Murugha Mutt: ಮುರುಘಾ ಮಠದಲ್ಲಿ ಹೆಣ್ಣು ಮಗು ಪತ್ತೆ!

By Santosh Naik  |  First Published Oct 14, 2022, 3:26 PM IST

ಮುರುಘಾ ಮಠದ ಶ್ರೀಗಳ ಮೇಲೇ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಬೆನ್ನಲ್ಲಿಯೇ, ಮಠದ ಆವರಣದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿರುವುದು ಸಂಚಲನ ಸೃಷ್ಟಿಸಿದೆ. ಅನಧಿಕೃತವಾಗಿ ಮಗುವನ್ನು ಇರಿಸಿಕೊಂಡ ಆರೋಪವನ್ನು ಮುರುಘಾ ಮಠದ ಮೇಲೆ ಹೊರಿಸಲಾಗಿದೆ.


ಚಿತ್ರದುರ್ಗ (ಅ.14): ಮುರುಘಾ ಮಠದ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿ, ಜಾಮೀನು ಪಡೆಯಲು ಹೋರಾಟ ನಡೆಸುತ್ತಿರುವ ನಡುವೆ ಮಠದ ಅವರಣದಲ್ಲಿ ಶುಕ್ರವಾರ ನಾಲ್ಕೂವರೆಗ ಹೆಣ್ಣು ಮಗು ಪತ್ತೆಯಾಗಿದೆ. ಮಠದ ವಸತಿ ಶಾಲೆಯಲ್ಲಿ ಹೆಣ್ಣು ಮಗು ಪತ್ತೆಯಾಗಿದೆ. ಈ ವಸತಿ ಶಾಲೆಯು ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿದೆ. ಆಗಸ್ಟ್‌ 26ರಂದು ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ವಸತಿ ಶಾಲೆಯಲ್ಲಿದ್ದ ಮಕ್ಕಳು ಶಿಫ್ಟ್‌ ಮಾಡಲಾಗಿತ್ತು. ಮಕ್ಕಳನ್ನು ಸರ್ಕಾರಿ ವಸತಿ ಶಾಲೆ, ಬಾಲ ಮಂದಿರಕ್ಕೆ ಶಿಫ್ಟ್‌ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆ. ಹೆಣ್ಣು ಮಗುವಿನ ಪೋಷಕರ ಬಗ್ಗೆ ವಿವರ ಲಭ್ಯವಿಲ್ಲ. ಪೋಷಕರ ಪತ್ತೆಗಾಗಿ ಮಕ್ಕಳ ರಕ್ಷಣಾ ಘಟಕ ಜಾಹೀರಾತುವನ್ನೂ ನೀಡಿದೆ.  ಚಿಗುರು ಹೆಸರಿನ ನಾಲ್ಕೂವರೆ ವರ್ಷದ ಹೆಣ್ಣು ಮಗು ಇದಾಗಿದ್ದು. ಮಠದ ಹಾಸ್ಟೆಲ್ ನಲ್ಲಿ ಅನಧಿಕೃತವಾಗಿ ಮಗು ಇರಿಸಿಕೊಂಡ ಆರೋಪ ಹೊರಿಸಲಾಗಿದೆ. ಅದಲ್ಲದೆ, ಮಡಿಲು ಯೋಜನೆಗೆ ಮಗುವನ್ನು ಸೇರಿಸದ ಆರೋಪವನ್ನೂ ಮಾಡಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ, ಜಿಲಾಡಳಿತಕ್ಕೆ ದೂರು ನೀಡಿ ತನಿಖೆಗೆ ಆಗ್ರಹಿದ್ದು,  ದೂರು ನೀಡಿದ ಬಳಿಕ ಅಧಿಕಾರಿಗಳು ಕೂಡ ಅಲರ್ಟ್‌ ಆಗಿದ್ದಾರೆ. ಮಠದಲ್ಲಿ ಪುಟ್ಟ ಮಕ್ಕಳನ್ನು ಅನಧಿಕೃತವಾಗಿ ಇರಿಸಲಾಗಿತ್ತೆಂಬ ಆರೋಪವನ್ನು ಮುರುಘಾ ಶ್ರೀಗಳ ಮೇಲೆ ಹೊರಿಸಲಾಗಿದೆ.

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮೀಜಿ (shivamurthy murugha sharanaru) ವಿರುದ್ಧ ಮತ್ತಷ್ಟು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ದೂರು ದಾಖಲಾಗಿದೆ. ಈ ಬಾರಿ ಮಠದಲ್ಲಿ ಕೆಲಸಗಾರರ ಮಕ್ಕಳೇ ದೂರು ಕೊಟ್ಟಿದ್ದು, 7 ಜ‌ರ ಮೇಲೆ ಎಫ್‌ಐಆರ್ ದಾಖಲಾಗಿದೆ. ಒಡನಾಡಿ ಸಂಸ್ಥೆಯ ನೆರವು ಅರಸಿ ಬಂದ ಮಕ್ಕಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿ ನಜರ್‌ಬಾದ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿಸಿದ್ದಾರೆ.

Latest Videos

undefined

Murugha Sri Updates: ಇಂದೂ ಸಿಗಲಿಲ್ಲ ಮುರುಘಾ ಶರಣರಿಗೆ ಜಾಮೀನು, 11 ದಿನ ಜೈಲೇ ಗತಿ

ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೈಸೂರಿನಲ್ಲಿ ಮತ್ತೊಂದು ಎಫ್‌ಐಆರ್ (FIR) ದಾಖಲಾಗಿದ್ದು, ಶ್ರೀಗಳ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಬೃಹನ್ಮಠದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿ ಕೆಲಸದಾಕೆಯ ಇಬ್ಬರು ಮಕ್ಕಳು ಸೇರಿ ನಾಲ್ಕು ಮಕ್ಕಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ದೂರು ನೀಡಲಾಗಿದೆ. ಯುವತಿ ಹಾಗೂ ಆಕೆಯ ತಾಯಿ ಮೈಸೂರಿನ ಒಡನಾಡಿ ಸಂಸ್ಥೆ ಮುಂದೆ ತಮ್ಮ ನೋವು ತೋಡಿಕೊಂಡಿದ್ದು, ನಜರ್‌ಬಾದ್‌ನಲ್ಲಿರುವ (Nazarabad) ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿ ತಮ್ಮ ದೂರು ದಾಖಲಿಸಿದ್ದರು.‌ ಅಧಿಕಾರಿಗಳ ಸಮ್ಮುಖದಲ್ಲಿ ನಜರ್‌ಬಾದ್ ಠಾಣೆಗೆ ಹಾಜರಾದ ಮಗು ಹಾಗೂ ತಾಯಿ 2019 ರಿಂದ ಶ್ರೀಗಳು ನಾಲ್ಕು ಮಕ್ಕಳ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿದರು. ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಮೈಸೂರಿನ ನಜರ್‌ಬಾದ್ ಠಾಣೆ ಪೊಲೀಸರು ತಕ್ಷಣ ಎಫ್‌ಐಆರ್ ದಾಖಲಿಸಿ, ಪ್ರಕ್ರರಣವನ್ನು ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಿದ್ದಾರೆ.

Murugha Mutt; ಮುರುಘಾ ಮಠದಲ್ಲಿ ಗಣ್ಯರ ಜತೆ ಶ್ರೀಗಳಿದ್ದ 47 ಪೋಟೋ ಕಳ್ಳತನ!

ಅಸಮಾಧಾನ ಹೊರಹಾಕಿದ ಒಡನಾಡಿ: ಮಕ್ಕಳಿಗೆ ರಕ್ಷಣೆ ನೀಡಿರುವ ಒಡನಾಡಿ ಸಂಸ್ಥೆ (odanadi seva samsthe) ಮುಖ್ಯಸ್ಥರು ತನಿಖೆ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಎರಡನೇ ಪ್ರಕರಣ ಕೂಡ ಮೊದಲನೇ ಪ್ರಕರಣದ ರೀತಿ ಇದೆ. ಮಠದಲ್ಲಿದ್ದ ಮಕ್ಕಳಿಗೆ ಕೌನ್ಸಿಲಿಂಗ್ ಮಾಡಿದ್ದರೆ ಇನ್ನಷ್ಟು ಪ್ರಕರಣಗಳು ಹೊರಬರುತ್ತಿತ್ತು. ಮಠದಲ್ಲಿ ಇನ್ನಷ್ಟು ವ್ಯಕ್ತಿಗಳನ್ನ ರಕ್ಷಣೆ ಮಾಡುತ್ತಿದ್ದು, ನ್ಯಾಯಾಲಯ ಅಥವಾ ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆ ಆಗಲಿ ಹಾಗೂ  ಮಕ್ಕಳು ಮೈಸೂರಿನಲ್ಲೇ (Mysuru) ಇರಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

click me!