ಕೋಲಾರದಲ್ಲಿ ಮುಸ್ಲಿಂ ಖಡ್ಗಕ್ಕೆ ವಿರುದ್ಧವಾಗಿ ಹಿಂದೂ ತ್ರಿಶೂಲ ಹಾಕುವುದಾಗಿ ತಾಕೀತು ಮಾಡಿದ ಬೆನ್ನಲ್ಲೇ ಖಡ್ಗ ತೆರವು!

By Sathish Kumar KHFirst Published Sep 28, 2023, 5:35 PM IST
Highlights

ಕೋಲಾರ ನಗರದಲ್ಲಿ ಮುಸ್ಲಿಂ ಖಡ್ಗ ಅಳವಡಿಕೆ ಮಾಡಿದ್ದರಿಂದ ಹಿಂದೂಗಳು ತ್ರಿಶೂಲ ಅಳವಡಿಕೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಖಡ್ಗವನ್ನು ತೆರವು ಮಾಡಲಾಗಿದೆ.

ಕೋಲಾರ (ಸೆ.28): ರಾಜ್ಯದ ಗಡಿ ಜಿಲ್ಲೆಯಾಗಿರುವ ಕೋಲಾರ ನಗರದ ಕ್ಲಾಕ್‌ ಟವರ್‌ನ ಬಳಿ ಈದ್ ಮಿಲಾದ್‌ ಅಂಗವಾಗಿ ಮುಸ್ಲಿಂ ಸಮುದಾಯದಿಂದ ರಾತ್ರೋ ರಾತ್ರಿ 15 ಅಡಿ ಉದ್ದದ ಬೃಹತ್‌ ಖಡ್ಗವನ್ನು ಅಳವಡಿಕೆ ಮಾಡಲಾಗುತ್ತು. ಇದರ ಬೆನ್ನಲ್ಲಿಯೇ ಹಿಂದೂ ಸಮುದಾಯದಿಂದ ತ್ರಿಶೂಲವನ್ನು ಅಳವಡಿಕೆ ಮಾಡುವುದಾಗಿ ಜಿಲ್ಲಾಧಿಕಾರಿ ಅಕ್ರಮ್‌ಪಾಷಾ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣಸ್ವಾಮಿ ಅವರಿಗೆ ತಾಕೀತು ಮಾಡಿದ ಬೆನ್ನಲ್ಲಿಯೇ ಮುಸ್ಲಿಂ ಖಡ್ಗ ಮತ್ತು ಹಸಿರು ಬಟ್ಟೆಯನ್ನು ತೆರವುಗೊಳಿಸಿದ್ದಾರೆ ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನ ಮಲ್ಲೇಶ್ವರಂ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗ್ಗೆ ನಮ್ಮ ಕೋಲಾರ ಜಿಲ್ಲೆಯ ಕ್ಲಾಕ್ ಟವರ್ ನಲ್ಲಿ ವರ್ಷಗಳ ನಂತರ ಭಾರತ ಬಾವುಟ ಹಾಕಲಾಗಿತ್ತು. ಆದರೆ ಆ ಜಾಗದಲ್ಲಿ ಇಂದು ಚಾಕು ಚೂರಿ ತಲ್ವಾರ್ ಸಂಸ್ಕೃತಿ ಶುರುಮಾಡಿದ್ದಾರೆ. ಪುಂಡರ ಒತ್ತಾಯಕ್ಕೆ ಮಣಿದು ನಗರ ಸಭೆ ದ್ವಾರ ಬಾಗಿಲು ನಿರ್ಮಾಣ ಮಾಡಲು ಅವಕಾಶ ಕೊಟ್ಟಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣ ಅವರನ್ನು ಕೇಳಿದಾಗ ನಾವು ಅನುಮತಿ ಕೊಟ್ಟಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಬೆಳಗ್ಗೆ ಮಾಧ್ಯಮದ ಮೂಲಕ ನಾವು ತ್ರಿಶೂಲ ಹಾಕ್ತಿವಿ ಅಂತ ಹೇಳಿದ್ದೆನು. ಅದಕ್ಕೆ ಎಚ್ಚೆತ್ತುಕೊಂಡ ಅಕ್ರಮ್ ಪಾಷ, ನಾರಾಯಣಸ್ವಾಮಿ ಸೇರಿ ಮುಸ್ಲಿಂ ಖಡ್ಗವನ್ನು ತೆರವು ಮಾಡುವ ಕೆಲಸ ಮಾಡಿದ್ದಾರೆ ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ.

ಕೋಲಾರದಲ್ಲಿ 15 ಅಡಿ ಉದ್ದದ ಮುಸ್ಲಿಂ ಖಡ್ಗ, ಹಸಿರು ಬಟ್ಟೆ, ಉರ್ದು ಬರಹದ ಬ್ಯಾನರ್‌ ಅಳವಡಿಕೆ

ಜಿಲ್ಲಾಧಿಕಾರಿ ಹಾಗೂ ನಗರ ಸಭೆ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು. ಶಾಂತಿಯುತವಾದ ಕ್ಲಾಕ್ ಟವರ್ ನಲ್ಲಿ ದ್ವಾರ ಬಾಗಿಲು ನಿರ್ಮಾಣ ಮಾಡಿದ್ದು ಎಷ್ಟು ಸರಿ..? ಇವರಿಗೆ ದ್ವಾರ ಬಾಗಿಲು ಹಾಕಲು ಹೇಳಿದ್ಯಾರು..? ನಾವು ಗಣೇಶ ಹಬ್ಬ ಮಾಡಬೇಕು ಅಂದರೆ ಪರಮಿಷನ್ ಕೊಡಬೇಕು ಅಂತಾರೆ. ಇದಕ್ಕೆ ಯಾವ ರೀತಿಯಲ್ಲಿ ಅವಕಾಶ ಕೊಟ್ರು..? ಕಾಂಗ್ರೆಸ್ ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೋಲಾರ ಸಂಸದ ಮುನಿಸ್ವಾಮಿ ಒತ್ತಾಯಿಸಿದ್ದಾರೆ.

ಗಣೇಶ ಕೂರಿಸಲು ಪರ್ಮಿಷನ್‌ ಬೇಕು, ಖಡ್ಗ ಹಾಕೋಕೆ ಬೇಡ್ವಾ? 
ಕೋಲಾರದಲ್ಲಿ ಒಂದು ಕೋಮಿನವರು ಅಲ್ಪಸಂಖ್ಯಾತ ಸಮುದಾಯದವರು ಕ್ಲಾಕ್‌ ಟವರ್ ಎದುರು ಖಡ್ಗ ಹಾಕಿದ್ದಾರೆ. ನಾವು ಎರಡು ಮೂರು ದಿನಗಳಲ್ಲಿ ನಾವು ಅದೇ ಸ್ಥಳದಲ್ಲಿ ತ್ರಿಶುಲ ಹಾಕ್ತೇವೆ. ನಾವು ಪರ್ಮಿಶನ್ ಕೇಳಿದ್ರೆ ಅಲ್ಲಿನ ಎಸ್ ಪಿ ಕೊಡಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಲ್ಪಸಂಖ್ಯಾತರ ಒಲೈಸೋಕೆ ಹೊರಟಿದ್ದಾರೆ. ನಾವು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು. ಆದರೆ, ಪಾಕಿಸ್ತಾನದಲ್ಲಿ ನಮ್ಮ ಪರಿಸ್ಥಿತಿ ಹೇಗಿದೆ. ಇಲ್ಲಿ ಹೇಗಿದೆ....? ಗಣೇಶ ಹಬ್ಬ ಮಾಡೊಕೆ ನಾವು ನಗರಸಭೆ, ಪೊಲೀಸ್ ಠಾಣೆ, ಕೆಇಬಿ ಪರ್ಮಿಶನ್ ಬೇಕು. ಒಂದು ಕೇಸರಿ ಧ್ವಜ ಹಾಕೋಕೆ ಪರ್ಮಿಶನ್ ಬೇಕು. ಈಗ ಹೇಗೆ ಖಡ್ಗ ಹಾಕೋಕೆ ಅವಕಾಶ ನೀಡಿದಿರಿ. ಸಿಎಂ ಸಿದ್ದರಾಮಯ್ಯ, ಡಿಕೆಶಿ ನಿಮಗೆ ನಾಚಿಕೆ ಆಗಬೇಕು. ಮೊದಲು ಕ್ಷಮೆ ಕೇಳಿ. ಯಾಕೆ ಖಡ್ಗ ಹಾಕೋದಕ್ಕೆ ಅವಕಾಶ ನೀಡಿದ್ರಿ ಎಂದು ಸಂಸದ ಮುನಿಸ್ವಾಮಿ ಕಿಡಿಕಾರಿದರು.

ಸರ್ಕಾರಕ್ಕೆ ಸೆಡ್ಡು ಹೊಡೆದ ಕರ್ನಾಟಕ ಬಂದ್‌ ಹೋರಾಟಗಾರರು: ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗಗಳೂ ತಡೆ

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಹೀಗಾಗಿದೆ: ಕೋಲಾರವನ್ನು ಖಡ್ಗ ಸ್ವಾಗತ ಮಾಡಬೇಕಾ?  ಅದು ನಮ್ಮ ದ್ವಾರ ಆಗಬೇಕಾ? ಕೋಲಾರಕ್ಕೆ ಇತಿಹಾಸ ಇದೆ. ಅತಿ ಹೆಚ್ಚು ಐಎಎಸ್ , ಐಪಿಎಸ್, ಟೀಚರ್ಸ್, ಸೈನಿಕರು ಇರುವ ಜಾಗ ಅದು. ಅದಕ್ಕೆ ಪೌರಾಣಿಕ ಹಿನ್ನಲೆ ಇದೆ. ಆ ಜಿಲ್ಲೆಗೆ ಖಡ್ಗವನ್ನು ಹಾಕ್ತಿರಾ.? ಕೋಲಾರದ ಕ್ಲಾಕ್ ಟವರ್ ನಲ್ಲಿ ಒಂದು ಧರ್ಮದ ಧ್ವಜ ಹಾಕ್ತಾ ಇದ್ದರು. 74 ವರ್ಷ ಹಾಗೆ ಇತ್ತು. ನಮ್ಮ ಸರ್ಕಾರ ಬಂದ ಮೇಲೆ ಭಾರತದ ಧ್ವಜ ಹಾಕಿದ್ದೇವೆ. ಈಗ ಅಲ್ಲಿ ಖಡ್ಗ ಹಾಕ್ತಿರಾ? ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೀಗಾಗಿದೆ ಎಂದು ಆರೋಪಿಸಿದರು.

click me!