Government of Karnataka: ಸರ್ಕಾರದ ವಿರುದ್ಧ ಕಾಗೇರಿ ಅಸಮಾಧಾನ

Published : Mar 15, 2022, 04:33 AM IST
Government of Karnataka: ಸರ್ಕಾರದ ವಿರುದ್ಧ ಕಾಗೇರಿ ಅಸಮಾಧಾನ

ಸಾರಾಂಶ

*   ಈಗಿನ ಮಿತಿಯಿಂದಾಗಿ ಹಲವರಿಗೆ ಅರ್ಜಿ ಸಲ್ಲಿಸಲೇ ಅವಕಾಶ ಆಗುತ್ತಿಲ್ಲ *   ಆದಾಯ ಪ್ರಮಾಣ ಹೆಚ್ಚಿಸಿ ಶೀಘ್ರ ಆದೇಶ *   ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರ ನೀಡಿದ ಸೋಮಣ್ಣ

ಬೆಂಗಳೂರು(ಮಾ.15):  ವಿವಿಧ ವಸತಿ ಯೋಜನೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ನಿಗದಿಗೊಳಿಸಿರುವ ಆದಾಯ ಮಿತಿಯ ಪ್ರಮಾಣವನ್ನು ಹೆಚ್ಚಿಸುವ ಕುರಿತು ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ವಸತಿ ಸಚಿವ. ವಿ.ಸೋಮಣ್ಣ(V Somanna) ಅಶ್ವಾಸನೆ ನೀಡಿದ್ದಾರೆ.

ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ(BJP) ಸದಸ್ಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರ ನೀಡಿದ ಅವರು, ವಸತಿ ಯೋಜನೆಯಡಿ ಆಯ್ಕೆ ಮಾಡಲು ಗ್ರಾಮೀಣ ಭಾಗದಲ್ಲಿ(Rural Area) ಆದಾಯ ಮಿತಿಯನ್ನು 32 ಸಾವಿರ ರು. ಮತ್ತು ನಗರ ಪ್ರದೇಶದಲ್ಲಿ 87 ಸಾವಿರ ರು.ನಿಗದಿಗೊಳಿಸಲಾಗಿದೆ. ಸರ್ಕಾರದ ಆದೇಶದಲ್ಲಿ 42 ಸಾವಿರ ರು.ಗಿಂತ ಕಡಿಮೆ ಮಾಡುವಂತಿಲ್ಲ ಎಂಬ ಕಾರಣಕ್ಕಾಗಿ ವಸತಿ ಯೋಜನೆಗೆ(Housing Plan) ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಗ್ರಾಮೀಣ ಭಾಗದ ಆದಾಯ ಮಿತಿಯನ್ನು 1.20 ಲಕ್ಷ ರು.ಗೆ ಮತ್ತು ನಗರ ಪ್ರದೇಶದ ಆದಾಯ ಮಿತಿಯನ್ನು 3 ಲಕ್ಷ ರು.ಗೆ ಹೆಚ್ಚಳ ಮಾಡಲಾಗುವುದು. ಶೀಘ್ರದಲ್ಲಿಯೇ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದರು.

Karnataka Politics: 'ನಾನು ಸಿದ್ದು, ನನ್ನನ್ನು ಯಾರ ಜತೆಗೂ ಹೋಲಿಸಬೇಡಿ'

ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಮಾತನಾಡಿ, ಸುಳ್ಳು ಪ್ರಮಾಣ ಪತ್ರಗಳನ್ನು ಕೊಟ್ಟರಾಯಿತು. ಈಗ ನಡೆಯುತ್ತಿರುವುದು ಅದೇ ತಾನೆ. ಸುಳ್ಳು ದಾಖಲೆ ನೀಡಿದರೆ ಫಲಾನುಭವಿಗಳು ಹೇಗೋ ಆಯ್ಕೆಯಾಗುತ್ತಾರೆ ಎಂದು ಸರ್ಕಾರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಮಧ್ಯಪ್ರವೇಶಿಸಿದ ಕಾಂಗ್ರೆಸ್‌(Congress) ಸದಸ್ಯ ರಮೇಶ್‌ ಕುಮಾರ್‌, ಈ ಹಿಂದೆಯೂ ಆದಾಯ ಮಿತಿ ಹೆಚ್ಚಳ ಕುರಿತು ಚರ್ಚಿಸಲಾಗಿತ್ತು. ಈಗಲೂ ಪರಿಶೀಲನೆ ಮಾಡಲಿದೆ ಎಂದರೆ ಹೇಗೆ? ಆದಾಯ ಮಿತಿಯನ್ನು ಹೆಚ್ಚಳವಾದರೂ ಮಾಡಿ, ಇಲ್ಲವೇ ಸರ್ಕಾರದ ನಿಗದಿ ಪಡಿಸಿದ ಆದಾಯ ಮಿತಿಯನ್ನು ಕಡಿಮೆಯಾದರೂ ಮಾಡಿ ಎಂದು ಹೇಳಿದರು.

ಸಚಿವ ಸೋಮಣ್ಣ ಅವರು, ಇದು ನಾವು ನಿಗದಿಗೊಳಿಸಿಲ್ಲ. ಹಿಂದಿನ ಸರ್ಕಾರಗಳು ನಿಗದಿಗೊಳಿಸಿವೆ ಎಂದು ಹೇಳಿದಾಗ ಬೇಸರ ವ್ಯಕ್ತಪಡಿಸಿದ ಸಭಾಧ್ಯಕ್ಷರು, ನಿಮ್ಮ ಸರ್ಕಾರ ಬಂದು ಎರಡು ವರ್ಷವಾಗಿದೆ. ಇನ್ನೂ ಪರಿಶೀಲನೆ ಮಾಡಲಾಗುತ್ತದೆ ಎನ್ನುವುದು ಸರಿಯಲ್ಲ. ಇದನ್ನು ಬೇಗ ಇತ್ಯರ್ಥಗೊಳಿಸಬೇಕು. ಆದಾಯ ಮಿತಿಯನ್ನು ನಿಗದಿಗೊಳಿಸುವ ಕಂದಾಯ ಇಲಾಖೆಯಾಗಿರುವುದರಿಂದ ಸಚಿವ ಅಶೋಕ್‌ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚಿಸಿದರು.

ಸಿ.ಟಿ.ರವಿ ಮಾತನಾಡಿ, ಗ್ರಾಮೀಣ ಭಾಗದವರಿಗೆ 1.20 ಲಕ್ಷ ರು., ನಗರ ಪ್ರದೇಶದವರಿಗೆ 3 ಲಕ್ಷ ರು. ಆದಾಯ ಮಿತಿ ಏಕೆ? ಎಲ್ಲರಿಗೂ ಒಂದೇ ಮಾನದಂಡ ಮಾಡಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡುವ ವೇಳೆ ಕೆಲವು ಮಾನದಂಡಗಳನ್ನು ಅನುಸರಿಸಬೇಕು. ಶಾಸಕರ ಅಭಿಪ್ರಾಯಗಳನ್ನು ಗಮಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳು ಬಜೆಟ್‌ ಮೇಲೆ ಉತ್ತರ ನೀಡುವಾಗ ತಿಳಿಸಲಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು.

Chamarajanagar: ಆನೆಮಡುವಿನ ಕೆರೆಗೆ ನೀರು ತುಂಬಿಸಲು ಸಚಿವ ಸೋಮಣ್ಣ ಭರವಸೆ

ಇದೇ ವೇಳೆ ಕಾಂಗ್ರೆಸ್‌ ಸದಸ್ಯ ರಘುಮೂರ್ತಿ ಪ್ರಶ್ನೆಗೆ ಉತ್ತರಿಸಿದ ಸಚಿವ ಸೋಮಣ್ಣ, ವಸತಿ ಯೋಜನೆಗಳಿಗೆ ಆಯ್ಕೆ ಮಾಡುವ ವೇಳೆ ಶಾಸಕರ ಹಕ್ಕನ್ನು ಮೊಟಕುಗೊಳಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

4 ವರ್ಷದೊಳಗೆ ಸಬ್‌ ಅರ್ಬನ್‌ ರೈಲು ಯೋಜನೆ ಪೂರ್ಣ: ಸೋಮಣ್ಣ

ಬೆಂಗಳೂರು(ಮಾ.10): ರಾಜಧಾನಿ ಬೆಂಗಳೂರು(Bengaluru) ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಉಪನಗರ ರೈಲು(Suburban Rail) ಯೋಜನೆಯನ್ನು 2026ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ (ಕಾರಿಡಾರ್‌-2) ಮಾರ್ಗದ ಸಿವಿಲ್‌ ಕಾಮಗಾರಿಯನ್ನು ಮಾರ್ಚ್‌ ಅಂತ್ಯದಿಂದ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಕಾಂಗ್ರೆಸ್‌ನ(Congress) ಪ್ರಕಾಶ್‌ ರಾಥೋಡ್‌ ಅವರ ಪರವಾಗಿ ಯು.ಬಿ. ವೆಂಕಟೇಶ್‌ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಮಗಾರಿ ಆರಂಭ ಕೊಂಚ ವಿಳಂಬವಾಗಿರುವುದು ನಿಜ, ಕಾಮಗಾರಿಗೆ ಶೀಘ್ರವೇ ಪ್ರಧಾನ ಮಂತ್ರಿಗಳಿಂದ ಶಂಕುಸ್ಥಾಪನೆ ಮಾಡಿಸಿ ಕಾಮಗಾರಿ ಆರಂಭಿಸಲಾಗುವುದು. ಉಳಿದ ಮೂರು ಕಾರಿಡಾರ್‌ಗಳ ಟೆಂಡರ್‌ ಕರೆದು ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ, ಹಂತ ಹಂತವಾಗಿ ಟೆಂಡರ್‌ ಕರೆಯಲಾಗುವುದು ಎಂದು ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ