ಪಾಸ್ವಾನ್ ಭಾಷಣದಿಂದಲೇ ಸಿಕ್ಕಿತ್ತು ದಲಿತಗೆ ಸ್ವಾಮೀಜಿ ಪಟ್ಟ

By Kannadaprabha NewsFirst Published Oct 9, 2020, 10:08 AM IST
Highlights

ನಿಧನರಾದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಒಂದೇ ಒಂದು ಭಾಷಣದಿಂದ ದಲಿತ ವ್ಯಕ್ತಿಗೆ ಸ್ವಾಮೀಜಿ ಪಟ್ಟವು ಲಭಿಸಿತ್ತು ಎಂದು ವಚನಾನಂದ ಸ್ವಾಮೀಜಿ ಸ್ಮರಿಸಿದ್ದಾರೆ

ಬೆಂಗಳೂರು (ಅ.09):  ಗುರುವಾರ ದಿವಂಗತರಾದ ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರು 90ರ ದಶಕದಲ್ಲಿ ರಾಜ್ಯಕ್ಕೆ ಆಗಮಿಸಿ ಮಾಡಿದ್ದ ಭಾಷಣದಿಂದ ದಲಿತ ಯುವಕನೊಬ್ಬ ಪ್ರಮುಖ ಶಾಖಾ ಮಠವೊಂದರ ಪೀಠಾಧಿಪತಿ ಆಗಿದ್ದರು’ ಎಂದು ಹರಿಹರ ಪಂಚಮಸಾಲಿ ಪೀಠಾಧಿಪತಿ ಹಾಗೂ ಶ್ವಾಸಗುರು ವಚನಾನಂದ ಸ್ವಾಮೀಜಿ ಸ್ಮರಿಸಿದ್ದಾರೆ.

‘90ರ ದಶಕದಲ್ಲಿ ರಾಜ್ಯದ ಬಸವ ಕಲ್ಯಾಣದಲ್ಲಿ ಏರ್ಪಡಿಸಿದ್ದ ಕಲ್ಯಾಣ ನಾಡಿನ ಶರಣರ ಸಮ್ಮೇಳನದಲ್ಲಿ ಅನೇಕ ಸಾಧು-ಸಂತರ ನಡುವೆ ರಾಮ್‌ ವಿಲಾಸ್‌ ಪಾಸ್ವಾನ್‌ ಸಹ ಭಾಗವಹಿಸಿದ್ದರು. ರಾಮ್‌ ವಿಲಾಸ್‌ ಪಾಸ್ವಾನ್‌ ತಮ್ಮ ಭಾಷಣದ ವೇಳೆ ನೆರೆದಿದ್ದ ಹಿರಿಯ ಸ್ವಾಮೀಜಿಗಳನ್ನು ಉದ್ದೇಶಿಸಿ ‘ನಿಮ್ಮಲ್ಲಿ ಯಾವುದಾದ​ರೂ ಮಠದ ಶಾಖಾ ಮಠಕ್ಕೆ ದಲಿತರನ್ನು ಪೀಠಾಧಿಪತಿಗಳಾಗಿ ನೇಮಿಸಿದ್ದೀರಾ?’ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಎಲ್ಲಾ ಸ್ವಾಮೀಜಿಗಳಲ್ಲಿ ದಿಗ್ಭ್ರಮೆ ಮೂಡಿಸಿತ್ತು. ಈ ವೇಳೆ ಬಾಗ​ಲ​ಕೋ​ಟೆಯ ಇಳ​ಕ​ಲ್‌ನ ವಿಜ​ಯ​ ಮ​ಹಾಂತೇಶ ಪೀಠದ ಮಹಾಂತ ಶಿವ​ಯೋಗಿ ಸ್ವಾಮೀಜಿ ತಾವು ಮಾಡುವುದಾಗಿ ಘೋಷಿಸಿದ್ದರು’ ಎಂದು ವಚ​ನಾ​ನಂದರು ನೆನ​ಪಿ​ಸಿ​ಕೊಂಡಿ​ದ್ದಾ​ರೆ.

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇನ್ನಿಲ್ಲ ...

‘ಇದರಂತೆ ಮೊಳಕಾಲ್ಮುರು ಸಿದ್ದಯ್ಯನ ಕೋಟೆ ಶಾಖಾ ಮಠಕ್ಕೆ ಬೆಳಗಾವಿ ಮೂಲದ ದಲಿತ ಯುವಕನಿಗೆ ಸಂಸ್ಕಾರ ಬೋಧಿಸಿ ಮಠಾಧಿಪತಿಯನ್ನಾಗಿ ನೇಮಿಸಿದ್ದರು. ಇದು ಪಾಸ್ವಾನ್‌ ಅವರ ಮಾತಿನ ಪ್ರಭಾವ ಹಾಗೂ ಇಳ​ಕಲ್‌ ಮಹಾಂತ ಸ್ವಾಮೀಜಿ ಅವರ ದಾರ್ಶ​ನಿಕ ವ್ಯಕ್ತಿ​ತ್ವಕ್ಕೆ ಹಿಡಿದ ಕೈಗ​ನ್ನಡಿ’ ಎಂದು ವಚನಾನಂದ ಸ್ವಾಮೀಜಿ ಸ್ಮರಿಸಿದರು.

click me!