ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಬೆಳಗಾವಿ ಕಾಂಗ್ರೆಸ್‌ನಲ್ಲಿ ಸತೀಶ್ ಜಾರಕಿಹೊಳಿ ಭಿನ್ನಮತ ಚಟುವಟಿಕೆ ನಡೆಸಲು ಸಿಎಂ ಸಿದ್ದರಾಮಯ್ಯರೇ ಕುಮ್ಮಕ್ಕು ಕೊಡುತ್ತಿದ್ದಾರೆ. ಎಲ್ಲ ಕಂಪನಿಗೂ ಸಿದ್ದರಾಮಯ್ಯ ಮೂಲ ಸೂತ್ರದಾರ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿ (ಅ.29): ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಬೆಳಗಾವಿ ಕಾಂಗ್ರೆಸ್‌ನಲ್ಲಿ ಸತೀಶ್ ಜಾರಕಿಹೊಳಿ ಭಿನ್ನಮತ ಚಟುವಟಿಕೆ ನಡೆಸಲು ಸಿಎಂ ಸಿದ್ದರಾಮಯ್ಯರೇ ಕುಮ್ಮಕ್ಕು ಕೊಡುತ್ತಿದ್ದಾರೆ. ಎಲ್ಲ ಕಂಪನಿಗೂ ಸಿದ್ದರಾಮಯ್ಯ ಮೂಲ ಸೂತ್ರದಾರ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಇಂದು ಹುಬ್ಬಳ್ಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2 ವರ್ಷಗಳ ನಂತರ ಡಿಕೆ ಶಿವಕುಮಾರ ಮೈಮೇಲೆ ಬರಬಾರದು ಅನ್ನೋ ಕಾರಣಕ್ಕೆ ಡ್ರಾಮಾ ನಡೆಸಿದ್ದಾರೆ. ಬೆಳಗಾವಿ ಕಾಂಗ್ರೆಸ್‌ನಲ್ಲಿ ಸತೀಶ್ ಜಾರಕಿಹೊಳಿ-ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಮುಸುಕಿನ ಗುದ್ದಾಟ ಬಯಲಾಗಿದೆ. ಇದೆಲ್ಲದರ ಹಿಂದೆ ಸಿದ್ದರಾಮಯ್ಯರ ಕುಮ್ಮಕ್ಕು ಇದೆ ಎಂದರು.
ಐಟಿ ರೇಡ್ ವೇಳೆ ಸಿಕ್ಕ ಹಣ ಕಾಂಗ್ರೆಸ್ಸಿನದು ಅನ್ನೋಕೆ ಏನಿದೆ ಸಾಕ್ಷ್ಯ? : ಜಗದೀಶ್ ಶೆಟ್ಟರ್
ಬಿಜೆಪಿ ಅವಧಿಯಲ್ಲಿ ಯಡಿಯೂರಪ್ಪ ಹೇಗೆ ಬರ ಪರಿಹಾರ ಕೊಟ್ಟಿದ್ರು ಹಾಗೇ ರಾಜ್ಯ ಸರ್ಕಾರ ಬರ ಪರಿಹಾರ ಕೊಡಬೇಕು. ಆದರೆ ಕಾಂಗ್ರೆಸ್ ಸರ್ಕಾರ ಎಲ್ಲದಕ್ಕೂ ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ. ಇವರು ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ, ತುಷ್ಟೀಕರಣ, ಸುಳ್ಳು ಹೇಳುವದನ್ನು ಬಿಟ್ಟು ಏನೂ ಮಾಡಿಲ್ಲ. ರಾಜ್ಯದಲ್ಲಿ ಪವರ್ ಕಟ್ ಆಗ್ತಿದೆ. ರೈತರು ವಿದ್ಯುತ್ ಸಿಗದೇ ಕಂಗಾಲಾಗಿ ಕುಳಿತಿದ್ದಾರೆ. ಈ ಸರ್ಕಾರದಲ್ಲಿ ರೈತರು, ಜನಸಾಮಾನ್ಯರು ಸಂಕಷ್ಟಪಡುತ್ತಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರೀಕ್ಷಾ ಅಕ್ರಮ ಹೊರಗೆ ಬಂದಾಗ ಟೀಕಿಸಿದವರು, ಆರೋಪ ಮಾಡಿದವರು ಇದೀಗ ಅವರದೇ ಸರ್ಕಾರದಲ್ಲಿ ಪರೀಕ್ಷಾ ಅಕ್ರಮ ನಡೆದಿದೆ. ಈ ಸರ್ಕಾರದಲ್ಲಿ ಯಾಕೆ ಆಯ್ತು? ಅದೂ ಖರ್ಗೆ ಅವರ ಕ್ಷೇತ್ರದಲ್ಲಿ ಪರೀಕ್ಷೆ ಅಕ್ರಮ ನಡೆದಿದೆ. ಇದು ಗಂಭೀರವಾಗಿ ಯೋಚನೆ ಮಾಡಬೇಕಾದ ವಿಷಯ ಎಂದರು.
ಇನ್ಮುಂದೆ ಭಾರತವೇ ಇಡೀ ಜಗತ್ತನ್ನು ಮುನ್ನಡೆಸಲಿದೆ: ಜೋಶಿ ಭರವಸೆ
ಇನ್ನು ಇಸ್ರೇಲ್ ಪ್ಯಾಲೆಸ್ತೀನ್ ಯುದ್ಧದ ವಿಚಾರ ಪ್ರಸ್ತಾಪಿಸಿದ ಸಚಿವರು ಭಾರತ ಸರ್ಕಾರ ಉಗ್ರರ ಪರ ನಿಲ್ಲ. ಯಾವತ್ತೂ ಉಗ್ರರಿಗೆ ಸಪೋರ್ಟ್ ಮಾಡಲ್ಲ. ಆದರೆ ಕಾಂಗ್ರೆಸ್ ಪ್ಯಾಲೆಸ್ತೀನ್ ಪರ ನಿಂತಿದೆ. ಆ ಮೂಲಕ ಉಗ್ರರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ಸಿನ ಓಲೈಕೆ ರಾಜಕಾರಣ, ತುಷ್ಟೀಕರಣ, ಇದು ಅವರ ಮೆಂಟಾಲಿಟಿ. ಈ ದೇಶ ಉಗ್ರರಿಗೆ ಸಪೋರ್ಟ್ ಮಾಡಲ್ಲ, ನೀವು ಮಾಡ್ತೀರಾ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ಮಾಜಿ ಸಿಎಂ ಬೊಮ್ಮಾಯಿ ಆರೋಗ್ಯ ವಿಚಾರದಲ್ಲಿ ಸಂಕುಚಿತ ಬುದ್ಧಿಯಿಂದ ಹೇಳಿಕೆ ನೀಡಿರುವುದರ ಬಗ್ಗೆ ಖಂಡಿಸಿದರು. ಯಾರದೇ ಅನಾರೋಗ್ಯ, ಸಾವಿನ ವಿಚಾರದಲ್ಲಿ ಸಂಕುಚಿತ ಬುದ್ಧಿ ತೋರಿಸಬಾರದು. ಸಜ್ಜನಿಕ ಇರಬೇಕು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅನಾರೋಗ್ಯದ ಕುರಿತು ಮಾತಾಡಿರೋದು ಸರಿಯಲ್ಲ. ಸ್ವತಃ ಸಿದ್ದರಾಮಯ್ಯರೇ ಹೋಗಿ ಬೊಮ್ಮಾಯಿ ಅವರ ಆರೋಗ್ಯ ವಿಚಾರಿಸಿದ್ದಾರೆ. ನಾವು ಘನತೆಯಿಂದ ಮಾತಾಡಬೇಕು ಎಂದರು.