ವಿಜಯಪುರ ಜಿಲ್ಲೆಯನ್ನು ಬಸವೇಶ್ವರ ಜಿಲ್ಲೆಯನ್ನಾಗಿ, ಕರ್ನಾಟಕವನ್ನು ಬಸವನಾಡು ಎಂದು ಮಾಡುವ ವಿಚಾರವಾಗಿ ಜಾಗತಿಕ ಲಿಂಗಾಯತ ಸಮುದಾಯವು ಇದರ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ ಎಂದು ಜಾಗತಿಕ ಲಿಂಗಾಯತ ಸಮುದಾಯದ ಪ್ರಧಾನ ಕಾರ್ಯದರ್ಶಿ ಡಾ.ಎಸ್‌ಬಿ ಜಾಮದಾರ ಹೇಳಿದರು.
ಬೆಳಗಾವಿ (ಅ.29): ವಿಜಯಪುರ ಜಿಲ್ಲೆಯನ್ನು ಬಸವೇಶ್ವರ ಜಿಲ್ಲೆಯನ್ನಾಗಿ, ಕರ್ನಾಟಕವನ್ನು ಬಸವನಾಡು ಎಂದು ಮಾಡುವ ವಿಚಾರವಾಗಿ ಜಾಗತಿಕ ಲಿಂಗಾಯತ ಸಮುದಾಯವು ಇದರ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ ಎಂದು ಜಾಗತಿಕ ಲಿಂಗಾಯತ ಸಮುದಾಯದ ಪ್ರಧಾನ ಕಾರ್ಯದರ್ಶಿ ಡಾ.ಎಸ್‌ಬಿ ಜಾಮದಾರ ಹೇಳಿದರು.
ಇಂದು ವಿಜಯಪುರ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಇತ್ತೀಚಿನ ಪ್ರಸ್ತಾವನೆಯನ್ನು ನಾನು ಒಂದು ವಾರದಿಂದ ಮಾಧ್ಯಮಗಳಲ್ಲಿ ಗಮನಿಸುತ್ತಿರುವೆ. ಸಚಿವ ಎಂಬಿ ಪಾಟೀಲ್ ಅವರ ಪ್ರಸ್ತಾವನೆಗೆ ಅದೇ ಜಿಲ್ಲೆಯ ಮತ್ತೋರ್ವ ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯಪುರವನ್ನು ಬಸವನಾಡು ಜಿಲ್ಲೆ ಮಾಡುವ ಅಗತ್ಯವಿಲ್ಲ. ಅಭಿವೃದ್ಧಿ ಪಡಿಸುವುದರ ಕಡೆ ಗಮನಹರಿಸಿ ಎಂದಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಮೊದಲು ಒಂದು ನಿರ್ಣಯಕ್ಕೆ ಬರಲಿ. ಈ ವಿಚಾರವಾಗಿ ಮಂತ್ರಿಗಳಲ್ಲೇ ದ್ವಂದ್ವ ನಿಲುವಿದೆ, ಡಿಸಿ ನಿಲುವು ಕೂಡ ಬೇರೆಯೇ ಇದೆ. ಸರ್ಕಾರ ಕೂಡ ಈ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲವೆಂದು ಕಾಣುತ್ತದೆ ಎಂದರು.
undefined
ಕರ್ನಾಟಕ 'ಬಸವನಾಡು' ಅಂತಾದ್ರೆ ಬಸವ ವಿಚಾರ ಜಗತ್ತಿಗೆ ಇನ್ನಷ್ಟು ಪ್ರಚಾರ : ಬಸವ ಜಯಮೃತ್ಯುಂಜಯ ಸ್ವಾಮೀಜಿ
ನಾನು ಈ ಹಿಂದೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದೆ. ಆಗ 17 ಜಿಲ್ಲೆ, ಪಟ್ಟಣಗಳ ಹೆಸರನ್ನು ಬದಲಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದೆ. ಬೆಳಗಾಂನ್ನು ಬೆಳಗಾವಿ, ಬಿಜಾಪುರವನ್ನು ವಿಜಯಪುರ ಮಾಡಲು ಶಿಫಾರಸು ಮಾಡಿದ್ದೆ. ಐದಾರೂ ವರ್ಷಗಳ ಬಳಿಕ ಕೇಂದ್ರ ಸರ್ಕಾರ ಹೆಸರು ಬದಲಿಸುವ ತೀರ್ಮಾನ ತೆಗೆದುಕೊಂಡಿತು. ಅಂತಿಮವಾಗಿ ಈ ಬಗ್ಗೆ ನಿರ್ಣಯ ಆಗಬೇಕಿರುವುದು ರಾಜ್ಯ ಸರ್ಕಾರದಲ್ಲಿ. ರಾಜ್ಯಸರ್ಕಾರವೇ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಬೇಕು. ಸದ್ಯ ಸಚಿವರ ಹೇಳಿಕೆ ಬಗ್ಗೆ ಗೊಂದಲವಿದೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗುತ್ತೋ? ಇಲ್ವೋ? ಎಂಬ ಬಗ್ಗೆ ನನಗೆ ನಿಖರವಾಗಿ ಮಾಹಿತಿ ಇಲ್ಲ. ಒಂದು ವೇಳೆ ಬಸವ ಜಿಲ್ಲೆಯಾಗಿ ಮಾಡಿದರೂ ಸರ್ಕಾರದ ನಿರ್ಣಯಕ್ಕೆ ನಾವು ಬದ್ಧರಾಗಿರುತ್ತೇವೆ. ಯಾವುದೇ ಕಾರಣಕ್ಕೂ ವಿರೋಧ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೆಸರು ಬದಲಾವಣೆ ಬದಲು ಬಸವಜನ್ಮಭೂಮಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ಸಚಿವ ಶಿವಾನಂದ ಪಾಟೀಲ್