ಮುಸಲ್ಮಾನರ ವ್ಯಾಪಾರ ಬಹಿಷ್ಕಾರಕ್ಕೆ ಹಿಂದುಗಳ ನೋವಿನ ಸ್ಫೋಟವೇ ಕಾರಣ: ಪೇಜಾವರ ಶ್ರೀ

By Girish Goudar  |  First Published Mar 31, 2022, 12:11 PM IST

*   ವಿವಾದ ಬಗೆಹರಿಸಲು ಮಧ್ಯಪ್ರವೇಶಿಸಲು ಸ್ವಾಮೀಜಿ ಭೇಟಿ ಮಾಡಿದ ಉಡುಪಿ ಜಿಲ್ಲಾ ಸೌಹಾರ್ದ ಸಮಿತಿ
*  ಈಗ ಉಂಟಾಗಿರುವ ಪರಿಸ್ಥಿತಿಗೆ ಮೂಲ ಕಾರಣ ಯಾರು ?
*   ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀ ತಾಕೀತು


ಉಡುಪಿ(ಮಾ.31):  ರಾಜ್ಯಾದ್ಯಂತ ಹೆಚ್ಚುತ್ತಿರುವ ಹಿಂದು ಧಾರ್ಮಿಕ ಕೇಂದ್ರಗಳಲ್ಲಿ ಮುಸ್ಲಿಂ ವ್ಯಾಪಾರಿಗಳ(Muslim Traders) ಬಹಿಷ್ಕಾರವನ್ನು ನಿಲ್ಲಿಸಲು ಮಧ್ಯಪ್ರವೇಶಿಸುವಂತೆ ತಮ್ಮನ್ನು ಮನವಿ ಮಾಡಲು ಬಂದ ಉಡುಪಿ ಜಿಲ್ಲಾ ಸೌಹಾರ್ದ ಸಮಿತಿಗೆ, ಇದು ಹಿಂದುಗಳು ಅನೇಕ ವರ್ಷಗಳಿಂದ ಅನುಭವಿಸುತ್ತಿರುವ ನೋವು ಸ್ಫೋಟಗೊಂಡಿರುವುದರ ಪರಿಣಾಮ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ(Vishwa Prasanna Tirtha Swamiji) ಪ್ರತಿಕ್ರಿಯಿಸಿದ್ದಾರೆ.

ಬುಧವಾರ ಸೌಹಾರ್ದ ಸಮಿತಿಯವರು ಪೇಜಾವರ ಶ್ರೀಗಳನ್ನು(Pejavashri) ಭೇಟಿಯಾಗಿ, ಹಿಂದೂ ದೇವಾಲಯಗಳ(Hindu Temples) ಜಾತ್ರೆ ರಥೋತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಹಾಕಲಾಗುತ್ತಿರುವ ಬಹಿಷ್ಕಾರವನ್ನು ಬಗೆಹರಿಸುವಂತೆ ಮನವಿ ಮಾಡಿದರು.

Tap to resize

Latest Videos

ಮುಸ್ಲಿಂ ರಾಷ್ಟ್ರಗಳಲ್ಲಿ ದುಡಿಯುವ ಹಿಂದೂಗಳ ಮೇಲೂ ಪರಿಣಾಮ, ಸರ್ಕಾರಕ್ಕೆ ಎಚ್ಚರಿಕೆ

ಹಿಂದೂ(Hindu) ಸಮಾಜ ಬಹಳ ಕಾಲದಿಂದ ನೋವನ್ನು ಉಂಡು ಇಂದು ಸ್ಫೋಟಗೊಂಡಿದೆ. ಸಮಾಜದಲ್ಲಿ ಬಾಳಲು ಶಾಂತಿ, ಸಾಮರಸ್ಯ, ಸೌಹಾರ್ದ, ನೆಮ್ಮದಿ ಅವಶ್ಯವಾಗಿ ಬೇಕು, ಆದರೆ ಅದು ಕೇವಲ ಒಂದು ಗುಂಪಿನಿಂದ ಸಾಧ್ಯವಿಲ್ಲ, ನಾಲ್ಕು ಮಂದಿ ಧಾರ್ಮಿಕ ಮುಖಂಡರು ಕುಳಿತು ಮಾತನಾಡುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ, ತಳಮಟ್ಟದಲ್ಲಿ ಇದಕ್ಕೆ ಪರಿಹಾರ ಆಗಬೇಕಾಗಿದೆ, ಈ ಬೆಳವಣಿಗೆಗೆ ಕಾರಣ ಏನು ಎಂಬುದು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚೆ ಮಾಡಬೇಕು ಎಂದರು.

ವಿಧವೆ ಮಹಿಳೆಯ ಕೊಟ್ಟಿಗೆಯಲ್ಲಿದ್ದ ಎಲ್ಲ ಹಸುಗಳನ್ನು ಕಳ್ಳತನ ಮಾಡಲಾಗಿದೆ, ಆ ಮಹಿಳೆ ಬೀದಿಗೆ ಬಿದ್ದಿದ್ದಾರೆ. ಇಂತಹ ನೂರಾರು ಘಟನೆಗಳಿಂದ ನಾವು ಕೂಡ ನೋವು ಅನುಭವಿಸಿದ್ದೇವೆ. ನಾವು ಶಾಂತಿ ಸಹಬಾಳ್ವೆಯಿಂದ ಇರೋಣ ಎಂದು ಬಾಯಲ್ಲಿ ಹೇಳಿದರೆ ಅದು ಸಾಧ್ಯವಿಲ್ಲ. ಸಮಾಜದಲ್ಲಿ ಶಾಂತಿ ಸಹಬಾಳ್ವೆ ನೆಲೆಸಲು ಯಾರ ಮಧ್ಯಸ್ಥಿಕೆಯೂ ಬೇಡ, ಹಿಂದೂ ಸಮಾಜಕ್ಕೆ ನೋವಾಗುವ ಘಟನೆಗಳು ಮುಂದೆ ನಡೆಯದಿದ್ದರೆ ಸಾಮರಸ್ಯ ಬೆಳೆಯಬಹುದು ಎಂದರು.

ಅವರಲ್ಲಾದ ತಪ್ಪಿಗೆ ಅವರೇ ಶಿಕ್ಷೆ ನೀಡಲಿ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ನಾವು ಶಾಂತಿ ಸಹಬಾಳ್ವೆಯಿಂದ ಇರೋಣ ಎಂದು ಬಾಯಲ್ಲಿ ಹೇಳಿದರೆ ಸಾಧ್ಯವಿಲ್ಲ, ಯಾರಿಂದ ಹಿಂದೂ ಸಮಾಜಕ್ಕೆ ಅನ್ಯಾಯವಾಗಿದೆ ಅವರೇ ಸರಿ ಮಾಡಲಿ. ತಪ್ಪು ಮಾಡಿದವರನ್ನು ಆ ಸಮಾಜವೇ ಶಿಕ್ಷಿಸಲಿ, ತಪ್ಪು ಮಾಡಿದವರ ವಿರುದ್ಧ ಪ್ರತಿಭಟಿಸಲಿ. ತಪ್ಪಿತಸ್ಥರಿಗೆ ಬೆನ್ನಿಗೆ ನಿಲ್ಲದಿದ್ದರೆ ಹಿಂದೂ ಸಮಾಜಕ್ಕೆ ನೋವಾಗುವುದಿಲ್ಲ ಎಂದು ನುಡಿದರು.

ಒಬ್ಬಿಬ್ಬರ ತಪ್ಪಿಗೆ ಎಲ್ಲರಿಗೂ ಶಿಕ್ಷೆ ಬೇಡ

ಸೌಹಾರ್ದ ಸಮಿತಿಯ ಮುಖಂಡ ಅಬೂಬಕ್ಕರ್‌ ಆತ್ರಾಡಿ, ಸಮಾಜದಲ್ಲಿ ಸಹಬಾಳ್ವೆ ನೆಲೆಸಲು ಸ್ವಾಮೀಜಿಯವರನ್ನು ಭೇಟಿ ಮಾಡಿದ್ದೇವೆ. ಒಬ್ಬಿಬ್ಬರು ಮಾಡುವ ತಪ್ಪಿಗೆ ಇಡೀ ಸಮುದಾಯವನ್ನೇ ದ್ವೇಷಿಸುವುದು ಸರಿಯಲ್ಲ, ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು, ಹಿಂದೆ ಆದ ಘಟನೆಗಳನ್ನು ಮರೆತು ಸಹಬಾಳ್ವೆಯಿಂದ ಬಾಳಬೇಕು ಎಂದು ಮನವಿ ಮಾಡಿದ್ದೇವೆ ಎಂದರು.

ಧರ್ಮ - ಮನುಷ್ಯತ್ವ ಜೊತೆಯಿರಲಿ

ಸಮಿತಿಯಲ್ಲಿದ್ದ ಉಡುಪಿಯ ಶೋಕಮಾತಾ ಇಗರ್ಜಿಯ ಧರ್ಮಗುರು ಫಾ.ಚಾರ್ಲ್ಸ್, ನಾವೆಲ್ಲರೂ ಪರಸ್ಪರ ಹೊಂದಾಣಿಕೆಯಿಂದ ನಡೆದರೇ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಮಾಜದಲ್ಲಿ ಕೆಲವರು ಅಲ್ಲಲ್ಲಿ ತಪ್ಪುಗಳನ್ನು ಮಾಡುತ್ತಾರೆ, ಆದರೆ ಅವರು ಮಾಡಿದ ತಪ್ಪಿನಿಂದ ಹಲವರಿಗೆ ಸಮಸ್ಯೆಗಳು ಆಗುತ್ತದೆ. ಧರ್ಮ ಎಲ್ಲರಿಗೂ ಬೇಕು, ಧರ್ಮಕ್ಕಾಗಿ ಮನುಷ್ಯತ್ವ ಮರೆಯುವುದು ಸರಿಯಲ್ಲ. ಮನುಷ್ಯತ್ವ ಮತ್ತು ದೈವತ್ವ ಜೊತೆ ಜೊತೆಯಾಗಿ ಹೋದರೆ ಮಾತ್ರ ಜೀವಿಸಲು ಸಾಧ್ಯ ಎಂದು ಹೇಳಿದರು.

ನಿಮ್ಮ‌ ವರ್ತನೆಗಳನ್ನು ಸರಿಪಡಿಸಿಕೊಂಡು ಬನ್ನಿ ಮತ್ತೆ ಮಾತಾಡೋಣ

ಪ್ರಸ್ತುತ ನಾಡಿನಲ್ಲಿ ಹಿಂದು ಮುಸಲ್ಮಾನ್(Hindu-Muslim) ಸಮುದಾಯದ ನಡುವೆ ಉಂಟಾಗಿರುವ ಕಂದಕಕ್ಕೆ ಸಂಬಂಧಿಸಿ ಸಮಸ್ಯೆ ಪರಿಹಾರ ಗೊಳಿಸಬೇಕೆಂದು ಅಪೇಕ್ಷಿಸಿ ತಮ್ಮನ್ನು ಭೇಟಿಯಾದ ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಒಳ್ಳೆಯ ತಿಳುವಳಿಕೆಯ ಮಾತುಗಳನ್ನು ಹೇಳಿ ಕಳುಹಿಸಿದ್ದಾರೆ .

ಶಿಕ್ಷಣಕ್ಕಿಂತ ಧರ್ಮ ಮೇಲು ಎಂಬುದನ್ನು ಸಾಬೀತು ಮಾಡಿದ ಉಡುಪಿ ಹಿಜಾಬ್ ಹೋರಾಟಗಾರ್ತಿಯರು

ಈಗ ಉಂಟಾಗಿರುವ ಸಮಸ್ಯೆಗಳ ಹಿಂದೆ ಅನೇಕ ವರ್ಷಗಳ ನೋವು ಇದೆ .‌ಅದಕ್ಕೆ ಕಾರಣ ಯಾರು ಅನ್ನೋದನ್ನು ಆತ್ಮಾವಲೋಕನ ಮಾಡಿಕೊಳ್ಳಿ, ನಿರಂತರ ಗೋ ಸಾಗಾಟ ಗೋಹತ್ಯೆ ಯಾಕೆ ನಿಂತಿಲ್ಲ?. ಜೀವನೋಪಾಯಕ್ಕೆ ಗೋವುಗಳನ್ನು ಸಾಕಿಕೊಂಡು ಬದುಕುತ್ತಿರುವವರ ಮನೆಗೆ ನುಗ್ಗಿ ಬೆದರಿಸಿ ಗೋವುಗಳನ್ನು ಹೊತ್ತೊಯ್ತಾ ಇದ್ದೀರಿ .‌ ಅಂಥಹ ಅನೇಕ ಕಾನೂನು ಬಾಹಿರವಾದ ಕೆಲಸಗಳಿಂದ ನೊಂದಿರುವ ಹಿಂದು ಸಾಮಾಜವನ್ನು  ಬಿಟ್ಟು ಶಾಂತಿ ಸೌಹಾರ್ದದ ಮಾತುಕತೆ ಅಥವಾ ಪರಿಹಾರ ನನ್ನೊಬ್ಬನಿಂದ ಸಾಧ್ಯವಿಲ್ಲ . 

ಈಗ ಉಂಟಾಗಿರುವ ಪರಿಸ್ಥಿತಿಗೆ ಮೂಲ ಕಾರಣ ಯಾರು ?

ಸಮಾಜದಲ್ಲಿ ಕಾನೂನು ಶಾಂತಿ  ನೆಮ್ಮದಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ  ರೀತಿಗಳ ಬಗ್ಗೆ ಆತ್ಮಾವಲೋಕನ‌ಮಾಡಿಕೊಂಡು ಬನ್ನಿ, ಮತ್ತೆ ಮಾತಾಡೋಣ ಎಂದು ಶ್ರೀಗಳು ಮುಸ್ಲಿಂ ನಿಯೋಗಕ್ಕೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.
 

click me!