ರಸ್ತೆಯಲ್ಲಿ ಕಾರ್‌ ನಿಲ್ಲಿಸಿ ಮೂತ್ರ ಮಾಡಿದ, ಪ್ರಶ್ನಿಸಿದ್ದಕ್ಕೆ ಮರ್ಮಾಂಗ ತೋರಿಸಿದ; BMW ಬಾಯ್‌ಗೆ ಬಲೆ ಬೀಸಿದ ಪೊಲೀಸ್‌!

Published : Mar 08, 2025, 08:25 PM ISTUpdated : Mar 08, 2025, 08:30 PM IST
ರಸ್ತೆಯಲ್ಲಿ ಕಾರ್‌ ನಿಲ್ಲಿಸಿ ಮೂತ್ರ ಮಾಡಿದ, ಪ್ರಶ್ನಿಸಿದ್ದಕ್ಕೆ ಮರ್ಮಾಂಗ ತೋರಿಸಿದ; BMW ಬಾಯ್‌ಗೆ ಬಲೆ ಬೀಸಿದ ಪೊಲೀಸ್‌!

ಸಾರಾಂಶ

ಪುಣೆಯಲ್ಲಿ ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯು ಕಾರ್ ನಿಲ್ಲಿಸಿ ರಸ್ತೆಯಲ್ಲೇ ಮೂತ್ರ ಮಾಡಿದ ಯುವಕನ ವಿಡಿಯೋ ವೈರಲ್ ಆಗಿದೆ. ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪುಣೆ (ಮಾ.8): ಎಣ್ಣೆ ಏಟಿನಲ್ಲಿ ನಡುರಸ್ತೆಯಲ್ಲಿ ಐಷಾರಾಮಿ ಬಿಎಂಡಬ್ಲ್ಯು ಕಾರ್‌ ನಿಲ್ಲಿಸಿ ರಸ್ತೆಯ ಪಕ್ಕದಲ್ಲಿ ನಿಂತು ಮೂತ್ರ ಮಾಡಿದ ಶ್ರೀಮಂತ ಯುವಕನ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪುಣೆಯಲ್ಲಿ ನಡೆದ ಘಟನೆಯ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕಾರ್ಯೋನ್ಮುಖರಾದ ಪುಣೆ ಪೊಲೀಸ್‌, ನಡುರಸ್ತೆಯಲ್ಲಿ ಮೂತ್ರ ಮಾಡಿದ್ದಲ್ಲದೆ, ಮರ್ಮಾಂಗವನ್ನು ತೋರಿಸಿದ ಬಿಎಂಡಬ್ಲ್ಯು ಬಾಯ್‌ಗೆ ಪೊಲೀಸರು ಬಲೆ ಬೀಸಿದ್ದಾರೆ. ಇಡೀ ಘಟನೆಯ ಬಗ್ಗೆ ತನಿಖೆಯನ್ನೂ ಮುಂದುವರಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಘಟನೆ ಯೆರವಾಡದ ಶಾಸ್ತ್ರೀನಗರ ಪ್ರದೇಶದಲ್ಲಿ ನಡೆದಿರುವ ಸಾಧ್ಯತೆ ಇದ್ದು, ಪ್ರತ್ಯಕ್ಷದರ್ಶಿ ಮಾಡಿರುವ ವಿಡಿಯೋ ಇದಾಗಿದೆ ಎಂದು ತಿಳಿಸಿದ್ದಾರೆ.

ಈ ವಿಡಿಯೋ ಬಗ್ಗೆ ನಮಗೆ ಅಲರ್ಟ್‌ ಬಂದ ಬೆನ್ನಲ್ಲಿಯೇ ತನಿಖೆಯನ್ನು ಆರಂಭ ಮಾಡಿದ್ದೇವೆ. ಐಷಾರಾಮಿ ಬಿಎಂಡಬ್ಲ್ಯು ಕಾರ್‌ನಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಅವರಿಬ್ಬರೂ ಕುಡಿತದ ಅಮಲಿನಲ್ಲಿದ್ದರು ಎನ್ನುವುದು ಗೊತ್ತಾಗಿದೆ. ಅವರ ವರ್ತನೆಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲಿಯೇ ಇಬ್ಬರೂ ಕಾರ್‌ನೊಂದಿಗೆ ಪಲಾಯನ ಮಾಡಿದ್ದಾರೆ. ನಾವು ಇಡೀ ಪ್ರದೇಶದ ಸಿಸಿಟಿವಿಯನ್ನು ಪರಿಶೀಲನೆ ಮಾಡುತ್ತಿದ್ದು, ಇಬ್ಬರನ್ನೂ ಶೀಘ್ರದಲ್ಲಿಯೇ ಬಂಧಿಸಲಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಎಣ್ಣೆ ಏಟಿನಲ್ಲಿರುವ ಇಬ್ಬರು ಯುವಕರು ಮಧ್ಯಾಹ್ನದ ವೇಳೆ ಕಾರ್‌ ಡ್ರೈವ್‌ ಮಾಡಿಕೊಂಡು ಬಂದಿದ್ದಾರೆ. ಕಾರ್‌ ಯೆರವಾಡದ ಶಾಸ್ತ್ರೀನಗರದ ಟ್ರಾಫಿಕ್‌ ಸಿಗ್ನಲ್‌ನಲ್ಲಿ ನಿಂತಾಗ, ಡ್ರೈವರ್‌ ಸೀಟ್‌ನಿಂದ ಎದ್ದು ಬಂದ ಯುವಕನೊಬ್ಬ ರಸ್ತೆ ಪಕ್ಕದ ಡಿವೈಡರ್‌ ಮೇಲೆ ನಿಂತು ಮೂತ್ರ ಮಾಡಿದ್ದಾನೆ.

ಮೋದಿ ಮೆರವಣಿಗೆ ವೇಳೆ ಪೇಂಟಿಂಗ್‌ ಹಿಡಿದು ಕಣ್ಣೀರಿಟ್ಟ ಯುವಕ, ಪ್ರಧಾನಿ ಮಾಡಿದ್ದೇನು ಗೊತ್ತಾ?

ಈ ವೇಳೆ ಸ್ಥಳೀಯರು ಅವನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮೂತ್ರ ಮಾಡಿದ ಯುವ ತನ್ನ ಮರ್ಮಾಂಗವನ್ನು ತೋರಿಸಿ ಕಾರ್‌ನೊಂದಿಗೆ ಎಸ್ಕೇಪ್‌ ಆಗಿದ್ದಾನೆ. ಇನ್ನೊಂದೆಡೆ ಕಾರ್‌ನಲ್ಲಿದ್ದ ಮತ್ತೊಬ್ಬ ಯುವಕ ಮದ್ಯದ ಬಾಟಲಿ ಹಿಡಿದುಕೊಂಡಿರುವು ಕೂಡ ಕಂಡಿದೆ.

ಮೊದಲ ರಾತ್ರಿಯ ಬಳಿಕ ವಧುವಿಗೆ ಹೀಗೊಂದು ಪರೀಕ್ಷೆ: ಥೂ.. ಎಂಥ ಅಸಹ್ಯ ಪದ್ಧತಿ ಇದು? ಶಾಕಿಂಗ್​ ವಿಡಿಯೋ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌