
ಬೆಂಗಳೂರು (ಮಾ.13): ಸಾಕಷ್ಟು ಕುತೂಹಲ ಕೆರಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (bruhat bengaluru mahanagara palike) ಬಜೆಟ್ ಗೆ ಕೊನೆಗೂ ದಿನಾಂಕ ನಿಗದಿಯಾಗಿದೆ ಎಂದು ವರದಿಯಾಗಿದೆ. ಎಲ್ಲಾ ಅಂದುಕೊಂಡಂತೆ ಆದಲ್ಲಿ ಮಾರ್ಚ್ 28 ರಂದು ಬಿಬಿಎಂಪಿ (BBMP) ಅಯವ್ಯಯ ಮಂಡನೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿಯಿಂದ (Tulasi Mudineni) ಬಜೆಟ್ ಮಂಡನೆಯಾಗಲಿದ್ದು, ಈ ಬಾರಿಯೂ ಕೂಡ ಬಜೆಟ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಬದಲಿಗೆ ಕಳೆದ ಬಾರಿಯಂತೆ ಬಾರಿಯೂ ಕೂಡ ಆನ್ ಲೈನ್ ಮುಖಾಂತರವೇ ಆಯವ್ಯಯ ಮಂಡನೆಯಾಗಲಿದೆ. ಅದಲ್ಲದೆ, ಕಾರ್ಪೋರೇಟರ್ ಇಲ್ಲದ ಬಿಬಿಎಂಪಿಯ 2ನೇ ಬಜೆಟ್ ಇದಾಗಲಿದೆ.
ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಬೆಂಗಳೂರಿಗೆ ಯಾವುದೇ ಹೊಸ ಯೋಜನೆ ಘೋಷಿಸದೇ ಇರಲು ಪಾಲಿಕೆ ನಿರ್ಧರಿಸಿದೆ. ಈ ಹಿಂದೆ ಜನ ಪ್ರತಿಪ್ರತಿನಿಧಿಗಳು ಜಾರಿ ಮಾಡಿದ್ದ ಕೆಲ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಬ್ರೇಕ್ ಸಿಗಲಿದೆ. ಪಿಂಕ್ ಬೇಬಿ, ಮಹಾಲಕ್ಷ್ಮಿ ಯೋಜನೆಗೆ ಈ ಬಾರಿಯ ಬಜೆಟ್‌ಗೆ ಸೇರಿಸದೇ ಇರಲು ಪಾಲಿಕೆ ತೀರ್ಮಾನಿಸಿದೆ. ಇನ್ನು ಪಾಲಿಕೆ ಜಾರಿ ಮಾಡಿದ್ದ ಹಿಂದಿನ ಕೆಲ ಯೋಜನೆಗಳ ಪುನರಾವರ್ತನೆಗೆ ಬಿಬಿಎಂಪಿ ಚಿಂತಿಸಿದೆ. ಕಳೆದ ವರ್ಷವೂ ಕೂಡ ಬಿಬಿಎಂಪಿ ಯಾವುದೇ ಹೊಸ ಯೋಜನೆಗಳಿಲ್ಲದ ಬಜೆಟ್ ಅನ್ನು ಮಂಡನೆ ಮಾಡಲಾಗಿತ್ತು. ಯಾವುದೇ ತೆರಿಗೆಯನ್ನೂ ಹೆಚ್ಚಳ ಮಾಡದೆ, ಹೊಸ ತೆರಿಗೆ ಪ್ರಸ್ತಾಪಿಸದೆ, ಯಾವುದೇ ಪ್ರಮುಖ ಕಾರ್ಯಕ್ರಮ ಹಾಗೂ ಯೋಜನೆಗಳನ್ನೂ ಘೋಷಿಸದೆ ಮುಂಬರುವ ಚುನಾವಣಾ ದೃಷ್ಟಿಯಿಂದ ಆದಾಯವನ್ನು ಕೇವಲ ನಿರ್ವಹಣಾ ವೆಚ್ಚಗಳಿಗೆ ವ್ಯಯಿಸುವುದೇ ಧ್ಯೇಯವನ್ನಾಗಿಸಿಕೊಂಡ 9,291.33 ಕೋಟಿ ಗಾತ್ರದ ಬಿಬಿಎಂಪಿಯ ‘ಬೃಹತ್ ನಿರ್ವಹಣಾ’ ಬಜೆಟ್ ಅನ್ನು ಮಂಡನೆ ಮಾಡಿತ್ತು.
ಆದಾಯಕ್ಕೆ ತಕ್ಕಂತೆ ಬಜೆಟ್ (budget ) ರೂಪಿಸಿ ಅನಗತ್ಯ ಯೋಜನೆಗಳ ಘೋಷಣೆ (announcement) ಕಡಿವಾಣ ಹಾಕುವುದರೊಂದಿಗೆ ಬಿಬಿಎಂಪಿಯಲ್ಲಿ (BBMP) ಆರ್ಥಿಕ ಶಿಸ್ತು (financial discipline) ಕಾಪಾಡಲು ರಾಜ್ಯ ಸರ್ಕಾರ ‘ಬಿಬಿಎಂಪಿ ಹಣಕಾಸು ಹೊಣೆಗಾರಿಕೆ ಹಾಗೂ ಆಯವ್ಯಯ ನಿರ್ವಹಣೆ ನಿಯಮ-2021’ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಬಿಬಿಎಂಪಿ ಆರ್ಥಿಕ ಶಿಸ್ತು ರೂಪಿಸಿ ಬಜೆಟ್ ಮಂಡನೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ.
BBMP ಬಜೆಟ್‌ಗೆ ಸರ್ಕಾರ ಮೂಗುದಾರ
"ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳುವುದಕ್ಕೆ ‘ಹಣಕಾಸು ಹೊಣೆಗಾರಿಕೆ ಹಾಗೂ ಆಯವ್ಯಯ ನಿರ್ವಹಣೆ ನಿಯಮ’ ಜಾರಿಗೊಳಿಸುವುದು ಅತ್ಯವಶ್ಯಕವಾಗಿದೆ. ಆರಂಭದಲ್ಲಿ ಕಷ್ಟಎನಿಸಿದರೆ ನಾಲ್ಕೈದು ವರ್ಷದಲ್ಲಿ ಬಿಬಿಎಂಪಿ ಆರ್ಥಿಕವಾಗಿ ಸ್ವಾವಲಂಬಿಯಾಗಲಿದೆ. ಸಂಪನ್ಮೂಲ ಸಂಗ್ರಹಕ್ಕೂ ದಾರಿಯಾಗಲಿದೆ" ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಹೇಳಿದ್ದರು.
Bengaluru ಒಂದೇ ಸೂರಿನಡಿ ನಗರದ 14 ಇಲಾಖೆಗಳು!
ಆರ್ಥಿಕ ವರ್ಷ ಮುಕ್ತಾಯಕ್ಕೆ ಇನ್ನು ಕೆಲವು ವಾರಗಳು ಮಾತ್ರವೇ ಬಾಕಿ ಉಳಿದಿದ್ದು ಈಗಾಗಲೇ 2022-23ರ ಸಾಲಿನ ಬಿಬಿಎಂಪಿ ಬಜೆಟ್ ಗೆ ಅಂಗೀಕಾರ ಪಡೆಯಬೇಕಿತ್ತು. ಆದರೆ, ಈವರೆಗೂ ಬಜೆಟ್ ಮಂಡನೆಯ ದಿನಾಂಕವೇ ಘೋಷಣೆಯಾಗಿರಲಿಲ್ಲ. 2020ರ ಬಿಬಿಎಂಪಿ ಕಾಯ್ದೆಯ ಸೆಕ್ಷನ್ 194ರ ಪ್ರಕಾರ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಜನವರಿ 15 ರಂದು ಅಥವಾ ನಂತರ ಆದಷ್ಟು ಬೇಗ ಮುಖ್ಯ ಆಯುಕ್ತರು ಬಜೆಟ್ ಗೆ ಸಂಬಂಧಪಟ್ಟಂತೆ ಕಳುಹಿಸುವ ಅಂದಾಜುಗಳನ್ನು ಮತ್ತು ಪ್ರಸ್ತಾವನೆಗಳನ್ನು ಪರಿಶೀಲನೆ ಮಾಡಬೇಕು. ಇತರ ಸ್ಥಾಯಿ ಸಮಿತಿಗಳ ಪ್ರಸ್ತಾವನೆಗಳೇನಾದರೂ ಇದ್ದಲ್ಲಿ ಅವುಗಳನ್ನು ಪಡೆದುಕೊಂಡು ಮುಖ್ಯ ಆಯುಕ್ತರಿಂದ ಇದರ ಕುರಿತು ವಿವರವಾದ ಮಾಹಿತಿ ಪಡೆದು ಬಜೆಟ್ ಅಂದಾಜನ್ನು ಸಿದ್ಧಪಡಿಸಬೇಕು. ಇದರ ಅನ್ವಯ ಹೇಳುವುದಾದರೆ ಮಾರ್ಚ್ 10ರರ ಒಳಗಾಗಿ ಬಿಬಿಎಂಪಿ ಬಜೆಟ್ ಮಂಡನೆಯಾಗಿರಬೇಕಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ