Latest Videos

Karwar ಬಾವಿಗೆ ಬಿದ್ದು ಸಾವು ಕಂಡ ಮೊಸಳೆ!

By Suvarna NewsFirst Published Mar 13, 2022, 9:05 PM IST
Highlights

ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡ ಮೊಸಳೆ

ದಾಂಡೇಲಿಯ ಐಪಿಎಮ್ ಕಂಪನಿಯ ಬಳಿ ನಡೆದ ಘಟನೆ

ಅಂತಿಮ ಕಾರ್ಯ ನೆರವೇರಿಸಿದ ಗ್ರಾಮಸ್ಥರು

ದಾಂಡೇಲಿ (ಮಾ. 13): ಜನವಸತಿ ಪ್ರದೇಶದಲ್ಲಿ ಪಾಳುಬಿದ್ಧ ಸ್ಥಿತಿಯಲ್ಲಿದ್ದ ಬಾವಿಯಲ್ಲಿ ಬಿದ್ದು ಮೊಸಳೆ (Crocodile) ಸಾವಿಗೀಡಾಗಿರುವ ಘಟನೆ ಉತ್ತರ ಕನ್ನಡ (Uttar Kannada) ಜಿಲ್ಲೆಯ ದಾಂಡೇಲಿಯಲ್ಲಿ (Dandeli) ನಡೆದಿದೆ. ಅರಣ್ಯ ಇಲಾಖೆ (Forest Department) ಹಾಗೂ ಸಾರ್ವಜನಿಕರ ಜೊತೆ ಸೇರಿ ಬಾವಿಯಿಂದ ಮೊಸಳೆಯನ್ನು ಮೇಲಕ್ಕಿತ್ತಿದ್ದಲ್ಲದೆ, ನಿರ್ಜನ ಪ್ರದೇಶದಲ್ಲಿ ಅದರ ಅಂತ್ಯಸಂಸ್ಕಾರ ನಡೆಸಲಾಗಿದೆ.

ದಾಂಡೆಲಿ ಬಳಿಕ ಐಪಿಎಂ (IPM) ಕಂಪನಿಯ ವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಜನರ ಅಚ್ಚರಿಗೆ ಕಾರಣವಾಗಿದೆ. ವಸತಿ ಪ್ರದೇಶದಲ್ಲಿ ಮೊಸಳೆ ಹೇಗೆ ಬಂದಿರಬಹುದು ಎನ್ನುವ ಆತಂಕವೂ ಜನರಲ್ಲಿ ಮನೆ ಮಾಡಿದೆ. ಕಾಳಿ ನದಿಯಿಂದ (Kali river) ಜನವಸತಿ ಪ್ರದೇಶದ ಕಡೆಗೆ ಮೊಸಲೆ ಬಂದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಪಾಳು ಬಿದ್ದ ಜಾಗದಲ್ಲಿರುವ ಬಾವಿಗೆ ಬಿದ್ದಿರಬಹುದು ಎಂದು ಅಂದಾಜು ಮಾಡಲಾಗಿದೆ. ಮೊಸಳೆ ಸತ್ತ ನಂತರ ನೀರಲ್ಲಿ ಅದರ ಶರೀರ ತೇಲುತ್ತಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ.

ಸಾಕಷ್ಟು ದಿನಗಳ ಹಿಂದೆಯೇ ಅಲ್ಪಸ್ವಲ್ಪ ನೀರಿದ್ದ ಬಾವಿಗೆ ಮೊಸಳೆ ಬಿದ್ದಿರಬಹುದು, ಆದರೆ, ಅದಕ್ಕೆ ಮೇಲಕ್ಕೆ ಬರಲು ಸಾಧ್ಯವಾಗಿಲ್ಲ. ಬಾವಿಯಲ್ಲಿ ಯಾವ ಆಹಾರವೂ ಸಿಗದೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮೊಸಳೆ ಸತ್ತಿರುವುದು ಕಂಡ ಬಳಿಕ ಸ್ಥಳೀಯ ನಾಗರೀಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕೆಲ ಗಂಟೆಗಳ ಕಾರ್ಯಾಚರಣೆಯ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಯು ಸ್ಥಳೀಯ ನಾಗರೀಕರ ನೆರವಿನೊಂದಿಗೆ ಮೊಸಳೆಯನ್ನು ಬಾವಿಯಿಂದ ಮೇಲೆಕ್ಕೆ ಎತ್ತಲಾಗಿತ್ತು.

ಬಳಿಕ ಸ್ಥಳೀಯ ನಿರ್ಜನ ಪ್ರದೇಶದಲ್ಲಿ ಮೊಸಳೆಯ ಶರೀರವನ್ನು ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಈ ವೇಳೆ ಕಟ್ಟಿಗೆಎಯ ಚಿತೆ ನಿರ್ಮಿಸಿ, ಬೆಂಕಿಯಿಟ್ಟು ಶವಸಂಸ್ಕಾರ ಮಾಡಲಾಗಿದೆ. ಸಾರ್ವಜನಕಿರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ವೇಳೆ ಹಾಜರಿದ್ದರು.

ದಾಂಡೇಲಿ ಮೊಸಳೆಗಳಿಗೆ ಹೆಸರುವಾಸಿಯಾಗಿದೆ. ಕಳೆದ ಜನವರಿಯಲ್ಲಿ ಶಾಸಕ ಆರ್ ವಿ ದೇಶಪಾಂಡೆ (RV Deshpande) ಇಲ್ಲಿನ ದಾಂಡೇಲಪ್ಪ ದೇವಸ್ಥಾನದ ಎದುರು ಕಾಳಿ ನದಿ ತಟದಲ್ಲಿ ನಿರ್ಮಾಣಗೊಂಡಿರುವ ದೇಶದ ಎರಡನೇ ಹಾಗೂ ರಾಜ್ಯದ ಮೊಟ್ಟಮೊದಲ ಮೊಸಳೆ ಪಾರ್ಕ್ ಅನ್ನು ಉದ್ಘಾಟನೆ ಮಾಡಿದ್ದರು. ಕಾಳಿ ನದಿ ಸಮೀಪದ ದಾಂಡೇಲಪ್ಪ ದೇವಸ್ಥಾನ ಮೊಸಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ತಾಣವಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಮೊಸಳೆ ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ. ಸುಮಾರು ಎರಡು ಎಕರೆ ಜಾಗದಲ್ಲಿ ಈ ಪಾರ್ಕ್ ನಿರ್ಮಾಣವಾಗಿದೆ. ಈ ಪಾರ್ಕ್ ಪ್ರದೇಶದಲ್ಲಿ ಮೊಸಳೆ ಸೇರಿದಂತೆ ಕೆಲವು ಕಾಡು ಪ್ರಾಣಿಗಳ ಪ್ರತಿರೂಪಗಳನ್ನು ಸೃಷ್ಟಿಸಲಾಗಿದೆ. ಜತೆಗೆ, ಇಲ್ಲಿ ಮಕ್ಕಳ ಮೋಜಿಗೆ ಅಗತ್ಯವಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Crocodile Park: ದಾಂಡೇಲಿಯಲ್ಲಿ ರಾಜ್ಯದ ಮೊದಲ ಮೊಸಳೆ ಪಾರ್ಕ್
ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಈ ಪಾರ್ಕ್ ನಿರ್ಮಿಸಲಾಗಿದೆ. ಪ್ರಕೃತಿಯ ನಡುವೆ ಪ್ರವಾಸಿಗರು ನೆಮ್ಮದಿಯಾಗಿ ಕಾಲಕಳೆಯುವ ವಾತಾವರಣ ಇಲ್ಲಿ ಸೃಷ್ಟಿಸಲಾಗಿದೆ. 2021ರಲ್ಲೇ ಈ ಪಾರ್ಕ್ ಉದ್ಘಾಟನೆಯಾಗಬೇಕಿದ್ದರೂ ಕೋವಿಡ್‌ನಿಂದಾಗಿ (Covid19) ವಿಳಂಬವಾಗಿತ್ತು. ಸದ್ಯ ಈ ಪಾರ್ಕ್‌ಗೆ ಉಚಿತ ಪ್ರವೇಶವಿದೆ.

Dakshina kannada News : ತೋಟದಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆ; ಅರಣ್ಯ ಇಲಾಖೆಯಿಂದ ರಕ್ಷಣೆ
ಇದಕ್ಕೂ ಮುನ್ನ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಸಮೀಪದ ಕುದೂರು ಎಂಬಲ್ಲಿ ನಿವೃತ್ತ ಯೋಧ (Soldier) ಸದಾಶಿವ ಎಂಬವರ ರಬ್ಬರ್‌ ತೋಟದಲ್ಲಿ ಸುಮಾರು 8 ಅಡಿ ಉದ್ದದ ಐದರಿಂದ ಆರು ವರ್ಷದ ಪ್ರಾಯದ ಮೊಸಳೆ (crocodile) ಕಂಡಬಂದಿತ್ತು. ಅರಣ್ಯ ಇಲಾಖೆ  (Forest Department) ಮೊಸಳೆಯನ್ನು ರಕ್ಷಿಸಲಾಗಿತ್ತು ಇಲ್ಲಿನ ಸಂತೋಷ್‌ ಎಂಬವರು ರಬ್ಬರ್‌ ತೋಟದಲ್ಲಿ ಕೆಲಸ ನಿರ್ವಹಿಸುವ ವೇಳೆ ಮೊಸಳೆ ಪತ್ತೆಯಾಗಿದೆ. ಈ ವಿಚಾರವನ್ನು ಕಡಿರು ದ್ಯಾವರ ಗ್ರಾಮ ಪಂಚಾಯಿತಿ (Grama Panchayat) ಅಧ್ಯಕ್ಷ ಅಶೋಕ್‌ ಕುಮಾರ್‌ ಅವರಿಗೆ ತಿಳಿಸಿದ್ದು ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಇಲಾಖೆಯ ಸಿಬ್ಬಂದಿಗಳು ತಕ್ಷಣ ಆಗಮಿಸಿ ಸ್ಥಳಿಯರ ಸಹಕಾರದಲ್ಲಿ ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

click me!