The Kashmir Files ಚಿತ್ರ ಪ್ರದರ್ಶನ ಮಾಡಿ, ಭಟ್ಕಳದಲ್ಲಿ ಚಿತ್ರಮಂದಿರದ ಮುಂದೆ ಪ್ರತಿಭಟನೆ

By Suvarna News  |  First Published Mar 13, 2022, 10:55 PM IST

ಕಾಶ್ಮೀರ ಪಂಡಿತರ ಮೇಲಿನ ದೌರ್ಜನ್ಯದ ಕುರಿತಾದ ಚಿತ್ರ

ದಿ ಕಾಶ್ಮೀರ್ ಫೈಲ್ಸ್ ಚಿತ್ರ ಪ್ರದರ್ಶನಕ್ಕೆ ಆಗ್ರಹ

ಭಟ್ಕಳದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಪ್ರತಿಭಟನೆ


ಭಟ್ಕಳ, ಉತ್ತರ ಕನ್ನಡ (ಮಾ. 13): ಕಾಶ್ಮೀರದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೀತಿದೆ ಎಂದು ಸದಾ ಸುಳ್ಳು ಬೊಗಳುವ ಎಡಪಂಥೀಯ ಬುದ್ಧಿಜೀವಿಗಳ ಮುಖಕ್ಕೆ ಹೊಡೆದಂತಿರುವ ದಿ ಕಾಶ್ಮೀರ ಫೈಲ್ಸ್ (The Kashmir Files) ಚಿತ್ರದ ಬಗ್ಗೆ ಈಗಾಗಲೇ ರಾಷ್ಟ್ರಾದ್ಯಂತ ದೊಡ್ಡ ಮಟ್ಟದ ಚರ್ಚೆ ಪ್ರಾರಂಭವಾಗಿದೆ. ಕಾಶ್ಮೀರದಲ್ಲಿ ಪಂಡಿತರ ಮೇಲಾದ ಹಿಂಸಾಚಾರ, ದೌರ್ಜನ್ಯವನ್ನು ಎಳೆಎಳೆಯಾಗಿ ಬಿಡಿಸಿದ ಮೊದಲ ಪ್ರಯತ್ನ ಎಂಬಂತಿರುವ ದಿ ಕಾಶ್ಮೀರ ಫೈಲ್ಸ್ ಚಿತ್ರ ಈಗಾಗಲೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. ಆದರೆ, ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಇದರ ಪ್ರದರ್ಶನವಾಗುತ್ತಿಲ್ಲ. ಆದರೆ, ಉತ್ತರ ಕನ್ನಡದ ಭಟ್ಕಳ (Bhatkal) ತಾಲೂಕಿನಲ್ಲಿ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲೇಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ.

ನಗರದ ಪುಷ್ಪಾಂಜಲಿ (Pushpanjali) ಚಿತ್ರಮಂದಿರದಲ್ಲಿ ಮಧ್ಯಾಹ್ನ 2.30ಕ್ಕೆ ಪ್ರದರ್ಶನಗೊಳ್ಳುತ್ತಿದ್ದ "ರಾಧೆ ಶ್ಯಾಮ್" (Radhe Shaym) ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿ ಕಾಶ್ಮೀರಿ ಪಂಡಿತರ ಕಣ್ಣೀರಿನ ನೈಜ ಕಥೆಯಾಗಿರುವ, ದೇಶದ ಜನರಿಗೆ ಇದರ ಇತಿಹಾಸವನ್ನು ಮರೆಮಾಚಿರುವ ದಿ ಕಾಶ್ಮೀರ ಫೈಲ್ಸ್ ಚಿತ್ರವನ್ನು ಪ್ರದರ್ಶನ ಮಾಡಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳ (Hindu Activist) ಕಾರ್ಯಕರ್ತರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಚಿತ್ರ ಮಂದಿರದ ಮೇಲ್ವಿಚಾರಕ, ರಾತ್ರಿ 8.45ರ ಪ್ರದರ್ಶನಕ್ಕೆ ದಿ ಕಾಶ್ಮೀರ ಫೈಲ್ಸ್ ಚಿತ್ರವನ್ನು ಪ್ರದರ್ಶನ ಮಾಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ.

ಈ ವೇಳೆ ಮಾತನಾಡಿದ ಮಾಜಿ ಸೈನಿಕ ಶ್ರೀಕಾಂತ್ ನಾಯ್ಕ್, "ದೇಶಭಕ್ತರಿಗಾಗಿಯೇ ಮಾಡಿರುವ ಚಿತ್ರ ಇದು. ನಮ್ಮದೇ ಇತಿಹಾಸದಲ್ಲಿ ನಮ್ಮ ಜನರಿಂದಲೇ ಮುಚ್ಚಿಟ್ಟಂಥ ಕಾಶ್ಮೀರ ಪಂಡಿತರ ನೈಜ ಕಥೆಯನ್ನು ನೋಡುವ ಆಸೆ ಎಲ್ಲರಿಗೂ ಇದೆ.  ಕೆಲವೊಂದು ಚಿತ್ರಮಂದಿರದಲ್ಲಿ ಚಿತ್ರವನ್ನು ಪ್ರದರ್ಶನ ಮಾಡದೇ ಬರೀ ಹೌಸ್ ಫುಲ್ ಬೋರ್ಡ್ ನೇತು ಹಾಕುವ ಮೂಲಕ ಚಿತ್ರವನ್ನು ಜನರಿಗೆ ತಲುಪಿಸದೇ ಇರುವ ಕಾರ್ಯವಾಗುತ್ತಿದೆ. ಹಾಗಾಗಿ ನಮ್ಮೂರಿನ ಚಿತ್ರ ಮಂದಿರದಲ್ಲಿ ಈ ಚಿತ್ರ ಪ್ರದರ್ಶನವಾಗಬೇಕು. ಅದಾಗದೇ ಇದ್ದಲ್ಲಿ ಮುಂದೆ ಆಗುವ ತೊಂದರೆಗಳಿಗೆ ಇವರೇ ಹೊಣೆಗಾರರಾಗುತ್ತಾರೆ' ಎಂದು ಹೇಳಿದರು.

ಪ್ರತಿಭಟನೆಯ ವೇಳೆ ಪಾಂಡುರಂಗ ನಾಯ್ಕ್, ಶ್ರೀನಿವಾಸ್ ಹನುಮಾನ್ ನಗರ, ರಾಜೇಶ್, ಕೃಷ್ಣ ಕಂಚುಗಾರ, ನಾಗೇಶ್ ನಾಯ್ಕ್ ಚೌಥನಿ, ದಿನೇಶ್ ಮೊಗೇರ ಜಾಲಿ, ಮೋಹನ್ ನಾಯ್ಕ್, ಅರುಣ್ ನಾಯ್ಕ್, ವಿವೇಕ್ ನಾಯ್ಕ್, ಬಾಬು ಕಾರಗದ್ದೆ, ವಸಂತ್ ಜಂಬೂರಮಠ ಭಾಗವಹಿಸಿದ್ದರು.

The Kashmir Files: ಕಾಶ್ಮೀರ ಫೈಲ್ಸ್ ಸಿನಿಮಾ ಬಗ್ಗೆ ಬುದ್ಧಿಜೀವಿಗಳೇಕೆ ಉರಿದುಕೊಳ್ತಿದಾರೆ?
ಏನಿದು ದಿ ಕಾಶ್ಮೀರ ಫೈಲ್ಸ್ ಚಿತ್ರ: ಕಾಶ್ಮೀರಿ ಪಂಡಿತರ (Kashmiri Pandiths) ಹತ್ಯಾಕಾಂಡವನ್ನು ಅದೊಂದು ಹತ್ಯಾಕಾಂಡ (Genocide) ಅಂತಲೇ ಕಾಂಗ್ರೆಸ್ (Congress) ನಿಯೋಜಿತ ಆಯೋಗಗಳು ಒಪ್ಪಿಕೊಳ್ಳಲಿಲ್ಲ. ದೇಶವಿದೇಶದ ಪತ್ರಿಕೆಗಳಲ್ಲೂ ಅದು ದೊಡ್ಡ ಮಟ್ಟದಲ್ಲಿ ವರದಿಯಾಗಲಿಲ್ಲ. ಬಾಲಿವುಡ್‌ನಲ್ಲಿ (Bollywood) ಬಂಧ ಕೆಲವು ಫಿಲಂಗಳಲ್ಲಿ, ಅಲ್ಲಿನ ಮುಸ್ಲಿಮರನ್ನೇ ಬಡಪಾಯಿಗಳು ಎಂಬಂತೆ ಚಿತ್ರಿಸಲಾಯಿತಷ್ಟೇ ಹೊರತು, ಅಲ್ಲಿನ ಪಂಡಿತ ಸಮುದಾಯಕ್ಕೆ ಏನಾಯಿತು ಎಂದು ಯಾರೂ ಹೇಳಲೇ ಇಲ್ಲ. ಕಾಶ್ಮೀರಿ ಪಂಡಿತ ಸಮುದಾಯದ ಬಗ್ಗೆ ಹೊರದೇಶಗಳಲ್ಲಿ ಬಿಡಿ, ನಮ್ಮ ದೇಶದ ಒಳಗೂ ತಿಳಿದವರು ಅತ್ಯಲ್ಪ. ಇವರ ಬಲು ಸಂಕಷ್ಟದ ಯಾತನಾಮಯ ದಿನಗಳ ಕತೆಯನ್ನೇ ಈ ಫಿಲಂ ಬಿಚ್ಚಿಡುತ್ತಿದೆ.  

The Kashmir Files: ಕಾಶ್ಮೀರ ಫೈಲ್ಸ್ ಸಿನಿಮಾ ಬಗ್ಗೆ ಬುದ್ಧಿಜೀವಿಗಳೇಕೆ ಉರಿದುಕೊಳ್ತಿದಾರೆ?
32 ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರು ಸಾಮೂಹಿಕವಾಗಿ ಕಾಶ್ಮೀರದಿಂದ ನಿರ್ಗಮಿಸಿದ್ದರು. ಜೆಎನ್‌ಯು ವಿದ್ಯಾರ್ಥಿ ದರ್ಶನ್ ಕುಮಾರ್ ಸುತ್ತ ಕಥೆ ನಡೆಯುತ್ತದೆ. ತನ್ನ ಬಾಲ್ಯದ ಬಗ್ಗೆ ಯಾವ ನೆನಪು ಕೂಡ ಇಲ್ಲದ ವಿದ್ಯಾರ್ಥಿ ದರ್ಶನ್. ಸ್ವತಃ ವಿಧು ವಿನೋದ್ ಚೋಪ್ರಾ ಅವರೇ ಕಾಶ್ಮೀರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೆಡಿಯೋದಲ್ಲಿ ಸಚಿನ್ ಕ್ರಿಕೆಟ್‌ ಬಗ್ಗೆ ಕಾಮೆಂಟ್ರಿ ಕೇಳುತ್ತಿರುವಾಗ ಅಲ್ಲಿದ್ದ ಮುಸ್ಲಿಂ ಹುಡುಗರು ಹಿಂದೂಗಳ ಮೇಲೆ ಹಲ್ಲೆ ಮಾಡುತ್ತಾರೆ. ಆತನಿಗೆ ಪಾಕಿಸ್ತಾನ ಜಿಂದಾಬಾದ್‌ ಎಂದು ಹೇಳುವುದಕ್ಕೆ ಒತ್ತಾಯ ಮಾಡುತ್ತಾರೆ. ಇದಾದ ನಂತರ ಕಾಶ್ಮೀರಿ ಮುಸ್ಲಿಂಮರು ಅಲ್ಲಿನ ಪಂಡಿತರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ ಅನೇಕರ ಮನೆಗೆ ಬೆಂಕಿ ಹಚ್ಚುತ್ತಾರೆ. ಕಾಶ್ಮೀರದಲ್ಲಿ ಇರಬೇಕು ಅಂದ್ರೆ ಮುಸ್ಲಿಂ ಆಗಿರಬೇಕು ಇಲ್ಲ ಸಾಯಬೇಕು ಎಂದು ಒತ್ತಾಯ ಮಾಡುತ್ತಾರೆ. 

ಇಂಥದ್ದೆ ಹಲವಾರು ಸತ್ಯಘಟನೆಗಳನ್ನು ಚಿತ್ರದಲ್ಲಿ ಮರುಸೃಷ್ಟಿ ಮಾಡಲಾಗಿದೆ. ವಿವೇಕ್ ಅಗ್ನಿಹೋತ್ರಿ ಚಿತ್ರವನ್ನಿ ನಿರ್ಮಾಣ ಮಾಡುವುದರೊಂದಿಗೆ ನಿರ್ದೇಶನವನ್ನೂ ಮಾಡಿದ್ದು, ಮಾರ್ಚ್ 11 ರಂದು ದೇಶಾದ್ಯಂತ ಬಿಡುಗಡೆಯಾಗಿದೆ. ಈವರೆಗೂ ಚಿತ್ರ 12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

Tap to resize

Latest Videos

click me!