'ಇವತ್ತು ಸಸ್ಪೆಂಡ್ ಮಾಡಿದ್ದೇನೆ ಅಂತಿದ್ದೀರಿ, ಇಷ್ಟು ದಿನ ಕತ್ತೆ ಕಾಯ್ತಾ ಇದ್ರಾ?' ಸಿಎಂ ವಿರುದ್ಧ ಕೇಂದ್ರ ಸಚಿವ ಜೋಶಿ ಗರಂ!

By Ravi Janekal  |  First Published Aug 26, 2024, 1:34 PM IST

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಬೆದರಿಸುವ ಕೆಲಸ ನಡೆಯುತ್ತಿದೆ. ಅದರ ಭಾಗವಾಗಿ ದರ್ಶನ್ ಜೈಲು ಫೋಟೊ ಬಿಡುಗಡೆಯಾಗಿದೆ. ದರ್ಶನ್ ರೌಡಿ ನಟ, ಸೆಲೆಬ್ರಿಟಿ ಏನಾದರೂ ಕರೀರಿ. ಆದರೆ ಇದು ಸಾಕ್ಷಿದಾರರನ್ನ ಹೆದರಿಸುವ ತಂತ್ರವಿದು ಎಂದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.


ಹುಬ್ಬಳ್ಳಿ (ಆ.26): ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಬೆದರಿಸುವ ಕೆಲಸ ನಡೆಯುತ್ತಿದೆ. ಅದರ ಭಾಗವಾಗಿ ದರ್ಶನ್ ಜೈಲು ಫೋಟೊ ಬಿಡುಗಡೆಯಾಗಿದೆ. ದರ್ಶನ್ ರೌಡಿ ನಟ, ಸೆಲೆಬ್ರಿಟಿ ಏನಾದರೂ ಕರೀರಿ. ಆದರೆ ಇದು ಸಾಕ್ಷಿದಾರರನ್ನ ಹೆದರಿಸುವ ತಂತ್ರವಿದು ಎಂದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಸರ್ಕಾರಕ್ಕೆ ಗಂಭೀರತೆ ಇಲ್ಲ. ನಟ ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ. ದರ್ಶನ್ ರಾಜಾತಿಥ್ಯ, ವಿಡಿಯೋ ಕಾಲ್ ವಿಚಾರದಲ್ಲಿ ಸರ್ಕಾರದ ವೈಫಲ್ಯತೆ ಇದೆ. ಈ ಹಿಂದೆ ಕಾಂಗ್ರೆಸ್ ನ ಅನೇಕ ಶಾಸಕರು, ಸಚಿವರು ಅವರನ್ನ ರಕ್ಷಣೆ ಮಾಡೋಕೆ ಪ್ರಯತ್ನ ಪಟ್ಟಿದ್ದರು. ರಾಜ್ಯದಲ್ಲಿ ಜನಸಾಮಾನ್ಯರು ಮೃತಪಟ್ಟರೆ ಅವರಿಗೆ ನ್ಯಾಯ ಸಿಗೊಲ್ಲ ಅನ್ನೋದು ಇದರಿಂದ ಸ್ಪಷ್ಟವಾಗಿದೆ. ಇದೇ ರೀತಿ ನಾಳೆ ಕೇಸ್ ಹೇಗೆ ನಡೆಸುತ್ತಾರೆ? ರೌಡಿಶೀಟರ್ ಜೊತೆ ಸಿಗರೇಟ್, ಕಾಫಿ ಕುಡಿಯೋ ಫೋಟೊಗಳನ್ನು ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಲಾಗಿದೆ. ಅವರ ಉದ್ದೇಶ ಸಾಕ್ಷ್ಯಗಳನ್ನು ಹೆದರಿಸುವುದಾಗಿದೆ. ನಾನು ರೌಡಿಶೀಟರ್ ಜೊತೆಗಿದ್ದೇನೆ, ಜೈಲಿನಲ್ಲಿ ರಾಜಾತಿಥ್ಯದಲ್ಲಿದ್ದೇನೆ. ಸಾಕ್ಷ್ಯ ಹೇಳಿದವರನ್ನ ಮುಂದೆ ನೋಡ್ಕೊಳ್ತೇನೆ ಅನ್ನೋ ಸಂದೇಶ ಕೊಡಲಾಗಿದೆ. ಸರ್ಕಾರದ ವೈಫಲ್ಯ, ಕೊಲೆಪಾತಕಿಗಳಿಗೆ ಸಹಕಾರ ಎದ್ದು ಕಾಣ್ತಿದೆ. ಇದನ್ನ ನಮ್ಮ ವಿದ್ಯುನ್ಮಾನ ಮಾಧ್ಯಮಗಳು ಇಂಚಿಂಚು ಸುದ್ದಿ ಮಾಡಿ ಅತ್ಯುತ್ತಮ ಕೆಲಸ ಮಾಡಿವೆ ಎಂದರು.

Latest Videos

undefined

ಜೈಲಿನಲ್ಲಿ ದರ್ಶನ್ ಐಷಾರಾಮಿ ಜೀವನ: ಪತ್ನಿ ವಿಜಯಲಕ್ಷ್ಮಿಗೆ ಶಾಕ್, ಇಂದು ಭೇಟಿ ಇಲ್ಲ

ಅಲ್ಲಿದ್ದು ಫೋಟೋ, ವಿಡಿಯೋ ಮಾಡೋದು, ನಟೋರಿಯಸ್ ಜೊತೆ ಇರೋದು ಸಾಕ್ಷಿ ಬೆದರಿಸುವ ತಂತ್ರ. ಒಂದು ತಿಂಗಳ ಮುಂಚೆ ಪ್ರಶ್ನೆ ಪತ್ರಿಕೆ ಪ್ರಿಂಟ್ ಆದ ಹಿನ್ನೆಲೆ ಕೆಎಎಸ್ ಅಭ್ಯರ್ಥಿಗಳು ಹೋರಾಟ ಮಾಡ್ತಿದ್ದಾರೆ. ಇದೆ ಪ್ರಕರಣದಲ್ಲಿರುವ ಒಬ್ಬ ಪೊಲೀಸ್ ಅಧಿಕಾರಿ ದರ್ಪ ತೋರಿದ್ದಾನೆ. ಫ್ರೀಡಂ ಪಾರ್ಕ್ ನಲ್ಲಿ ಕೂತವರನ್ನ ಪೊಲೀಸ್ ಠಾಣೆಯಲ್ಲಿ ಕೂರಿಸ್ತಾರೆ. ಶಾಸಕರು ಹೋದ್ರೆ ಹೋರಾಟಗಾರರನ್ನು ಹೊಡೀತಾರೆ. ದರ್ಶನ್ ಕೇಸ್ ಆದ್ಮೇಲೆ ಆ ಪೊಲೀಸ್ ಹೀರೊ ಅಂದುಕೊಂಡು ಬಿಟ್ಟಿದ್ದಾನೆ. ಇದೆಲ್ಲವನ್ನು ನೋಡಿದ್ರೆ ಸರ್ಕಾರ ಸಂಪೂರ್ಣ ವೈಫಲ್ಯ ಆಗಿದೆ. ಈ ಬಗ್ಗೆ ಸಿಎಂ, ಡಿಸಿಎಂ ಗಂಭೀರವಾಗಿ ತಗೋಳಬೇಕು. ಒಬ್ಬ ಕೊಲೆ ಆರೋಪಿ ಫೋಟೋ ಈ ರೀತಿ ಹೊರ ಬರ್ತಿದೆ ಅಂದ್ರೆ ಜನಸಾಮಾನ್ಯರಿಗಾಗಿ ಸರ್ಕಾರ ನಡೆಸ್ತಿರೋದಾ? ಅಥವಾ ದುಡ್ಡಿದ್ದವರಿಗಾಗಿ ಸರ್ಕಾರ ನಡೆಸ್ತಿರೋದಾ? ಎಂದು ಪ್ರಶ್ನಿಸಿದರು

ಸರ್ಕಾರ ನಡೆಸ್ತಿದ್ದರಾ? ತರಕಾರಿ ಮಾರುತ್ತಿದ್ದೀರಾ?.

ಇಷ್ಟು ದಿನ ಸುಮ್ಮನಿದ್ದು ಈಗ ಮಾಧ್ಯಮಗಳಲ್ಲಿ ವರದಿ ಬಂದ ಮೇಲೆ ಸಸ್ಪೆಂಡ್ ಮಾಡಿದ್ದೇವೆ ಅಂತಿದ್ದೀರಿ ಇಷ್ಟು ದಿನ ಕತ್ತೆ ಕಾದ್ರಾ? ಸರ್ಕಾರಕ್ಕೆ ಒಂದಿಷ್ಟು ನೈತಿಕತೆ ಅನ್ನೋದು ಬೇಡವಾ? ಏನು ಮಾಡ್ತಿದ್ದಾರೆ ಮುಖ್ಯಮಂತ್ರಿಗಳು? ಈ ಸರ್ಕಾರ ದರ್ಶನ್‌ನನ್ನ ಹೊರಬಿಡಬೇಕು ಅಂತ ಸಂಚು ನಡೆಸ್ತಾ ಇದೆ. ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರಿತೇನೆ. ಅವನನ್ನ ಬಿಡಿಸಲು ಪ್ರಯತ್ನ ಮಾಡ್ತಿದ್ದಾರೆ, ನೀವು ಯಾಕೆ ಮೊದಲೇ ಮೊನ್ನೆಚ್ಚರಿಕೆ ವಹಿಸಲಿಲ್ಲ. ಸರ್ಕಾರ ನಡೆಸ್ತಾ ಇದ್ದೀರಾ, ತರಕಾರಿ ವ್ಯಾಪಾರ ಮಾಡ್ತಿದ್ದೀರಾ? ಇದರಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಭಾಗಿಯಾಗಿದ್ದಾರೆ.

ಮಾಜಿ ಸಿಎಂ ಸೆಕ್ಸ್ ವಿಡಿಯೋ ಬ್ಲಾಕ್‌ಮೇಲ್ ತಂತ್ರ ಅಷ್ಟೇ

ಮಾಜಿ ಸಿಎಂ ಒಬ್ಬರದು ಸೆಕ್ಸ್ ವಿಡಿಯೋ ಇದೆ ಅನ್ನೋದು ಬರೀ ಬ್ಲಾಕ್ ಮೇಲ್ ತಂತ್ರ. ಧೈರ್ಯವಿದ್ರೆ ಯಾವ ಮಾಜಿ ಸಿಎಂ ಅಂತ ಬಹಿರಂಗಪಡಿಸಲಿ. ಮುಡಾ, ವಾಲ್ಮೀಕಿ ನಿಗಮ ಹಗರಣದ ದಾಖಲೆ ಕೊಟ್ಟಿದ್ದೇ ಕಾಂಗ್ರೆಸ್ ನವರು. ಈಗ ಮಾಜಿ ಮುಖ್ಯಮಂತ್ರಿ ಸಿಡಿ ಬಿಡುಗಡೆ ಮಾಡುವ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಇದಕ್ಕೆ ಅರ್ಥನೇ ಇಲ್ಲ. ನಾವು ಏನು ಪ್ರತಿಕ್ರಿಯೆ ನೀಡಬೇಕು? ಅವರ ಹಗರಣ ಮುಚ್ಚಿಹಾಕಲು ಇದು ಬ್ಲಾಕ್ ಮೇಲ್ ತಂತ್ರ ಅಷ್ಟೇ. ಅವರ ಹತ್ರ ಇದ್ರೆ ದೂರು ಕೊಡಬೇಕಿತ್ತು. ಯಾಕೆ ಕೊಡಲಿಲ್ಲ? ಬಿಜೆಪಿ ಅವರು ಹೋರಾಟ ಮಾಡ್ತಿದ್ದೀರಿ, ನಾವು ಮಾಡ್ತೇವೆ ಅನ್ನೋ ಲೆಕ್ಕಾಚಾರದಲ್ಲಿ ಈ ರೀತಿ ಬ್ಲಾಕ್ ಮೇಲ್ ಮಾಡಲಾಗ್ತಿದೆ. ನೀವು ನಮ್ಮ ವಿರುದ್ಧ ಇದ್ರೆ, ನಾವು ನಿಮ್ಮನ್ನ ಬಿಡಲ್ಲ ಅಂತ ಹೆದರಿಸೋದು ಮಾಡ್ತಿದ್ದಾರೆ. ಇವರ ವರ್ತನೆ ನೋಡಿದ್ರೆ ಹಗರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗ್ತಿದೆ ಇವತ್ತಿನ ವ್ಯವಸ್ಥೆಯಲ್ಲಿ ತಪ್ಪು ಮಾಡಿದ್ರೆ ಯಾರನ್ನೂ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸರ್ಕಾರ ಬಿಳೋದ್ರೊಳಗೆ ಸಿಕ್ಕಿದ್ದನ್ನ ಬಾಚಿಕೊಳ್ಳೋ ಲೆಕ್ಕಾಚಾರ

ಇನ್ನು ರಾಜ್ಯದಲ್ಲಿ ಹೊಸ ಸಿಎಂ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಹೈಕಮಾಂಡ್ ಇವರ ಜೊತೆಗಿದ್ರೆ  ಯಾಕೆ ಇವರು ದೆಹಲಿಗೆ ಹೋಗಬೇಕಿತ್ತು? ಮುಡಾ ವಾಲ್ಮೀಕಿ ನಿಗಮ ಹಗರಣ ಯಾರು ಮಾಡಿದ್ದು?  ಇವೆಲ್ಲ ನಮ್ಮ ಹತ್ರ ಸಿಕ್ಕಿಲ್ಲ, ಎಲ್ಲಾ ಕಾಂಗ್ರೆಸ್ ನವರೇ ಕೊಟ್ಟಿದ್ದು. ಅದಕ್ಕೆ ರಾಹುಲ್ ಗಾಂಧಿ, ಖರ್ಗೆ ಅವರಿಗೆ ಹೇಳೋಕೆ ಹೋಗಿದ್ದಾರೆ. ಇನ್ನು ಜಿಂದಾಲ್‌ಗೆ ಜಮೀನು ಪರಭಾರೆ ಮಾಡುವ ವಿಚಾರ ಪ್ರಸ್ತಾಪಿಸಿದ ಸಚಿವರು, ಹಿಂದೆ ಕುಮಾರಸ್ವಾಮಿ ಕಾಂಗ್ರೆಸ್ ಬೆಂಬಲದಿಂದ ಸಿಎಂ ಆಗಿದ್ರು. ಇದನ್ನ ಮಾರಾಟಕ್ಕೆ ಕುಮಾರಸ್ವಾಮಿ ಕಳುಹಿಸಿದ್ರು. ಇದಕ್ಕೆ ಎಚ್ ಕೆ ಪಾಟೀಲ್ ಮೀಡಿಯಾ ಆಂದೋಲನ ಆರಂಭಿಸಿದ್ರು. ಜನಾಂದೋಲನ ಮಾಡೋಕೆ ಅವರಿಗೆ ಅಷ್ಟು ಶಕ್ತಿ ಇಲ್ಲ. ಕಾಂಗ್ರೆಸ್‌ನಲ್ಲಿ ಅವರ ಮಾತು  ಯಾರೂ ಕೇಳೋದಿಲ್ಲ. ಇವತ್ತು ಅವರೇ ಬಂದು ಸಮರ್ಥನೆ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿಯೋಷ್ಟರಲ್ಲಿ ಸಿಕ್ಕಿದ್ದನ್ನು ಬಾಚಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ ಎಂದು ಹರಿಹಾಯ್ದರು.

click me!