Vande Bharat Express: ನ.10ರಂದು ರಾಜ್ಯಕ್ಕೆ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌!

By Santosh Naik  |  First Published Oct 14, 2022, 3:51 PM IST

ಐದನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅನ್ನು ಚೆನ್ನೈ-ಬೆಂಗಳೂರು ಮತ್ತು ಮೈಸೂರು ನಡುವೆ ಆರಂಭಿಸಲಾಗುತ್ತದೆ.ನವೆಂಬರ್‌ 10ಕ್ಕೆ ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುವ ಸಾಧ್ಯತೆ ಇದೆ.


ಬೆಂಗಳೂರು (ಅ. 14): ದಕ್ಷಿಣ ಭಾರತದ ಮೊಟ್ಟಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ನವೆಂಬರ್‌ 10 ರಂದು ಚಾಲನೆಯಾಗಲಿದೆ. ಚೆನ್ನೈ-ಬೆಂಗಳೂರು-ಮೈಸೂರು ಇಂಟರ್‌ಸಿಟಿ ವಂದೆ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಅಂದಾಜು 483 ಕಿಲೋಮೀಟರ್‌ ಮಾರ್ಗದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸಂಚರಿಸಲಿದೆ ಎಂದು ಸಚಿವ ಸಿಎನ್‌ ಅಶ್ವತ್ಥನಾರಾಯಣ ಟ್ವೀಟ್‌ ಮುಡಲಕ ತಿಳಿಸಿದ್ದಾರೆ. ಇದು ದೇಶದ ಐದನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಆಗಿರಲಿದೆ. ಇದಕ್ಕೂ ಮುನ್ನ ಚುನಾವಣೆಗೆ ತೆರಳುವ ರಾಜ್ಯಗಳಾದ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ಕ್ರಮವಾಗಿ 3ನೇ ಹಾಗೂ ನಾಲ್ಕನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ನರೇಂದ್ರ ಮೋದಿ ಚಾಲನೆ ನೀಡಿದ್ದರು. "ಇಂಟರ್‌ ಸಿಟಿ ಸಂಪರ್ಕ ಹಾಗೂ ವಾಣಿಜ್ಯ ಚಟುವಟಿಕೆಗಳಗೆ ದೊಡ್ಡ ಬೂಸ್ಟ್‌, 5ನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ ನವೆಂಬರ್‌ 10 ರಂದು ಚಾಲನೆ ಸಿಗಲಿದ್ದು, ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸಲಿದೆ. ಈ ಯೋಜನೆಗಾಗಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ. ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ ಟರ್ಮಿನಲ್‌ 2 ಹಾಗೂ ಕೆಂಪೇಗೌಡರ ಪ್ರತಿಮೆಯನ್ನೂ ಅದೇ ದಿನ ಅನಾವರಣ ಮಾಡಲಾಗುತ್ತದೆ' ಎಂದು ಅಶ್ವತ್ಥ ನಾರಾಯಣ ಟ್ವೀಟ್‌ ಮಾಡಿದ್ದಾರೆ.

A great boost to inter-city connectivity & commerce!

The 5th will be launched on 10th Nov' 22, in Chennai-Bengaluru-Mysuru route. Thanking PM avaru for this initiative.

KIA's T2 and will also be unveiled on the same day. pic.twitter.com/ibTigowkYv

— Dr. Ashwathnarayan C. N. (@drashwathcn)

ಚೆನ್ನೈನಿಂದ ಮೈಸೂರಿಗೆ ಬೆಂಗಳೂರು (Chennai-Bengaluru-Mysuru) ಮಾರ್ಗವಾಗಿ ತೆರಳಲಿರುವ ರೈಲು ನವೆಂಬರ್‌ 5 ರಂದು ಟ್ರಯಲ್‌ ರನ್‌ಗಾಗಿ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿಯಿಂದ (ICF) ತೆರಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನವೆಂಬರ್‌ 10 ರಿಂದ ಕಾರ್ಯಾಚರಣೆಯನ್ನು ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharat Express) ಆರಂಭಿಸಲಿದೆ ಎಂದಿದ್ದಾರೆ. ಈ ರೈಲಿನ ವೇಳಾಪಟ್ಟಿಯನ್ನು ಇನ್ನಷ್ಟೇ ಸಿದ್ಧ ಮಾಡಬೇಕಿದೆ ಎಂದು ಮಾಹಿತಿ ನೀಡಿದ್ದಾರೆ. ದೆಹಲಿ ಮತ್ತು ಹಿಮಾಚಲ ಪ್ರದೇಶಗಳ ನಡುವೆ ಓಡುತ್ತಿರುವ ದೇಶದ ನಾಲ್ಕನೇ ವಂದೇ ಭಾರತ್ (ವಿಬಿ) ರೈಲನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಗುರುವಾರ ಹಿಮಾಚಲ ಪ್ರದೇಶದ ಉನಾದಲ್ಲಿ(Una In Himachal Pradesh) ಉದ್ಘಾಟಿಸಿದ ಒಂದು ದಿನದ ನಂತರ ಈ ಬೆಳವಣಿಗೆಯ ಮಾಹಿತಿ ದೊರೆತಿದೆ.

Tap to resize

Latest Videos

ಒಂದೇ ದಿನದಲ್ಲಿ ವಂದೇ ಭಾರತ್‌ ರಿಪೇರಿ, ಎಮ್ಮೆಗಳ ಮಾಲೀಕರ ಮೇಲೆ ಎಫ್‌ಐಆರ್‌!

ಕರ್ನಾಟಕದಲ್ಲಿ (Karnataka) ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ರಾಜ್ಯಕ್ಕೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಗಿಫ್ಟ್‌ ಸಿಕ್ಕಿದೆ. ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಅಂಬ್ ಅಂದೌರಾ (Amb Andura) ರೈಲು ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರದಂದು ಇತ್ತೀಚಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ಈ ರೈಲು ಉನಾ, ಚಂಡೀಗಢ ಮತ್ತು ನವದೆಹಲಿ ನಡುವಿನ ಪ್ರಯಾಣದ ಸಮಯವನ್ನು ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡಲಿದ್ದು ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರಲಿದೆ.ವಂದೇ ಭಾರತ್ 2.0 ರೈಲುಗಳು ಕವಚ್‌ ಎಂಬ ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆಯನ್ನು (TCAS) ಅಳವಡಿಸಿಕೊಂಡಿವೆ, ಇದು ಈ ಹಿಂದಿನ ರೈಲುಗಳಲ್ಲಿ ಇದ್ದಿರಲಿಲ್ಲ. ಇಲ್ಲಿನ ಕೋಚ್‌ಗಳು ಮೂರು ಗಂಟೆಗಳ ಬ್ಯಾಟರಿ ಬ್ಯಾಕಪ್‌ನೊಂದಿಗೆ ಡಿಸಾಸ್ಟರ್ ಲೈಟ್‌ಗಳನ್ನು ಹೊಂದಿದೆ.

ಹಸುವಿಗೆ ಡಿಕ್ಕಿ ಹೊಡೆದು ನುಜ್ಜುಗುಜ್ಜಾದ ವಂದೇಭಾರತ್‌ ಎಕ್ಸ್‌ಪ್ರೆಸ್‌!

ಪ್ರಸ್ತುತ ದೇಶದಲ್ಲಿರುವ ವಂದೇ ಭಾರತ್‌ ರೈಲುಗಳು: ಪ್ರಸ್ತುತ ಭಾರತದಲ್ಲಿ ನಾಲ್ಕು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಚಾಲ್ತಿಯಲ್ಲಿವೆ. ಮೊದಲ ಜನರೇಷನ್‌ನ ಎರಡು ವಂದೇ ಭಾರತ್‌ ರೈಲುಗಳು ಕ್ರಮವಾಗಿ ನವದೆಹಲಿ-ವಾರಣಾಸಿ, ನವದೆಹಲಿ-ಶ್ರೀ ಮಾತಾ ವೈಷ್ಣೋದೇವಿ ಖತ್ರಾಗೆ ಸಂಚಾರ ಮಾಡುತ್ತಿವೆ. ಈ ಎರಡೂ ರೈಲುಗಳು ಸರಾಸರಿ 80-95 ಕಿಲೋಮೀಟರ್‌ ವೇಗದಲ್ಲಿ ಸಂಚಾರ ಮಾಡುತ್ತಿದೆ. ಹಾಗೂ ಪ್ರತಿ ಗಂಟೆಗೆ 130 ಕಿಲೋಮೀಟರ್‌ ವೇಗದೊಂದಿಗೆ ಸಂಚಾರ ನಡೆಸುವ ಸಾಮರ್ಥ್ಯ ಇದಕ್ಕಿದೆ. ಇನ್ನು 2ನೇ ಜನರೇಷನ್‌ನ ಎರಡು ರೈಲುಗಳು ಕ್ರಮವಾಗಿ ಮುಂಬೈ ಸೆಂಟ್ರಲ್‌-ಗಾಂಧಿನಗರ, ನವದೆಹಲಿ-ಆಂಬ್‌ ಅಂದೌರಾ ರೈಲ್ವೆ ನಿಲ್ದಾಣದಲ್ಲಿ ಸಂಚಾರ ಮಾಡುತ್ತಿವೆ. ಸರಾಸರಿ 80-96 ಕಿ.ಮೀ ವೇಗದಲ್ಲಿ ಇವು ಸಂಚಾರ ಮಾಡಲಿದ್ದು, ಗರಿಷ್ಠ 130 ಕಿಲೋಮೀಟರ್‌ ವೇಗದಲ್ಲಿ  ಈ ಮಾರ್ಗದಲ್ಲಿ ಹೋಗುವ ಶಕ್ತಿ ಇದೆ. ಈ ರೈಲುಗಳಿಗೆ ಅಂದಾಜು 180 ಕಿಲೋಮೀಟರ್‌ ವೇಗದಲ್ಲಿ ಹೋಗುವ ಸಾಮರ್ಥ್ಯವಿದ್ದರೂ, ಪ್ರಸ್ತುತ ರೈಲ್ವೆ ಇಲಾಖೆ ಗಂಟೆಗೆ 130 ಕಿಲೋಮೀಟರ್‌ ಮಾತ್ರವೇ ಒಪ್ಪಿತ ವೇಗವಾಗಿ ನೀಡಿದೆ.

click me!