Bagalkot: ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆ, ನಾನೂ ವಿಚಾರಣೆ ಮಾಡ್ತಿದ್ದೀನಿ ಎಂದ ಪತ್ನಿ ವೀಣಾ!

By Santosh Naik  |  First Published Sep 4, 2022, 6:30 PM IST

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ 2ನೇ ಮದುವೆಯಾಗಿರುವ ವಿಚಾರದ ಬಗ್ಗೆ ಅವರ ಪತ್ನಿ ವೀಣಾ ಕಾಶಪ್ಪನವರ್‌ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನಾನೂ ಕೂಡ ವಿಚಾರಣೆ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.


ಬಾಗಲಕೋಟೆ (ಸೆ.4): ಹನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ನಟಿಯ ಜೊತೆ 2ನೇ ಮದುವೆಯಾಗಿರುವ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಪತ್ನಿ ವೀಣಾ ಕಾಶಪ್ಪನವರ್‌ ಪ್ರತಿಕ್ರಿಯೆ ನೀಡಿದ್ದಾರೆ. ನಟಿಯಸ ಜೊತೆಗೆ ವಿಜಯಾನಂದ ಕಾಶಪ್ಪನವರ್‌ ಇರುವ ಚಿತ್ರಗಳು ವೈರಲ್‌ ಆಗಿದ್ದವು. ಅದಲ್ಲದೆ, ಆಕೆಯೊಂದಿಗೆ ವಿಜಯಾನಂದ ಕಾಶಪ್ಪನವರ್‌ ಮಗು ಕೂಡ ಹೊಂದಿದ್ದಾರೆ ಎನ್ನಲಾಗಿದ್ದು ಅದರ ಪ್ರಮಾಣಪತ್ರ ಕೂಡ ವೈರಲ್‌ ಆಗಿದ್ದವು. ಈ ವಿಚಾರದ ಬಗ್ಗೆ ವೀಣಾ ಕಾಶಪ್ಪನವರ್‌ ಮೊದಲ ಬಾರಿಗೆ ಮಾತನಾಡಿದ್ದಾರೆ.  ವೈಯಕ್ತಿಕ ವಿಚಾರ ಮೊನ್ನೆ ಮಾಧ್ಯಮಗಳಲ್ಲಿ ತೋರಿಸಲಾಗಿದೆ. ಈ ಬಗ್ಗೆ ನಾನೂ ಕೂಡ ವಿಚಾರಣೆ ಮಾಡುತ್ತಿದ್ದೇನೆ. ಸಂಪೂರ್ಣ  ಮಾಹಿತಿ ಸಿಕ್ಕ ಬಳಿಕ ಮತ್ತೊಮ್ಮೆ ನಾನು ಸುದ್ದಿಗೋಷ್ಠಿ ಮಾಡುತ್ತೇನೆ ಎಂದು ಹನಗುಂದ ಕ್ಷೇತ್ರದಲ್ಲಿ ಹರಿಡಾಡುತ್ತಿರುವ ವೈಯಕ್ತಿಕ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ವೀನಾ ಉತ್ತರ ನೀಡಿದ್ದಾರೆ. ಆದಷ್ಟು ಬೇಗ ಎಲ್ಲವನ್ನೂ ತಿಳಿದುಕೊಂಡು ವಿವರ ನೀಡುತ್ತೇನೆ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇದ್ದಿರಲಿಲ್ಲ. ಮಾಧ್ಯಮಗಳಲ್ಲಿ ತೋರಿಸಿದಾಗಲೇ ನನಗೂ ಈ ವಿಚಾರ ಗೊತ್ತಾಗಿದ್ದು ಎಂದು ಹೇಳಿದ್ದಾರೆ. ಆಗಲೂ ಅವರನ್ನೇ ಕೇಳಿ ಅಂತ ಹೇಳಿದ್ದೆ ಈಗಲೂ ಕೂಡ ಅವರನ್ನೇ ಕೇಳಿ ಅಂತ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಸರ್ಟಿಫಿಕೇಟ್ ತೋರಿಸಿದ್ದಾರೆ ಅಂದ್ರೆ ಸುಳ್ಳು ತೋರಿಸಿದ್ದರೋ ನಿಜ ತೋರಿಸಿದ್ದಾರೋ ಅನ್ನೋದು ಮಾಧ್ಯಮದವರಿಗೆ ಗೊತ್ತಿರುತ್ತದೆ. ಸರ್ಕಾರಿ ದಾಖಲೆಗಳು ಸುಳ್ಳಾಗಲು ಸಾಧ್ಯವಿಲ್ಲ. ಈ ವಿಚಾರವಾಗಿ ಅವರನ್ನು ನೀವೇ ಕೇಳಬೇಕು. ಸದ್ಯ ನಾನು ಇದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇನೆ. ನನಗೆ ಇನ್ನೂ ಸಮಯ ಬೇಕಿದೆ. ಮಾಹಿತಿ ಪಡೆದ ನಂತರ ಸುದ್ದಿಗೋಷ್ಠಿ ಮಾಡುತ್ತೇನೆ. ತಪ್ಪು ಅಂತ ಮಾಧ್ಯಮದವರು ತೋರಿಸಿದ್ದೀರಿ. ಅದು ಸುಳ್ಳು ಮಾಹಿತಿ ಅಲ್ಲ ಅಂತ ಕುಡ ಹೇಳಿದ್ದೀರಿ. ಹೀಗಾಗಿ ಮಾಧ್ಯಮ ವರದಿಗಳನ್ನು ನಾನು ಗೌರವಿಸುತ್ತೇನೆ ಎಂದು ವೀಣಾ ಕಾಶಪ್ಪನವರ್‌ ಹೇಳಿದ್ದಾರೆ.

Tap to resize

Latest Videos

undefined

ಏನಿದು ಪ್ರಕರಣ: ವಿಜಯಾನಂದ ಕಾಶಪ್ಪನವರ್‌ ಮಾಡಲ್‌ ಹಾಗೂ ನಟಿ ಜೊತೆಗಿನ ಕೆಲವು ಖಾಸಗಿ ಫೋಟೋಗಳು ತಿಂಗಳ ಹಿಂದೆ ವೈರಲ್‌ ಆಗಿದ್ದವು. ಇದರ ಬೆನ್ನಲ್ಲಿಯೇ ಅವರು 2ನೇ ಮದುವೆ ಆಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಅಲ್ಲದೇ ಮಗುವೊಂದರ ಜನನ ಪ್ರಮಾಣ ಪತ್ರದಲ್ಲಿ ವಿಜಯಾನಂದ ಕಾಶಪ್ಪನವರ ಹೆಸರು ಇರುವುದು ಈ ಪ್ರಕರಣಕ್ಕೆ ಇನ್ನಷ್ಟು ಪುಷ್ಠಿ ನಿಡಿದ್ದವು.

ನಟಿ ಜೊತೆಗಿನ ಫೋಟೋ ವೈರಲ್, ಸ್ಪಷ್ಟನೆ ಕೊಟ್ಟ ವಿಜಯಾನಂದ ಕಾಶಪ್ಪನವರ್

ನಟಿ ಹಾಗೂ ಮಾಡೆಲ್‌ ಕೂಡ ಆಗಿರುವ, ಪೈಪೋಟಿ ಚಿತ್ರದಲ್ಲಿ ನಟಿಸಿರುವ ಸಾನಿಕಾ ಜೊತೆಗಿನ ಫೋಟೋ ಬಹಿರಂಗವಾಗಿತ್ತು. ಅಲ್ಲದೆ, ಇವರಿಬ್ಬರಿಗೆ ಹೆಣ್ಣು ಮಗು ಕೂಡ ಜನಿಸಿದೆ. ಅದಕ್ಕೆ ಸಾಕ್ಷಿ ಎಂಬಂತೆ, ಮಾಡೆಲ್‌ನ ಮಗುವಿನ ತಂದೆಯ ಕಾಲಂ ನಲ್ಲಿ ವಿಜಯಾನಂದ ಕಾಶಪ್ಪನವರ್ ಎಂಬುದಾಗಿ ಉಲ್ಲೇಖಿಸಿರುವ ಜನನ ಪ್ರಮಾಣ ಪತ್ರವೊಂದು ವೈರಲ್ ಆಗಿತ್ತು.  ಈ ಹಿನ್ನೆಲೆಯಲ್ಲಿ ಪೈಪೋಟಿ ಎಂಬ ಚಿತ್ರದಲ್ಲಿ ನಟಿಸಿದ ನಟಿಯೊಂದಿಗೆ ವಿಜಯಾನಂದ ಕಾಶಪ್ಪನವರ್ ಎರಡನೇ ವಿವಾಹವಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ಬೇರೆ ರೀತಿಯಲ್ಲಿ ಗುಸು ಗುಸು ಪಿಸು ಪಿಸು ಶುರುವಾಗಿದ್ದವು.  ಬೆಂಗಳೂರಿನ ಮದರ್‌ಹುಡ್‌ ಅಸ್ಪತ್ರೆಯಲ್ಲಿ ಮಗು ಜನಿಸಿದ್ದಾಗಿ ಪ್ರಮಾಣಪತ್ರದಲ್ಲಿ ವಿವರ ಇದ್ದವು. ಇನ್ನು ನಟಿಯ ಕೊರಳಲ್ಲಿ ತಾಳಿ ಕೂಡ ಕಂಡಿತ್ತು.

ವೀಣಾ ಕಾಶಪ್ಪನವರ್‌ಗೆ ಇದ್ಯಾ ರಾಜಕೀಯ ಅನುಭವ?

ಇದೇ ವಿಚಾರವಾಗಿ ವಿಜಯಾನಂದ ಕಾಶಪ್ಪನವರ್ ಹಾಗೂ ವೀಣಾ ಕಾಶಪ್ಪನವರ್‌ ನಡುವೆ ಜಗಳ ಕೂಡ ನಡೆದಿದ್ದವು ಎಂದು ವರದಿಯಾಗಿದ್ದವು. ಗಂಡ-ಹೆಂಡತಿ ನಡುವಿನ ಗಲಾಟೆಯ ಬಳಿಕ, ವೀಣಾ ಕಾಶಪ್ಪನವರ್‌, ಬೆಂಗಳೂರಿನಲ್ಲಿ ಖಾಸಗಿ ಅಪಾರ್ಟ್‌ನಲ್ಲಿ ನೆಲೆಸಿದ್ದರು. ಈಗ ಪತಿಯ 2ನೇ ಮದುವೆಯ ಬಗ್ಗೆ ವೀಣಾ ಕಾಶಪ್ಪನವರ್‌ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

click me!