ಮೋದಿ ಭಾವಚಿತ್ರವಿರೋ ಪೋಸ್ಟರ್ ಹಿಡಿಯಲು ಹಿಂದೇಟು; ಗ್ರಾಪಂ ಅಧ್ಯಕ್ಷೆ ಫರೀದಾ ಬೇಗಂರಿಂದ ಪ್ರಧಾನಿಗೆ ಅವಮಾನ?

By Ravi Janekal  |  First Published Jan 4, 2024, 12:21 PM IST

ಕೇಂದ್ರ ಸರ್ಕಾರದ‌ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಫರೀದಾ ಬೇಗಂ ಎಂಬಾಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವಿರುವ ಪೋಸ್ಟರ್ ಹಿಡಿಯಲು ನಿರಾಕರಿಸಿದ ಘಟನೆ ಕೊಪ್ಪಳದ ಕುದರಿಮೋತಿ ಗ್ರಾಮದಲ್ಲಿ ನಡೆದಿದೆ. ಪಂಚಾಯ್ತಿ ಅಧ್ಯಕ್ಷೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕೊಪ್ಪಳ ( ಜ.4): ಕೇಂದ್ರ ಸರ್ಕಾರದ‌ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಫರೀದಾ ಬೇಗಂ ಎಂಬಾಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವಿರುವ ಪೋಸ್ಟರ್ ಹಿಡಿಯಲು ನಿರಾಕರಿಸಿದ ಘಟನೆ ಕೊಪ್ಪಳದ ಕುದರಿಮೋತಿ ಗ್ರಾಮದಲ್ಲಿ ನಡೆದಿದೆ. ಪಂಚಾಯ್ತಿ ಅಧ್ಯಕ್ಷೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ‌ ಕಾರ್ಯಕ್ರಮವಾ್ಗಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ. ಹಳ್ಳಿಹಳ್ಳಿಯಲ್ಲೂ ನಡೆಯುತ್ತಿರುವ ಕಾರ್ಯಕ್ರಮ ಆದರೆ ಪೋಸ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇರುವ ಕಾರಣಕ್ಕೆ ಹಿಡಿದುಕೊಳ್ಳಲು ಹಿಂದೇಟು ಹಾಕಿದ ಫರೀದಾ ಬೇಗಂ.

Tap to resize

Latest Videos

undefined

ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ತಲುಪಿಸುವೆ: ಸಂಸದ ಸಂಗಣ್ಣ ಕರಡಿ

ಎಲ್ಲ ಸದಸ್ಯರು, ಕಾರ್ಯಕರ್ತರು ಪೋಸ್ಟರ್ ಹಿಡಿದು ಜನರಿಗೆ ಮಾಹಿತಿ ನೀಡ್ತಾ ಇದ್ರೂ, ಗ್ರಾಪಂ ಅಧ್ಯಕ್ಷೆ ಮಾತ್ರ ಡೋಂಟ್ ಕೇರ್. ಈ ವೇಳೆ ಕೈಗೆ ಪೋಸ್ಟರ್ ಕೊಡಲು ಬಂದಾಗ ಪದೇಪದೆ ನಿರಾಕರಿಸಿದ ಗ್ರಾಪಂ ಅಧ್ಯಕ್ಷೆ ಗ್ರಾಪಂ ಮೊದಲ ಪ್ರಜೆಯಾದ್ರೂ ರಾಜಕೀಯ ಮಾಡಿದ್ರಾ ಅಧ್ಯಕ್ಷೆ. ಗ್ರಾಮಪಂಚಾಯತ್ ಅಧ್ಯಕ್ಷೆಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಬಿಜೆಪಿ ಮುಖಂಡರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಆಯೋಜಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುವ ಫಲಾನುಭವಿಗಳು ದೇಶದ ಪ್ರತಿ ಮನೆಯಲ್ಲೂ ಇದ್ದಾರೆ. ಸಮಾಜದ ಕಟ್ಟಕಡೆಯ ಜನರಿಗೂ ತಲುಪಿಸುವುದೇ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಗುರಿಯಾಗಿದೆ. 

 

ಸ್ವಾತಂತ್ರ್ಯದ 100 ವರ್ಷಕ್ಕೆ ವಿಕಸಿತ ಭಾರತ: ಆರ್‌.ಅಶೋಕ್‌ ವಿಶೇಷ ಲೇಖನ

click me!