ಬಂಡೀಪುರ ಸಫಾರಿ ದರ ಬಹುತೇಕ ಡಬಲ್! ಸೆಪ್ಟೆಂಬರ್ 1ರಿಂದ ಜಾರಿಗೆ: ಕ್ಯಾಮೆರಾಗೂ ಭಾರೀ ಶುಲ್ಕ, ಇಲ್ಲಿದೆ ಹೊಸ ದರಪಟ್ಟಿ!

Published : Jul 27, 2026, 12:25 PM IST
Bandipur National Park Jungle Safari Rates Hike

ಸಾರಾಂಶ

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಇಲಾಖೆಯು ಸಫಾರಿ ದರಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವ ಈ ಪರಿಷ್ಕೃತ ದರಗಳ ಪ್ರಕಾರ, ಬಸ್ ಮತ್ತು ಜೀಪ್ ಸಫಾರಿ ಶುಲ್ಕಗಳು ಬಹುತೇಕ ದುಪ್ಪಟ್ಟಾಗಲಿವೆ.  ಸಂಪೂರ್ಣ ದರಪಟ್ಟಿಯ ವಿವರ ಇಲ್ಲಿದೆ.

ಚಾಮರಾಜನಗರ (ಜು.27): ವಿಶ್ವಪ್ರಸಿದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ (Bandipur National Park) ತೆರಳುವ ಪ್ರವಾಸಿಗರಿಗೆ (Tourists) ಹಾಗೂ ವನ್ಯಜೀವಿ ಪ್ರಿಯರಿಗೆ ಅರಣ್ಯ ಇಲಾಖೆ (Forest Department) ದೊಡ್ಡ ಶಾಕ್ ನೀಡಿದೆ. ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಬಂಡೀಪುರ ಜಂಗಲ್ ಸಫಾರಿ (Bandipura Jungle Safari) ದರಗಳನ್ನು ಬಹುತೇಕ ದುಪ್ಪಟ್ಟು (Double Price Hike) ಮಾಡಲಾಗಿದೆ.

ಬಸ್ ಸಫಾರಿ, ಜೀಪ್ ಸಫಾರಿ, ಕ್ಯಾಮೆರಾ ಬಳಕೆ ಶುಲ್ಕ ಹಾಗೂ ಖಾಸಗಿ ವಾಹನಗಳ ಪ್ರವೇಶ ಶುಲ್ಕದಲ್ಲೂ ಭಾರೀ ಏರಿಕೆ ಮಾಡಲಾಗಿದ್ದು, ಅರಣ್ಯ ಇಲಾಖೆಯು ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ನೂತನ ಪರಿಷ್ಕೃತ ದರಗಳಲ್ಲಿ ನೇಚರ್ ಗೈಡ್ (Nature Guide) ಶುಲ್ಕವೂ ಒಳಗೊಂಡಿರಲಿದೆ ಎಂದು ತಿಳಿಸಲಾಗಿದೆ.

ಬಸ್ ಮತ್ತು ಜೀಪ್ ಸಫಾರಿ ದರ ಏರಿಕೆ:

ಅರಣ್ಯ ಇಲಾಖೆಯ ಬಸ್ ಸಫಾರಿಗೆ (Bus Safari) ಪ್ರಸ್ತುತ ಇದ್ದ ₹650 ವಯಸ್ಕರ ಟಿಕೆಟ್ ದರವನ್ನು ಸೆಪ್ಟೆಂಬರ್ 1ರಿಂದ ₹1,000 ಕ್ಕೆ ಏರಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ಇದ್ದ ₹350 ದರವನ್ನು ₹500 ಕ್ಕೆ ಹೆಚ್ಚಿಸಲಾಗಿದೆ. ಇನ್ನು ಜೀಪ್ ಸಫಾರಿ (Jeep Safari) ಪ್ರಿಯರಿಗೆ ಭಾರೀ ಜೇಬು ಖಾಲಿಯಾಗಲಿದ್ದು, ವಯಸ್ಕರ ದರವನ್ನು ₹750 ರಿಂದ ನೇರವಾಗಿ ₹1,500 ಕ್ಕೆ (ಶೇ. 100 ರಷ್ಟು ಏರಿಕೆ) ಹೆಚ್ಚಿಸಲಾಗಿದೆ. ಮಕ್ಕಳಿಗೆ ಜೀಪ್ ಸಫಾರಿಗೆ ₹750 ದರ ನಿಗದಿಪಡಿಸಲಾಗಿದೆ.

ಬಂಡೀಪುರ ಸಫಾರಿ ಪರಿಷ್ಕೃತ ದರಗಳ ಪಟ್ಟಿ:

ಸಫಾರಿ / ಸೇವೆಯ ವಿವರ ಹಳೆಯ ದರ ಪರಿಷ್ಕೃತ ಹೊಸ ದರ 

  • ಬಸ್ ಸಫಾರಿ - ವಯಸ್ಕರು (Adults) ₹ 650 ₹ 1,000
  • ಬಸ್ ಸಫಾರಿ - ಮಕ್ಕಳು (<12 ವರ್ಷ) ₹ 350 ₹ 500
  • ಜೀಪ್ ಸಫಾರಿ - ವಯಸ್ಕರು (Adults) ₹ 750 ₹ 1,500
  • ಜೀಪ್ ಸಫಾರಿ - ಮಕ್ಕಳು (Children) - ₹ 750
  • ಖಾಸಗಿ ಜೀಪ್ ಪ್ರವೇಶ ಶುಲ್ಕ - ₹ 2,500
  • ಲಘು ವಾಣಿಜ್ಯ ವಾಹನ (LCV Entry) - ₹ 3,500
  • ಬೋಟ್ ಪ್ರವೇಶ ಶುಲ್ಕ (Boat Entry) - ₹ 3,500
  • ಸ್ವಂತ ವಾಹನ ಪ್ರವೇಶ - ವಯಸ್ಕರು - ₹ 600
  • ಸ್ವಂತ ವಾಹನ ಪ್ರವೇಶ - ಮಕ್ಕಳು - ₹ 300

ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳಿಗೆ (DSLR Camera) ಹೊಸ ನಿಯಮ:

ವನ್ಯಜೀವಿ ಛಾಯಾಗ್ರಾಹಕರಿಗೆ (Wildlife Photographers) ಕ್ಯಾಮೆರಾ ಬಳಕೆಗೆ ಹೊಸ ಶುಲ್ಕ ನಿಯಮ ತರಲಾಗಿದೆ. 200 ಮಿ.ಮೀ (200mm Lens) ವರೆಗಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಆದರೆ, 200 ಮಿ.ಮೀ ಗಿಂತ ಹೆಚ್ಚಿನ ಝೂಮ್ ಲೆನ್ಸ್ (Zoom Lens) ಹೊಂದಿರುವ ಕ್ಯಾಮೆರಾಗಳಿಗೆ ₹1,500 ಜೊತೆಗೆ ಶೇ.18 ಜಿಎಸ್‌ಟಿ (18% GST) ಪಾವತಿಸುವುದು ಕಡ್ಡಾಯವಾಗಿದೆ.

ಅನುಮತಿ ಪಡೆದ ನಿರ್ದಿಷ್ಟ ಪ್ರದೇಶಗಳಿಗೆ ಸ್ವಂತ ಜೀಪ್ (Private Jeep), ಲಘು ವಾಣಿಜ್ಯ ವಾಹನ (LCV) ಅಥವಾ ಬೋಟ್‌ಗಳ (Boat) ಮೂಲಕ ತೆರಳುವವರಿಗೂ ಹೊಸ ಪ್ರವೇಶ ದರ ನಿಗದಿ ಮಾಡಲಾಗಿದೆ. ಸೆಪ್ಟೆಂಬರ್ 1 ರಿಂದ ಬಂಡೀಪುರ ಪ್ರವಾಸ ಕೈಗೊಳ್ಳುವವರು ಈ ಹೊಸ ದರಗಳನ್ನು ಗಮನದಲ್ಲಿಟ್ಟುಕೊಂಡು ಯೋಜಿಸುವುದು ಒಳಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದ ಯುವಕರಲ್ಲಿ ಹೆಚ್ಚಾದ ಏಡ್ಸ್; ಕಾಲೇಜು ವಿದ್ಯಾರ್ಥಿಗಳಿಗೆ HIV ಪರೀಕ್ಷೆ ಕಡ್ಡಾಯಗೊಳಿಸಿದ ಸರ್ಕಾರ!
ಶಿವಗಂಗೆ ಬೆಟ್ಟದಲ್ಲಿ ಯುವತಿಯ ಮೊಬೈಲ್ ಕಸಿದು ಗೋಪುರ ಏರಿದ ಮಂಗ: ಯುವತಿ ಪರದಾಡುವ ವಿಡಿಯೋ ವೈರಲ್!