ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಯ್ತಾ ಮುಡಾ ಹಗರಣ? ಡಿಕೆ ಶಿವಕುಮಾರ ಹೇಳಿದ್ದೇನು?

Published : Oct 08, 2024, 05:13 PM ISTUpdated : Oct 08, 2024, 05:15 PM IST
ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಯ್ತಾ ಮುಡಾ ಹಗರಣ? ಡಿಕೆ ಶಿವಕುಮಾರ ಹೇಳಿದ್ದೇನು?

ಸಾರಾಂಶ

ಹರಿಯಾಣದಲ್ಲಿ ನಾವು ಗೆಲ್ಲುತ್ತೇವೆ, ನಮ್ಮ ಸರ್ಕಾರ ಬಂದೇ ಬರ್ತದೆ ಎಂಬ ಬಹಳ ವಿಶ್ವಾಸವಿತ್ತು ಆದರೆ ಸೋಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.

ರಾಯಚೂರು (ಅ.8): ಹರಿಯಾಣದಲ್ಲಿ ನಾವು ಗೆಲ್ಲುತ್ತೇವೆ, ನಮ್ಮ ಸರ್ಕಾರ ಬಂದೇ ಬರ್ತದೆ ಎಂಬ ಬಹಳ ವಿಶ್ವಾಸವಿತ್ತು ಆದರೆ ಸೋಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.

ಇಂದು ಸಿಂಧನೂರಿನಲ್ಲಿ 'ಕೃಷಿ ದಸರಾ ಸಂಭ್ರಮ'ದಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿಗಳು, ಪ್ರಜಾ ಪ್ರಭುತ್ವದಲ್ಲಿ ಜನರ ತೀರ್ಪು ಒಪ್ಪಿಕೊಳ್ಳುತ್ತೇವೆ. ಇದರ ಬಗ್ಗೆ ಪಕ್ಷದಲ್ಲಿ ಚರ್ಚಿಸುತ್ತೇವೆ. ನಾವು ಎಲ್ಲಿ ಎಡವಿದ್ದೇವೆ ಅಂತ ಪರಿಶೀಲನೆ ನಡೆಸುತ್ತೇವೆ. ಜನರು ಕೊಟ್ಟಿರುವ ತೀರ್ಪಿನ ಬಗ್ಗೆ ನಾವೆಲ್ಲರೂ ಗೌರವ ಕೊಡಲೇಬೇಕು ಎಂದರು.

ಕಾಶ್ಮೀರದ ಜನಕ್ಕೆ ವಾಸ್ತವ ಇನ್ನೂ ಮನವರಿಕೆ ಆಗಬೇಕು: ಸಂಸದ ಡಾ ಮಂಜುನಾಥ್

ಮುಡಾ ಕೇಸ್‌ನಿಂದ ಹಿನ್ನೆಡೆ?

ರಾಜ್ಯದಲ್ಲಿ ನಡೆದ ಮುಡಾ ಹಗರಣ ಕೇಸ್ ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಯ್ತ? ಎಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿರುವ ನಡೆದಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು, ಆ ವಿಚಾರವಾಗಿ ಯಾವ ಕಾಂಗ್ರೆಸಿಗರು ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಮುಖ್ಯಮಂತ್ರಿಗಳಿಗೆ ಮುಡಾ ಹಗರಣ ಯಾವುದೂ ಕೂಡ ಸಂಬಂಧವಿಲ್ಲ. ಅದರ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

Haryana Election Result 2024: ಮುನ್ನಡೆ ಕಾಯ್ದುಕೊಂಡ ಬಿಜೆಪಿ ಮ್ಯಾಜಿಕ್ ನಂಬರ್‌ನತ್ತ ಹೆಜ್ಜೆ; ಕಾಂಗ್ರೆಸ್ ಹಿನ್ನಡೆ

ಇನ್ನು ಮುಡಾ ಕೇಸ್ ನಲ್ಲಿ ಒಂದು ವೇಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮುಂದಿನ ಮುಖ್ಯಮಂತ್ರಿ ಯಾರು? ಈಗಾಗಲೇ ಹಲವರು ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ ಅವರು, ರಾಜ್ಯದಲ್ಲಿ ಯಾವ ಬದಲಾವಣೆ ಆಗೋದಿಲ್ಲ. ಮುಂದಿನ ಅವಧಿ ಮುಗಿಯುವವರೆಗೆ ಸಿಎಂ ಸಿದ್ದರಾಮಯ್ಯ ಅವರ ಸಿಎಂ ಆಗಿರಲಿಲ್ಲದ್ದಾರೆ. ಸಿಎಂ ಬದಲಾವಣೆ ಅನ್ನುವುದು ಕೇವಲ ಊಹಾಪೋಹ ಎಂದರು. ಇದೇ ವೇಳೆ 50:50  ಸಿಎಂ ಅಧಿಕಾರ ಹಂಚಿಕೆ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಅದೆಲ್ಲ ಬೇರೆ ವಿಚಾರ. ನಮ್ಮ ಸರ್ಕಾರವೇ ಮುಂದಿನ ಅವಧಿಯವರೆಗೆ ಇರುತ್ತದೆ. ಸಿಎಂ ಸಿದ್ದರಾಮಯ್ಯನವರೇ ಮುಂದುವರಿಯುತ್ತಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ