ರಾಹುಲ್ ಗಾಂಧಿ ಮೀಸಲಾತಿ ತೆಗೆಯುವ ಬಗ್ಗೆ ಮಾತನಾಡಿದ್ದಾರೆ, ದಲಿತರು ಯಾಕೆ ಸುಮ್ಮನಿದ್ದಾರೆ? ಯತ್ನಾಳ್ ಪ್ರಶ್ನೆ

Published : Sep 15, 2024, 07:40 AM ISTUpdated : Sep 16, 2024, 08:03 AM IST
ರಾಹುಲ್ ಗಾಂಧಿ ಮೀಸಲಾತಿ ತೆಗೆಯುವ ಬಗ್ಗೆ ಮಾತನಾಡಿದ್ದಾರೆ, ದಲಿತರು ಯಾಕೆ ಸುಮ್ಮನಿದ್ದಾರೆ? ಯತ್ನಾಳ್ ಪ್ರಶ್ನೆ

ಸಾರಾಂಶ

ಮೀಸಲಾತಿ ತೆಗೆಯುತ್ತೇವೆಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇದನ್ನು ದಲಿತರು ವಿಚಾರ ಮಾಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯಪುರ (ಸೆ.15): ಮೀಸಲಾತಿ ತೆಗೆಯುತ್ತೇವೆಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇದನ್ನು ದಲಿತರು ವಿಚಾರ ಮಾಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆದು ಹಾಕುತ್ತಾರೆ, ದಲಿತರ ಹಕ್ಕು ಕಸಿದುಕೊಳ್ತಾರೆ, ಸಂವಿಧಾನ ಬದಲಾವಣೆ ಆಗತ್ತೆ ಎಂದು ಬಿಜೆಪಿ ಮೇಲೆ ಅಪವಾದ ಮಾಡುತ್ತಿದ್ದರು. ನರೇಂದ್ರ ಮೋದಿ ಅವರು ಬಂದು ಹತ್ತು ವರ್ಷ ಆಯ್ತು. ಹಿಂದೆ ಆರೂವರೆ ವರ್ಷ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತ ಇತ್ತು. ನಾವೇನಾದರೂ ಸಂವಿಧಾನ ಟಚ್ ಮಾಡಿದ್ವಾ? ಅಂಬೇಡ್ಕರ್ ಹುಟ್ಟಿದ ಮನೆ ಹಾಗೂ ದೆಹಲಿಯಲ್ಲಿ ಕೊನೆಯ ದಿನ ಕಳೆದ ಸ್ಥಳ ಸ್ಮಾರಕ ಮಾಡಿದ್ದು ನರೇಂದ್ರ ಮೋದಿ. ಈಗ ಅಮೆರಿಕಾಗೆ ಹೋಗಿ ದೇಶ ದ್ರೋಹಿ ಹೇಳಿಕೆ ಕೊಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.

 

ಸಮಾನತೆ ಸಿಕ್ಕ ಮೇಲೆ ಮೀಸಲು ಏಕೆ?: ರಾಹುಲ್‌ ಗಾಂಧಿ ಹೇಳಿಕೆಗೆ ಸಿದ್ದರಾಮಯ್ಯ ಬೆಂಬಲ

ರಾಹುಲ್ ಯಾವ ಜಾತಿ?:

ರಾಹುಲ್ ಗಾಂಧಿ ಜಾತಿ ಸಮೀಕ್ಷೆ ಮಾಡುತ್ತೇವೆ ಅಂತಿದ್ದಾರೆ ಅವರಿಗೆ ಗೊತ್ತಿಲ್ಲ ತಾನು ಯಾವ ಜಾತಿಯಲ್ಲಿ ಹುಟ್ಟಿದ್ದೇನೆ ಎಂದು. ರಾಹುಲ್‌ ಗಾಂಧಿ ಹುಟ್ಟಿನ ಬಗ್ಗೆ ಸಂಶಯ ವ್ಯಕ್ತಪಡಿಸಿ, ವಿವಾದಿತ ಹೇಳಿಕೆ ನೀಡಿದರು. ಮುಸ್ಲಿಮರಿಗೆ ಹುಟ್ಟಿದ್ದಾನೋ, ಕ್ರಿಸ್ತರಿಗೆ ಹುಟ್ಟಿದಾನೋ ಅನ್ನೋದು ತನಿಖೆ ಆಗಬೇಕಿದೆ. ಜನಿವಾರ ಹಾಕಿದ ಬ್ರಾಹ್ಮಣ ಅಂತ ತಿಳಿದುಕೊಂಡಿದ್ದಾನೆ. ಅವರ ಅಪ್ಪ ಬೇರೆ, ಅವ್ವ ಇಟಲಿಯಾಕಿ, ಅಪ್ಪ ಮೊಘಲರ ಕೈಯಲ್ಲಿ ಕೆಲಸ ಮಾಡಿದವ, ಮರಿ ಮೊಮ್ಮಗ ಕಂಟ್ರಿ ಪಿಸ್ತೂಲ್ ಇದ್ದಂಗೆ. ಇಂಡಿಯಾದ ಕಂಟ್ರಿ ಪಿಸ್ತೂಲ್ ಸಿಗುತ್ತಿದ್ದವು. ಕಂಟ್ರಿ ಪಿಸ್ತೂಲ್ ಇದ್ದಂಗೆ ರಾಹುಲ್ ಗಾಂಧಿ. ಈಗ ಮೀಸಲಾತಿ ಬಗ್ಗೆ ಯಾಕೆ ದಲಿತರು ಮಾತನಾಡುತ್ತಿಲ್ಲ?. ಹಿಂದುಳಿದವರ ಮೀಸಲಾತಿ ತೆಗಿಯುತ್ತಾನೆ ಅಂತಾನೆ, ಈಗ ದಲಿತರು ಮಾತನಾಡಬೇಕಲ್ಲವೆ? ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ಒಗ್ಗಟ್ಟಾಗಿ ಹೋಗಬೇಕು, ಇಲ್ಲವಾದಲ್ಲಿ ಶಿಸ್ತು ಕ್ರಮದ ಬಗ್ಗೆ ಸೂಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ, ನಿನ್ನೆ ಬಹಳ ಒಳ್ಳೆಯ ಸಭೆ ಆಗಿದೆ, ಆತ್ಮಾವಲೋಕನ ಆಗಿದೆ. ನನಗೆ ವಿಶ್ವಾಸವಿದೆ, ಪಕ್ಷದ ಹೈಕಮಾಂಡ್ ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತದೆ. ನಾವೆಲ್ಲರೂ ಒಗ್ಗಟ್ಟಾಗಿ ಹೋಗಬೇಕು ಅಂತ ಹೈಕಮಾಂಡ್ ಹೇಳಿದೆ. ಪಕ್ಷದ ನಾಯಕರಿಗೆ ಮಾತು ಕೊಟ್ಟಿದ್ದೇವೆ ಅದರಂತೆ ನಡೆಯುತ್ತೇವೆ. ಸಭೆಯಲ್ಲಿ ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಹೆಚ್ಚು ನಾಯಕರಿದ್ದರು ಎನ್ನುವ ವಿಚಾರಕ್ಕೆ ಮಾತನಾಡಿ, ಸಭೆಯಲ್ಲಿ ಏನು ಚರ್ಚೆ ಆಗಿದೆ ಅನ್ನೋದು ಎಲ್ಲಿಯೂ ಮಾತನಾಡಬೇಡಿ ಎಂದಿದ್ದಾರೆ. ಅದನ್ನು ನಾನು ಹೇಳಲ್ಲ ಎಂದರು.

ಮುಸ್ಲಿಂರ ಮೇಲೆ‌ ಕಿಡಿ:

ಬಾಂಗ್ಲಾದೇಶದಂತೆ ದೇಶದಲ್ಲಿ ಹಿಂದೂಗಳ ಹಬ್ಬದ ಮೇಲೆ ಮುಸ್ಲಿಂರ ಗೂಂಡಾಗಿರಿ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರವಿದ್ದಲ್ಲಿ ಗೂಂಡಾಗಿರಿ ನಡೆಯುತ್ತಿದೆ. ಮುಸ್ಲಿಂರ ತುಷ್ಟೀಕರಣದಿಂದ ಹಿಂದೂಗಳ ರಕ್ಷಣೆ ಮಾಡುತ್ತಿಲ್ಲ. ದೇಶದಲ್ಲಿ ಹಿಂದೂಗಳು ಹೇಳಿದಂತೆ ದೇಶ ನಡೆಯಬೇಕು. ಮಸೀದಿ ಮುಂದೆ ಹಾಡಬಾರದು, ಬಾರಿಸಬಾರದು ಅಂದರೆ ಗಾಂಧಿ, ನೆಹರು ಪ್ರತ್ಯೇಕ ಪಾಕಿಸ್ತಾನ ಮಾಡಿಕೊಟ್ಟಿದ್ದಾರೆ, ಅಲ್ಲಿಗೆ ಹೋಗಬಹುದು ಎಂದು ಮುಸ್ಲಿಂರ ಮೇಲೆ ಕಿಡಿ ಕಾರಿದರು.

ರಾಜ್ಯದಲ್ಲಿ ಸಿಎಂ ಕುರ್ಚಿ ಫೈಟಿಂಗ್ ಬೆನ್ನಲ್ಲೇ, ಅಮೇರಿಕಾದಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ ಡಿಕೆಶಿ!

ದೇಶದಲ್ಲಿ ಇನ್ಮುಂದೆ ಇದೆಲ್ಲಾ ನಡೆಯಲ್ಲ, ವಕ್ಫ್ ಕಾಯ್ದೆ ತೆಗೆದು ಹಾಕುತ್ತೇವೆ, ದೇಶದಲ್ಲಿರುವ 12 ಲಕ್ಷ ಎಕರೆ ವಕ್ಫ್ ಆಸ್ತಿಯನ್ನು ಕಂದಾಯ ಇಲಾಖೆಗೆ ತಗೋತಿವಿ ಎಂದು ಯತ್ನಾಳ ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮೀಸಲಾತಿ ತೆಗೆಯುತ್ತಾರೆ ಅಂತಿದ್ದರಲ್ಲಾ. ಸಂವಿಧಾನದಲ್ಲಿ ನಾವಿನ್ನೂ ಮೀಸಲಾತಿ ಗಟ್ಟಿ ಮಾಡುತ್ತೇವೆ.‌ ಬಡವರು, ತುಳಿತಕ್ಕೊಳಗಾದವರಿಗೆ ಮೀಸಲಾತಿ ಕೊಡುತ್ತೇವೆ. ಮತ್ತೆ ಬುದ್ಧಿಜೀವಿಗಳು ಪೇಮೆಂಟ್ ಗಿರಾಕಿಗಳು. ಬುದ್ದಿಜೀವಿಗಳು ಎಂದೆಂದೂ ದೇಶದ ಬಗ್ಗೆ ಮಾತಾಡುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ