ಅಚ್ಚುಕಟ್ಟು ಭಾಗದ ರೈತರು ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಬೇಕು ಹಾಗೂ ನೀರು ಪೋಲಾಗದಂತೆ ಮಿತವಾಗಿ ಬಳಕೆ ಮಾಡಬೇಕೆಂದು ಸೂಚಿಸಲಾಗಿದೆ.
ಜಲಾಶಯ ಶೇಕಡ ಗರಿಷ್ಠ ಮಟ್ಟ ಇಂದಿನ ಮಟ್ಟ
ಕಬಿನಿ 71% 2284 2274.27
ಹೇಮಾವತಿ 62% 2922 2905.50
ತುಂಗಭದ್ರಾ 29% 1633 1606.30
ಸೂಪಾ(ಮೀ.) 34% 564 535.34
ಕೆಆರ್‌ಎಸ್ 34% 124.80 91.65
ಘಟಪ್ರಭಾ 57% 2175 2143.95
ಲಿಂಗನಮಕ್ಕಿ 27% 1819.12 1770.25
ಭದ್ರಾ 50% 2158 2124.25
ಹಾರಂಗಿ 95% 2859 2858.15
ಆಲಮಟ್ಟಿ(ಮೀ.) 90% 519.60 518.95
ನಾರಾಯಣಪುರ(ಮೀ.) 98% 492.25 491.85
ಮಲಪ್ರಭಾ 39% 2079.50 2057.25
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ