ಸೋದರಮಾವನೊಂದಿಗೆ ಟು ಬಿಟ್ಟ ಕ್ಯೂಟ್ ಪೋರಿ; ಚಾಕ್ಲೇಟ್ ಕೊಟ್ರು ಒಪ್ತಿಲ್ಲ

Published : Jan 07, 2025, 04:00 PM IST
ಸೋದರಮಾವನೊಂದಿಗೆ ಟು ಬಿಟ್ಟ ಕ್ಯೂಟ್ ಪೋರಿ; ಚಾಕ್ಲೇಟ್ ಕೊಟ್ರು ಒಪ್ತಿಲ್ಲ

ಸಾರಾಂಶ

ಸೋದರ ಮಾವನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಪುಟ್ಟ ಬಾಲಕಿ ಮಾತನಾಡಲು ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಾಕ್ಲೆಟ್, ಐಸ್ ಕ್ರೀಂ ಆಮಿಷವೊಡ್ಡಿದರೂ ಬಾಲಕಿ ಮಾತನಾಡದೇ ಇರುವುದು ನೆಟ್ಟಿಗರ ಮನ ಗೆದ್ದಿದೆ.

ಧಾರವಾಡ: ಮನೆಯಲ್ಲಿ ಮಕ್ಕಳಿದ್ರೆ  ತುಂಬಾ ಲವಲವಿಕೆ ಇರುತ್ತೆ ಎಂಬ ಮಾತಿದೆ. ಮಕ್ಕಳ ತುಂಟಾಟ, ಆಟ, ಅಳು  ಇಡೀ ಮನೆಯನ್ನು ಅಲರ್ಟ್ ಆಗಿರಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇಂದು ಪೋಷಕರು ಸಹ ಮಕ್ಕಳ ವಿಡಿಯೋಗಳನ್ನು ಸೆರೆ ಹಿಡಿದು ಹಂಚಿಕೊಳ್ಳುತ್ತಿರುತ್ತಾರೆ. ಇಂತಹ ವಿಡಿಯೋಗಳು ಕಡಿಮೆ ಸಮಯದಲ್ಲಯೇ ವೈರಲ್ ಆಗುತ್ತವೆ. ನೆಟ್ಟಿಗರು ಸಹ ಪದೇ ಪದೇ ಇಂತಹ ವಿಡಿಯೋಗಳನ್ನು ನೋಡುತ್ತಿರುತ್ತಾರೆ. ಇದೀಗ ಇಂತಹುವುದೇ ಒಂದು ವಿಡಿಯೋ ವೈರಲ್ ಆಗಿದ್ದು, ಪುಟ್ಟ ಬಾಲಕಿಯೊಬ್ಬಳು ಸೋದರ ಮಾವನ ಮೇಲೆ ಮುನಿಸಿಕೊಂಡಿದ್ದಾರೆ. 

ಬಾಲಕಿ  ಮುನಿಸಿಕೊಂಡಿರುವ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ನಮಗೂ ಈ ರೀತಿ ಮಗಳಿದ್ದಾಳೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು krishi_sr ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಮಾತಾಡಲ್ಲ ಅಂದ್ರ ಮುಗಿತು ಮಾತಾಡಾಂಗಿಲ್ಲ, ಪಕ್ಕ ಅಂದರೆ ಪಕ್ಕ ಟೂ 🤞ನಮ್ ಹುಡುಗಿ ಗುಂಡಮ್ಮ, ಯಾಕೋ ಓನು ಅಯ್ತುಪಾ ಪುಟ್ಟ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಸೋದರ ಮಾವನೊಂದಿಗೆ ಬಾಲಕಿ ಕಾರ್‌ನಲ್ಲಿ ಹೋಗುತ್ತಿರುತ್ತಾಳೆ. ಯುವಕ ನನ್ನೊಂದಿಗೆ ಮಾತನಾಡಲ್ಲವಾ ಎಂದು ಬಾಲಕಿಯನ್ನು ಪ್ರಶ್ನೆ ಮಾಡುತ್ತಾನೆ.  ಅದಕ್ಕೆ ಬಾಲಕಿ, ಪಾನ್ ಪಟ್ಟಿ ಉಳ್ಳಾಗಡ್ಡಿ ಎಂದು ಹೇಳಿ ಟು ಎನ್ನುತ್ತಾಳೆ. ನಿಜವಾಗಲೂ ನನ್ನೊಂದಿಗೆ ಮಾತನಾಡಲ್ಲವಾ ಎಂದು ಕೇಳಿದಾಗ, ಪಕ್ಕಾ ಮಾತಾಡಲ್ಲ ಅಂದ್ರೆ ಪಕ್ಕಾ ಎಂದು ಬಾಲಕಿ ಮುಖ ತಿರುಗಿಸಿಕೊಂಡು ಹೊರಗೆ ನೋಡುತ್ತಾಳೆ. ಮುಖವನ್ನು ನೋಡಲ್ಲ, ಮಾತನಾಡಲ್ಲ ಎಂದು ಬಾಲಕಿ ಹೇಳುತ್ತಾಳೆ. ಆಗ ಸೋದರಮಾವ ಚಾಕ್ಲೆಟ್‌, ಕುರ್ ಕುರ್ರೆ, ಐಸ್ ಕ್ರೀಂ ತೆಗೆದುಕೊ ಎಂದು ಹೇಳುತ್ತಾನೆ. ಆದ್ರೆ ಬಾಲಕಿ ಮಾತ್ರ ಯಾವುದಕ್ಕೂ ಒಪ್ಪಿಲ್ಲ.

ಇದನ್ನೂ ಓದಿ:  ಸರ್ಕಾರಿ ಬಸ್‌ನಲ್ಲಿ ಸೀಟ್‌ ಹಿಡಿಯೋ ಟೆಕ್ನಿಕ್ ಹೇಳಿಕೊಟ್ಟ ಶಿವಪುತ್ರ; ಇದು ಎಲ್ಲರಿಂದಲೂ ಸಾಧ್ಯವಿಲ್ಲವೆಂದ ನೆಟ್ಟಿಗರು

ಸದ್ಯ ಈ ವಿಡಿಯೋ 94 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಈ ವಿಡಿಯೋವನ್ನು ಡಿಸೆಂಬರ್ 26, 2024ರಂದು ಅಪ್ಲೋಡ್ ಮಾಡಲಾಗಿದೆ. ಸೋದರಮಾವನ ಮೇಲೆ ಮುನಿಸಿಕೊಂಡ ಬಾಲಕಿ ಹೆಸರು ಕೃಷಿ. ಈಕೆಯ ಹೆಸರಿನಲ್ಲಿಯೇ ಪೋಷಕರು ಸೋಶಿಯಲ್ ಮೀಡಿಯಾ ಖಾತೆ ಆರಂಭಿಸಿದ್ದಾರೆ. ಕೃಷಿ ಇನ್‌ಸ್ಟಾಗ್ರಾಂ  ಖಾತೆಯನ್ನು 1 ಲಕ್ಷಕ್ಕೂ ಅಧಿಕ ನೆಟ್ಟಿಗರು ಫಾಲೋ ಮಾಡುತ್ತಿದ್ದಾರೆ. ಈ ಹಿಂದೆ ಸೋದರಮಾವನನ್ನೇ ಮದುವೆ ಆಗ್ತೀನಿ ಎಂದು ಹೇಳಿದ್ದ ಕೃಷಿಯ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 

ಇದನ್ನೂ ಓದಿ: 100 ಜನ ಶತ್ರುಗಳಿಗಿಂತ ಇಂಥ 3 ಫ್ರೆಂಡ್ಸ್ ಇದ್ರೆ ಸಾಕು; ಸ್ನೇಹಿತರಿಂದ ಆಸ್ಪತ್ರೆ ಸೇರಿದ ಗೆಳೆಯನ ವಿಡಿಯೋ ನೋಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ