ಬೆಂಗಳೂರಲ್ಲಿ ಜಾರಿಗೆ ಬರುತ್ತಾ ವಿಯೆಟ್ನಾಂ ಟ್ರಾಫಿಕ್ ನಿಯಮ? ಸಿಗಲಿದೆ 17,000 ರೂ ಬಹುಮಾನ

By Chethan Kumar  |  First Published Jan 7, 2025, 4:07 PM IST

ಟ್ರಾಫಿಕ್ ನಿಯಮ ಯಾರಾದರೂ ಉಲ್ಲಂಘಿಸುವದನ್ನು ನೀವು ನೋಡಿದರೆ ವರದಿ ಮಾಡಿದರೆ ಸಾಕು, ನಿಮಗೆ 17,000 ರೂಪಾಯಿ ಬಹುಮಾನ ಸಿಗಲಿದೆ. ಇದೀಗ ಈ ನಿಯಮ ಬೆಂಗಳೂರಲ್ಲಿ ಜಾರಿಗೆ ಬರುತ್ತಾ? 
 


ವಿಯೆಟ್ನಾಂ(ಜ.07)  ಬೆಂಗಳೂರು ಟ್ರಾಫಿಕ್ ಏಷ್ಯಾದ ಅತ್ಯಂತ ಕೆಟ್ಟ ಟ್ರಾಫಿಕ್ ಎಂದು ಇತ್ತೀಚೆಗಷ್ಟೆ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಪಟ್ಟಿಯಲ್ಲಿ ಪ್ರಕಟಿಸಿದೆ. ಬೆಂಗಳುರು ವಾತಾವರಣ, ಉದ್ಯೋಗ, ವೇತನ, ಸಂಸ್ಕೃತಿ ಎಲ್ಲವೂ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಟ್ರಾಫಿಕ್ ವಿಚಾರಕ್ಕೆ ಬಂದರೆ ಮಾತ್ರ ಸಹವಾಸವೇ ಬೇಡ ಅಂತಾರೆ. ಇದೀಗ ಬೆಂಗಳೂರನ್ನು ಟ್ರಾಫಿಕ್ ಮುಕ್ತ ಸಿಟಿ ಮಾಡಲು ಪ್ರಯತ್ನಗಳು ನಡೆಯುತ್ತಿದೆ. ಇದಕ್ಕಾಗಿ ಹಲವು ಬದಲಾವಣೆ ಮಾಡಲಾಗುತ್ತಿದೆ. ಇದರ ನಡುವೆ ವಿಯೆಟ್ನಾಂನಲ್ಲಿ ಹೊಸ ವರ್ಷದಿಂದ ಜಾರಿಗೊಳಿಸಿರುವ ಸ್ನಿಚ್ ನಿಯಮ ಜಾರಿಗೆ ಬರುತ್ತಾ ಅನ್ನೋ ಚರ್ಚೆಗಳು ಶುರುವಾಗಿದೆ. ಈ ನಿಯಮ ಜಾರಿಗೆ ತಂದರೆ ಪ್ರತಿಯೊಬ್ಬರಿಗೆ 17,000 ರೂಪಾಯಿ ಗೆಲ್ಲುವ ಅವಕಾಶ ಸಿಗಲಿದೆ. 

ವಿಯೆಟ್ನಾಂನಲ್ಲಿ ಟ್ರಾಫಿಕ್ ಉಲ್ಲಂಘನೆ ನಿಯಂತ್ರಿಸಲು, ನಿಯಮ ಪಾಲಿಸುವಂತೆ ಮಾಡಲು ಸ್ನಿಚ್ ನಿಯಮ ಜಾರಿಗೆ ತರಲಾಗಿದೆ. ಹೊಸ ವರ್ಷದ ಆರಂಭದಿಂದ ಹೊಸ ನಿಯಮ ಜಾರಿಗೆ ತರಲಾಗಿದೆ. ರಸ್ತೆ ಸುರಕ್ಷತೆ, ನಿಯಮ ಪಾಲನೆ, ಟ್ರಾಫಿಕ್ ನಿಯಮ ಉಲ್ಲಂಘನೆಗಳ ಸಮಸ್ಯೆಗೆ ಮುಕ್ತಿ ಹಾಡಲು ವಿಯೆಟ್ನಾಂ ಸ್ನಿಚ್ ಲಾ ಜಾರಿಗೆ ತಂದಿದೆ. ಈ ನಿಯಮದಲ್ಲಿ ಪ್ರತಿಯೊಬ್ಬರು ಹಣ ಗೆಲ್ಲುವ ಅವಕಾಶ ಪಡೆಯುತ್ತಾರೆ. 

Tap to resize

Latest Videos

ಆ್ಯಂಬುಲೆನ್ಸ್‌ಗೆ ದಾರಿ ಬಿಡದೇ ಸಾಗಿದ ಕಾರು ಮಾಲೀಕ, ಮನೆ ಸೇರುವಷ್ಟರಲ್ಲೇ ಕಾದಿತ್ತು ಆಘಾತ!

ಸ್ನಿಚ್ ಲಾ  ಟ್ರಾಫಿಕ್ ಕಂಟ್ರೋಲ್ ಮಾಡಲು, ಯಾರೂ ನಿಯಮ ಉಲ್ಲಂಘಿಸದಂತೆ ತಡೆಯಲು ಸಾಧ್ಯವಾಗಲಿದೆ ಎಂದು ವರದಿಗಳು ಹೇಳುತ್ತಿದೆ. ಕಾರಣ ರಸ್ತೆಯಲ್ಲಿ ಯಾರಾದರೂ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ತಕ್ಷಣ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದರೆ ಸಾಕು. ಸೂಕ್ತ ದಾಖಲೆಗಳೊಂದಿಗೆ ಟ್ರಾಫಿಕ್ ನಿಯಮದ ಮಾಹಿತಿ ನೀಡಬೇಕು. ಅಥವಾ ಟ್ರಾಫಿಕ್ ನಿಯಮ ಉಲ್ಲಂಘನೆ ಸ್ಪಷ್ಟ ಮಾಹಿತಿ, ಸ್ಥಳ, ದಿನಾಂಕ, ಸಮಯ ಸೇರಿದಂತೆ ಎಲ್ಲಾ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು. ನೀವು ನೀಡಿದ ಮಾಹಿತಿ ಆಧರಿ ಪೊಲೀಸಲು ಪರಿಶೀಲನೆ ಮಾಡುತ್ತಾರೆ. ಸಿಸಿಟಿವಿ ಸೇರಿದಂತೆ ಇತರ ದಾಖಲೆ ಪರಿಶೀಲಿಸಿ ನಿಜವಾಗಿಯೂ ಟ್ರಾಫಿಕ್ ಉಲ್ಲಂಘನೆಯಾಗಿದ್ದಲ್ಲಿ, ಅವರಿಗೆ ದಂಡ ವಿಧಿಸಲಾಗುತ್ತದೆ. ಇತ್ತ ಈ ಟ್ರಾಫಿಕ್ ನಿಯಮ ಉಲ್ಲಂಘನೆ ಸೂಚನೆ ನೀಡಿದವರಿಗೆ 200 ಅಮೆರಿಕನ್ ಡಾಲರ್ ಮೊತ್ತವನ್ನು ಬಹುಮಾನದ ರೂಪದಲ್ಲಿ ನೀಡಲಾಗುತ್ತಿದೆ.

ಜನವರಿ 1, 2025ರಿಂದ ಈ ಹೊಸ ನಿಯಮ ಜಾರಿಗೆ ಬಂದಿದೆ. ಹೊಸ ನಿಯಮ ಜಾರಿ ಮಾಡಿ ವಿಯೆಟ್ನಾಂನಲ್ಲಿ ಟ್ರಾಫಿಕ್ ಉಲ್ಲಂಘನೆ ಕಡಿಮೆಯಾಗಿದೆಯಾ ಅನ್ನೋದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕಾರಣ ಈ ನಿಯಮ ಜಾರಿಗೆ ಬಂದು ಒಂದು ವಾರವಾಗಿದೆ. ಹೀಗಾಗಿ ಈಗಲೇ ಅಂಕಿ ಅಂಶ ನೋಡಿಕೊಂಡು ಉತ್ತರಿಸುವುದು ಕಷ್ಟ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈ ನಿಯಮ ಬೆಂಗಳೂರು ಸೇರಿದಂತೆ ಭಾರತದಲ್ಲಿ ಜಾರಿಯಾಗಲಿ ಎಂದು ಹಲವರು ಆಗ್ರಹಿಸಿದ್ದಾರೆ. ಈ ಕುರಿತು ಪರ ವಿರೋಧ ಚರ್ಚೆಗಳು ನಡೆದಿದೆ.

ವಿಯೆಟ್ನಾಂ ನಿಯಮ ಭಾರತದಲ್ಲಿ ಜಾರಿ ಮಾಡಿದರೆ ವಾಹನ ಓಡಿಸುವಾ ಎಲ್ಲರೂ ಮೊಬೈಲ್ ತೆಗೆದು ಇತರರ ಟ್ರಾಫಿಕ್ ನಿಯಮ ಉಲ್ಲಂಘನೆ ವರದಿ ಮಾಡಲು ಜಿದ್ದಿಗೆ ಬೀಳತ್ತಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.ಮತ್ತೆ ಕೆಲವರು ಇದಕ್ಕಾಗಿ ಹೊಸ ಎಜೆನ್ಸಿಗಳು ಹುಟ್ಟಿಕೊಳ್ಳುತ್ತೆದೆ. ಈ ಎಜೆನ್ಸಿ ಸಿಬ್ಬಂದಿಗಳು ಎಲ್ಲಾ ಕಡೆ ಕ್ಯಾಮೆರಾ, ಮೊಬೈಲ್ ಹಿಡಿದು ಯಾರು ಟ್ರಾಫಿಕ್ ಉಲ್ಲಂಘನೆ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ನೀಡುತ್ತಾರೆ. ಇವರಿಗೆ ಇಂತಿಷ್ಟು ವೇತನ ಫಿಕ್ಸ್ ಮಾಡಲಾಗುತ್ತದೆ.  ಇಷ್ಟೇ ಅಲ್ಲ ತಿಂಗಳಲ್ಲಿ ಇಷ್ಟು ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣ ವರದದಿ ಮಾಡಲೇಬೇಕು ಎಂದು ಟಾರ್ಗೆಟ್ ನೀಡುತ್ತಾರೆ. ಇಂತಹ ತಲೆಕೆಟ್ಟ ನಿಯಮಗಳು ಭಾರತದಲ್ಲಿ ಯಾವತ್ತಿಗೂ ಸರಿಯಾಗುವುದಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

ಥಾರ್ ಕಾರಿನಲ್ಲಿ ಹೈವೇಯಲ್ಲಿ ಹೈಸ್ಪೀಡ್ ಜೊತೆಗೆ ಮಹಿಳೆಯರ ತಪಾಂಗುಚ್ಚಿ ಡ್ಯಾನ್ಸ್ ವೈರಲ್!
 

click me!