ಜಾತಿಸೂಚಕ ಗ್ರಾಮಗಳ ಹೆಸರು ಬದಲಾವಣೆ, ಸದನದಲ್ಲಿ ಸಚಿವ ಅಶೋಕ್ ಸ್ಪಷ್ಟನೆ

Published : Mar 14, 2022, 10:12 PM IST
ಜಾತಿಸೂಚಕ ಗ್ರಾಮಗಳ ಹೆಸರು ಬದಲಾವಣೆ, ಸದನದಲ್ಲಿ ಸಚಿವ ಅಶೋಕ್ ಸ್ಪಷ್ಟನೆ

ಸಾರಾಂಶ

* ಜಾತಿಸೂಚಕ ಗ್ರಾಮಗಳ ಹೆಸರು ಮಾರ್ಪಾಡು * ಸದನದಲ್ಲಿ ಸಚಿವ ಅಶೋಕ್ ಸ್ಪಷ್ಟನೆ * ಜಾತಿಸೂಚಕ ಗ್ರಾಮಗಳ ಹೆಸರು ಬದಲಾಯಿಸಲು ಒತ್ತಾಯಿಸಿದ್ದ ಶಾಸಕರು  

ಬೆಂಗಳೂರು, (ಮಾ.14): ರಾಜ್ಯದಲ್ಲಿರುವ ಜಾತಿ ಸೂಚಕ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸ ಚಿವ ಆರ್. ಅಶೋಕ್ ವಿಧಾನಸಭೆಯಲ್ಲಿಂದು ಹೇಳಿದರು.

ಇಂದು(ಸೋಮವಾರ) ಕಲಾಪದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಬಗ್ಗೆ ಕಾಂಗ್ರೆಸ್‌ನ ಬಸನಗೌಡ ತುರುವಿಹಾಳ್ ಕೇಳಿದ ಪ್ರಶ್ನೆಗೆ ಅಶೋಕ್ ಉತ್ತರಿಸುವ ವೇಳೆ ಸ್ಪಷ್ಟಪಡಿಸಿದರು. 

ಗುಡ್‌ ನ್ಯೂಸ್: ವಸತಿ ಯೋಜನೆಗಳ ಆದಾಯಮಿತಿ ಹೆಚ್ಚಳ

ಹಲವು ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಇನ್ನೂ ಮಾಡದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಬಸವನಗೌಡ ತುರವಿಹಾಳ್ ಸರಕಾರವನ್ನು ಪ್ರಶ್ನಿಸಿದರು.

ಕಾಂಗ್ರೆಸ್ ಶಾಸಕರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಆರ್ ಅಶೋಕ್, ರಾಜ್ಯದಲ್ಲಿ 3499 ದಾಖಲೆ ರಹಿತ ಜನವಸತಿ ಗ್ರಾಮಗಳ ಪೈಕಿ 632 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಕಂದಾಯ ಗ್ರಾಮಗಳೆಂದು ಘೋಷಿಸಲು ಎಂಟೊಂಭತ್ತು ತಿಂಗಳು‌ ಹಿಡಿಯುತ್ತವೆ. 1041 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.

ಈ ವೇಳೆ ವಡ್ಡರಪಾಳ್ಯ, ಮಾದಿಗರ ಹಳ್ಳಿಗಳಂತಹ ಜಾತಿಸೂಚಕ‌ ಗ್ರಾಮಗಳ ಹೆಸರು ಬದಲಾಯಿಸುವಂತೆ ಶಾಸಕ ರಮೇಶ್ ಕುಮಾರ್ ಒತ್ತಾಯ ಮಾಡಿದರು. ಇದೇ ವೇಳೆ, ಉಪಗ್ರಹ ಮೂಲಕ‌‌ ನಕ್ಷೆ ತಯಾರಿಸಿ ಕಂದಾಯ ಗ್ರಾಮಗಳಾಗಿ ಗುರುತಿಸಲು ಶಾಸಕ ಅಶೋಕ್ ನಾಯ್ಕ ಸಲಹೆ ನೀಡಿದರು.

ಸದಸ್ಯರ ಸಲಹೆಯಂತೆ ಉಪಗ್ರಹ ನಕ್ಷೆ ಬಳಸುವ ಬಗ್ಗೆ ಹಾಗೂ ಜಾತಿಸೂಚಕ ಗ್ರಾಮಗಳ ಹೆಸರುಗಳ ಬದಲಾವಣೆಗೂ ಕ್ರಮ ಕೈಗೊಳ್ಳೋದಾಗಿ‌ ಅಶೋಕ್ ಸದನಕ್ಕೆ ಭರವಸೆ ನೀಡಿದರು.

ರಾಜ್ಯದಲ್ಲಿ ಸ್ಮಶಾಣಗಳ ನಿರ್ಮಾಣ ಸಂದರ್ಭದಲ್ಲೂ ತಾವು ಜಾತಿ ಸೂಚಕ ಹೆಸರುಗಳನ್ನು ತೆಗೆದು ಯಾವುದೇ ಒತ್ತಡಕ್ಕೆ ಮಣಿಯದೆ ಸ್ಮಶಾನವನ್ನು ಜಾತಿಮುಕ್ತಗೊಳಿಸಿದ್ದೇವೆ. ಅದೆ ರೀತಿಯಲ್ಲಿ ಜಾತಿ ಸೂಚಕ ಗಗ್ರಾಮಗಳ ಹೆಸರುಗಳನ್ನು ಬದಲಾಯಿಸುವುದಾಗಿ ಅವರು ಹೇಳಿದರು.

ತಾಂಡಾ ಮತ್ತು ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸುಮಾರು ೭-೮ ತಿಂಗಳು ಬೇಕಾಗುತ್ತದೆ. ಈ ಪ್ರಕ್ರಿಯೆ ಬಹಳ ದೊಡ್ಡದಿದೆ. ಆದಷ್ಟು ಶೀಘ್ರ ಎಲ್ಲ ತಾಂಡಾ ಮತ್ತು ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ ಅಲ್ಲಿನ ನಿವಾಸಿಗಳ ಗಹೆಸರಿಗೆ ಜಮೀನು, ಆರ್‌ಟಿಸಿ, ಖಾತೆ ಪಹಣಿ ಕೊಡಿಸುವ ಕೆಲಸ ಮಾಡುವುದಾಗಿ ಸಚಿವ ಆರ್. ಅಶೋಕ್ ತಿಳಿಸಿದರು.

ವಸತಿ ಯೋಜನೆಗಳ ಆದಾಯಮಿತಿ ಹೆಚ್ಚಳ
ಕರ್ನಾಟಕದ ವಿವಿಧ ವಸತಿ ಯೋಜನೆಗಳಲ್ಲಿ (Housing Schemes) ಫಲಾನುಭವಿಗಳನ್ನು ಆಯ್ಕೆಗೆ ನಿಗದಿಪಡಿಸಿರುವ ಆದಾಯಮಿತಿ ಪ್ರಮಾಣವನ್ನು ಹೆಚ್ಚಳ ಮಾಡಿ ನಾಳೆಯೇ ಸರ್ಕಾರದಿಂದ ಆದೇಶ ಹೊರಡಿಸುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ (V Somanna) ಹೇಳಿದ್ದಾರೆ. 

ಶಾಸಕ ಸಿ.ಟಿ.ರವಿ (CT Ravi) ಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮೀಣ ಭಾಗಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಆದಾಯ ಮಿತಿಯನ್ನು 32 ಸಾವಿರಕ್ಕೆ ನಿಗದಿಪಡಿಸಲಾಗಿತ್ತು. ಇನ್ನು ಮುಂದೆ ಇದನ್ನು ಗ್ರಾಮೀಣ ಪ್ರದೇಶಗಳಲ್ಲಿ 1.20 ಲಕ್ಷಕ್ಕೆ ಹಾಗೂ ನಗರಪ್ರದೇಶಗಳಲ್ಲಿದ್ದ ಆದಾಯ ಮಿತಿ 87 ಸಾವಿರದಿಂದ 3 ಲಕ್ಷ ರೂ.ಗೆ ಏರಿಕೆ ಮಾಡುವುದಾಗಿ ಪ್ರಕಟಿಸಿದರು. 

ಬಜೆಟ್ ಮೇಲೆ ಉತ್ತರ ಕೊಡುವಾಗಿ ಸಿಎಂ ಬೊಮ್ಮಾಯಿ ಅವರು ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿದ ಆದಾಯ ಮಿತಿ ಪ್ರಮಾಣ ಹೆಚ್ಚಳ ಮಾಡುವ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈವರೆಗೂ ನಾವು ಗ್ರಾಮೀಣ ಭಾಗಗಳಲ್ಲಿ 32 ಸಾವಿರ ಹಾಗೂ ನಗರ ಪ್ರದೇಶಗಳಲ್ಲಿ 87 ಸಾವಿರ ರೂ. ಆದಾಯ ಮಿತಿಯನ್ನು ನೀಡಿದ್ದೆವು. ಮಾನದಂಡದ ಪ್ರಕಾರವಾಗಿ ನಿಗದಿಪಡಿಸಲಾಗಿತ್ತು ಎಂದು ಸಚಿವ ಸೋಮಣ್ಣ ಸಮರ್ಥಿಸಿಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: Bengaluru - ಬೆಂಗಳೂರಿನಲ್ಲಿ 7ನೇ ಕ್ಲಾಸ್ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಶಿಕ್ಷಕನ ಬಂಧನ