ಯಾದಗಿರಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ವಲಯ ಪಟ್ಟಿಗೆ ವಡಗೇರಾ ಆಯ್ಕೆ

By Ravi Janekal  |  First Published Sep 28, 2023, 7:22 PM IST

ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದ ಯಾದಗಿರಿ ಜಿಲ್ಲೆಯನ್ನು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಜಿಲ್ಲೆಯನ್ನಾಗಿ ಘೋಷಣೆ ಮಾಡಿದೆ. ಈಗ ಅದೇ ಜಿಲ್ಲೆಯ ವಡಗೇರಾ ತಾಲೂಕು ಕೇಂದ್ರ ಸರ್ಕಾರದ ನೀತಿ ಆಯೋಗ ಗುರುತಿಸಿರುವ ಮಹತ್ವಾಕಾಂಕ್ಷೆ ವಲಯ ಪಟ್ಟಿಗೆ ಆಯ್ಕೆಯಾಗಿದೆ. 


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಸೆ.28): ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದ ಯಾದಗಿರಿ ಜಿಲ್ಲೆಯನ್ನು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಜಿಲ್ಲೆಯನ್ನಾಗಿ ಘೋಷಣೆ ಮಾಡಿದೆ. ಈಗ ಅದೇ ಜಿಲ್ಲೆಯ ವಡಗೇರಾ ತಾಲೂಕು ಕೇಂದ್ರ ಸರ್ಕಾರದ ನೀತಿ ಆಯೋಗ ಗುರುತಿಸಿರುವ ಮಹತ್ವಾಕಾಂಕ್ಷೆ ವಲಯ ಪಟ್ಟಿಗೆ ಆಯ್ಕೆಯಾಗಿದೆ. ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯೊಂದಿಗೆ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.

Tap to resize

Latest Videos

undefined

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ವಲಯ ಪಟ್ಟಿಗೆ ವಡಗೇರಾ ಆಯ್ಕೆ

ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಯನ್ನ ಮಹತ್ವಾಕಾಂಕ್ಷೆ ಜಿಲ್ಲೆಯನ್ನಾಗಿ ಕೇಂದ್ರ ಸರ್ಕಾರ ಕಳೆದ 2 ವರ್ಷದಿಂದ ಘೋಷಣೆ ಮಾಡಿತ್ತು. ಅದರಲ್ಲಿ ಕರ್ನಾಟಕದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳು ಮಹತ್ವಾಕಾಂಕ್ಷೆ ಜಿಲ್ಲೆಗಳಾಗಿ ಆಯ್ಕೆಯಾಗಿದ್ದವು. 

ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿರುವುದರ ಹಿಂದೆ ಉದ್ದೇಶ ಬೇರೆ ಇರುತ್ತದೆ: ಸಚಿವ ದರ್ಶನಾಪುರ

ಅಭಿವೃದ್ಧಿಯಲ್ಲಿ ಹಿಂದುಳಿದ ಯಾದಗಿರಿ ಜಿಲ್ಲೆಗೆ ಕೇಂದ್ರ ಸರ್ಕಾರ ಸಾಕಷ್ಟು ವಿಶೇಷ ಅನುದಾನವನ್ನು ನೀಡುತ್ತಿದೆ. ಇನ್ನು ಕೇಂದ್ರ ಸರ್ಕಾರದ ನೀತಿ ಆಯೋಗ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ದೇಶದಲ್ಲಿ ಹಿಂದುಳಿದ ಸುಮಾರು 500 ತಾಲೂಕುಗಳನ್ನು ಮಹತ್ವಾಕಾಂಕ್ಷೆ ವಲಯಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ 14 ತಾಲೂಕುಗಳು ಆಯ್ಕೆಯಾಗಿದ್ದು, ಯಾದಗಿರಿ‌ ಜಿಲ್ಲೆ ವಡಗೇರಾ ತಾಲೂಕು ಸಹ ಆಯ್ಕೆಯಾಗಿದ್ದು ವಿಶೇಷ. ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೃಷಿ, ಮೂಲಭೂತ ಸೌಕರ್ಯ, ನೈರ್ಮಲ್ಯ, ಸಾಮಾಜಿಕ ಭದ್ರತೆ, ಆರ್ಥಿಕ ಭದ್ರತೆ ಸೇರಿದಂತೆ 9 ವಲಯಗಳಲ್ಲಿ ಅತೀ ಹಿಂದುಳಿದ ತಾಲೂಕುಗಳಲ್ಲಿ ವಡಗೇರಾ ತಾಲೂಕು ಒಂದಾಗಿದೆ.

ಪಿಎಂ ನಮೋ ಜೊತೆ ಸಂವಾದ ನಡೆಸಲಿರುವ ಗ್ರಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷ

ಕೇಂದ್ರ ಸರ್ಕಾರದ ನೀತಿ ಆಯೋಗ ಗುರುತಿಸುವ ಮಹತ್ವಾಕಾಂಕ್ಷೆ ವಲಯ ಪಟ್ಟಿಗೆ ವಡಗೇರಾ ಆಯ್ಕೆಯಾಗಿದ್ದರಿಂದ ತಾಲೂಕು ಅಭಿವೃದ್ಧಿಯಾಗುವ ನಿರೀಕ್ಷೆ ಹುಟ್ಟಿಕೊಂಡಿದೆ.‌ ಇದರ ಚಿಂತನಾ ಶಿಬಿರವನನ್ನು ಇದೇ 30 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯ(PM Narendra modi)ವರು ನವದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಲಿದ್ದಾರೆ. 

ಮೋದಿಯವರು ದೇಶದ ವಿವಿಧ ಕಡೆಯಿಂದ ಆಗಮಿಸಿದ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಪಿಎಂ ನಮೋ ಜೊತೆ ಸಂವಾದ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ವಡಗೇರಾ ತಾಲೂಕಿನ ಹೈಯ್ಯಾಳ(ಬಿ) ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ, ಗುರುಸುಣಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೌತಮ್ ಕ್ರಾಂತಿ ಹಾಗೂ ತಾಲೂಕಾ ಪಂಚಾಯತ್ ಇಓ ಮಲ್ಲಿಕಾರ್ಜುನ ಸಂಗ್ವಾರ್ ಅವರಿಗೆ ಆಹ್ವಾನ ಬಂದಿದೆ. 

ಈ ಮೂವರು ದೆಹಲಿಯಲ್ಲಿ ನಡೆಯಲಿರುವ ಮೋದಿ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೋದಿ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಬಹಳ ಖುಷಿ ಹಾಗೂ ಹೆಮ್ಮೆ ಆಗುತ್ತಿದೆ. ನಮ್ಮ ತಾಲೂಕು ಅಭಿವೃದ್ಧಿ ತಾಲೂಕು ಶಿಕ್ಷಣ, ಸಾರಿಗೆ, ಆರೋಗ್ಯ ಸೇರಿದಂತೆ ಹಲವು ವಲಯಗಳಲ್ಲಿ ತೀರಾ ಹಿಂದುಳಿದೆ. ಇದನ್ನು ಹೇಗೆ ಅಭಿವೃದ್ಧಿಪಡಿಸಬಹುದು ಯಾವ ಯಾವ ಯೋಜನೆಗಳನ್ನು ಜಾರಿಗೆ ತರಬೇಕು, ಅದನ್ನು ಹೇಗೆ ಕಾರ್ಯರೂಪ ತರಬೇಕು ಎಂಬುದರ ಬಗ್ಗೆ ಪಿಎಂ ಮೋದಿಯವರ ಜೊತೆಗಿನ ಸಂವಾದದಿಂದ ಪರಿಹಾರ ಪಡೆಯಬಹುದಾಗಿದೆ.

 ಹಾಗಾಗಿ ನಾವು ಮೋದಿಯವರ ಜೊತೆಗಿನ ಸಂವಾದದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದೇವೆ ಎಂದು ಗ್ರಾ.ಪಂ ಅಧ್ಯಕ್ಷೆ ಚಂದ್ರಕಲಾ ಹರ್ಷ ವ್ಯಕ್ತಪಡಿಸಿದರು. 

ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ವಿಶೇಷಚೇತನರ ಪರದಾಟ: ಸರ್ಕಾರಿ ಸೌಲಭ್ಯ ಪಡೆಯಲು ನಿತ್ಯವೂ ಅಲೆದಾಟ

 

9 ವಲಯಗಳಲ್ಲಿ ಹಿಂದುಳಿದ ವಡಗೇರಾ ತಾಲೂಕಿಗೆ ಕೇಂದ್ರ ಸರ್ಕಾರ ಬೂಸ್ಟ್

ಒಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶದ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಮಹತ್ವಾಕಾಂಕ್ಷೆ ಬ್ಲಾಕ್ ಗಳನ್ನು ಗುರುತಿಸಿ ಕೇಂದ್ರ ಸರ್ಕಾರ ವಿಶೇಷ ಕಾಳಜಿಯಿಂದ ಹಿಂದುಳಿದ ವಲಯಗಳನ್ನು ಅಭಿವೃದ್ದಿಗೊಳಿಸುತ್ತಿರುವುದು ವಿಶೇಷ. ಗ್ರಾ.ಪಂ ಜನಪ್ರತಿನಿಧಿಗಳು ಪಿಎಂ ಮೋದಿ ಜೊತೆಗಿನ ಸಂವಾದದಿಂದ ಹಳ್ಳಿಗಳು ಅಭಿವೃದ್ಧಿ ಆಗಬೇಕಿದೆ.

click me!